ರಾಜ್ಯ ಮಟ್ಟದ ಕಾವ್ಯ ಸ್ಪರ್ಧೆಯ ಗೌರವ

ಹಂಚಿಕೊಳ್ಳಿ

ಹಾವೇರಿ
ದೀಪಾವಳಿ ಪ್ರಯುಕ್ತ ರಾಜ್ಯದ ದೈನಿಕ ಹಾಗೂ ಶ್ಯಾಮ್ ಪ್ರಕಾಶನ ನವಿಲೇಹಾಳು ವತಿಯಿಂದ ಹಮ್ಮಿಕೊಂಡಿದ್ದ ‘ರಾಜ್ಯಮಟ್ಟದ ಕಾವ್ಯ ಸ್ಪರ್ಧೆ’ಯಲ್ಲಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹನುಮರಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಸಹ ಶಿಕ್ಷಕ ಮತ್ತು ಕವಿ ಹೊನ್ನಪ್ಪ ಕರೆಕನ್ನಮ್ಮನವರ ಬರೆದ ‘ಒಂಟಿ ಯಾನದ ಸರಕು’ ಎಂಬ ಕವಿತೆ ತೀರ್ಪುಗಾರರ ಮೆಚ್ಚುಗೆ ಪಡೆದಿದ್ದು, ಕವಿ ಹೊನ್ನಪ್ಪ ಗೌರವಕ್ಕೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಬೆಣ್ಣೆನಗರಿ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಜರುಗಿದ ವಿಶೇಷ ಸಮಾರಂಭದಲ್ಲಿ ಖ್ಯಾತ ಕಥೆಗಾರ ಅಮರೇಶ ನುಗದೋಣಿ ಕವಿ ಹೊನ್ನಪ್ಪ ಕರೆಕನ್ನಮ್ಮನವರ ಅವರಿಗೆ ಪ್ರಮಾಣಪತ್ರ ಸ್ಮರಣಿಕೆ ನೀಡಿ ಗೌರವಿಸಿದರು. ಸಭಿತಾ ಬನ್ನಾಡಿ, ಬಿ ಎನ್ ಮಲ್ಲೇಶ್, ಕವಿಗಳಾದ ಸಂತೆಬೆನ್ನೂರು ಪೈಜ್ನಟರಾಜ್, ಪಾಪು ಗುರು, ವಿಲ್ಸನ್ ಕಟೀಲ್ ,ಆನಂದ ಕುಂಚನೂರು, ವಿಜಯಶ್ರೀ ಹಾಲಾಡಿ ಮತ್ತಿತರರು ಇದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *