ಧಾರವಾಡ ವಲಯಕ್ಕೆ ವೈಷ್ಣವಿ ನಾಯಕಿ

ಹಂಚಿಕೊಳ್ಳಿ

ಹುಬ್ಬಳ್ಳಿ
ಧಾರವಾಡದ ಎಸ್.ಡಿ.ಎಂ. ಕ್ರಿಕೆಟ್ ಅಕಾಡೆಮಿಯ ವೈಷ್ಣವಿ ಬಿ. ಹೊಸಳ್ಳಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ೧೫ ವರ್ಷದವರೊಳಗಿನವರಿಗಾಗಿ ಬೆಂಗಳೂರಿನಲ್ಲಿ ನಡೆಸಲಿರುವ ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಧಾರವಾಡ ವಲಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಲಿದ್ದಾರೆ.

ಕೆ.ಎಸ್.ಸಿ.ಎ. ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ಪ್ರಕಟಿಸಿರುವ ೧೫ ಆಟಗಾರ್ತಿಯರು ಹಾಗೂ ೫ ಕಾಯ್ದಿಟ್ಟ ಆಟಗಾರ್ತಿಯರ ಹೆಸರುಗಳು ಇಂತಿವೆ: ವೈಷ್ಣವಿ ಬಿ. ಹೊಸಳ್ಳಿ(ನಾಯಕಿ), ಅಮೃತಾ ವಸಂತಕುಮಾರ ಪಾಟೀಲ(ವಿಕೆಟ್ ಕೀಪರ್), ಪ್ರಿಯಾಂಕಾ ಅನಾಡ(ವಿಕೆಟ್ ಕೀಪರ್), ಸಹನಾ ರಾಮದುರ್ಗ, ಕುಲ್ಸೂಮ್ ಶಿಬಾರಗಟ್ಟಿ(ಐವರೂ ಧಾರವಾಡ), ಐಶ್ವರ್ಯ ಬಾಳಪ್ಪ ಮಾಡಿಗ(ಉಪನಾಯಕಿ), ಅನುಷ್ಕಾ ನಾಯ್ಕ(ಇಬ್ಬರೂ ಬೆಳಗಾವಿ), ಜೋಬಿಯಾ ಲೋಂಡೆವಾಲೆ, ಸಹನಾ ಬಡಿಗೇರ, ಸೋನಾಕ್ಷಿ ಗುಡದೈಗೋಳ, ಗಾಯತ್ರಿ ಆರ್. ಮಾನೆ, ಗ್ರೇಸ್ ರೊಡ್ರಿಗಸ್(ಐವರೂ ಹುಬ್ಬಳ್ಳಿ), ಭೂಮಿಕಾ ಸವಡಿ(ಗದಗ), ಮಾಯಕ್ಕಾ ಮಹಾವೀರ ಕೊರವಿ(ರಾಯಬಾಗ) ಹಾಗೂ ವಿಶಾಖಾ ಕಾಳಪ್ಪನವರ(ಹಾವೇರಿ).

ಕಾಯ್ದಿಟ್ಟ ಆಟಗಾರ್ತಿಯರು:
ಮದಿಯಾ ಪೆಂಡಾರಿ, ಇಂಚರಾ ಮುಕ್ರಿ(ಇಬ್ಬರೂ ಧಾರವಾಡ), ಶ್ರಾವಣಿ ವಿಠೋಬಾ ಪೆಡ್ನೇಕರ, ಆರತಿ ಕದಮ್(ಇಬ್ಬರೂ ಬೆಳಗಾವಿ) ಹಾಗೂ ಅಪ್ಸಾನಾ ಪಿ. ರಾಜಕ್ಕನವರ(ಹುಬ್ಬಳ್ಳಿ). ಬೆಳಗಾವಿಯ ನಾಗೇಶ ಸುತಾರ ತಂಡದ ಜೊತೆ ತರಬೇತುದಾರರಾಗಿ ತೆರಳಲಿದ್ದು, ನಗರದ ಜ್ಯೋತಿ ಯರ್ಲಗಟ್ಟಿ ಮ್ಯಾನೇಜರ್ ಆಗಿರುತ್ತಾರೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *