ಮನೋಹರ ಗ್ರಂಥಮಾಲೆಗೆ ಶ್ರೀ ಸತ್ಯಾತ್ಮತೀರ್ಥರ ಭೆಟ್ಟಿ

ಹಂಚಿಕೊಳ್ಳಿ

ಧಾರವಾಡ
ಮೂವತ್ತೊಂದನೆಯ ಚಾತುರ್ಮಾಸ್ಯವನ್ನು ಕೈಗೊಂಡಿರುವ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಗುರುಗಳು ಮನೋಹರ ಗ್ರಂಥಮಾಲೆಯ ಅಟ್ಟಕ್ಕೆ ಭೆಟ್ಟಿ ಕೊಟ್ಟು ಸಂತೋಷ ವ್ಯಕ್ತಪಡಿಸಿದರು.

ತಾವು ಈ ಹಿಂದೆ ಅಟ್ಟಕ್ಕೆ ಬಂದದ್ದನ್ನು ಸ್ಮರಿಸಿಕೊಂಡ ಸ್ವಾಮೀಜಿಯವರು ಇಂದಿನ ವ್ಯವಸ್ಥಾಪಕರಾದ ಸಮೀರ ಜೋಶಿ ಅವರನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಸಮೀರ ಜೋಶಿ ಅವರು ಮನೋಹರ ಗ್ರಂಥಮಾಲೆ ಇತ್ತೀಚಿಗೆ ಪ್ರಕಟಿಸಿದ ಕೆಲವು ಕೃತಿಗಳನ್ನು ನೀಡಿದರು

ಪಂ.ಸತ್ಯಧ್ಯಾನಾಚಾರ್ಯ ಕಟ್ಟಿ, ಶ್ರೀನಿವಾಸಾಚಾರ್ಯ ಮಾನ್ವಿ, ಆರ್.ಎಂ. ಕುಲಕರ್ಣಿ, ಹನುಮಂತ ಕೊಟಬಾಗಿ, ಪ್ರವೀಣ ದೊಡ್ಡಮನಿ, ಹರ್ಷ ಡಂಬಳ, ಡಾ. ಕೃಷ್ಣ ಕಟ್ಟಿ, ಡಾ. ಹ.ವೆಂ. ಕಾಖಂಡಿಕಿ, ಜಯತೀರ್ಥ ಜಹಗೀರದಾರ, ಶ್ರೀದೇವಿ ಜೋಶಿ, ಗಾಯತ್ರಿ ಜೋಶಿ, ಸೌಮ್ಯ ದೊಡ್ಡಮನಿ, ರಾಧಿಕಾ ಕಾಖಂಡಿಕಿ, ಶ್ವೇತಾ ಜೋಶಿ ಮೊದಲಾದವರು ಉಪಸ್ಥಿತರಿದ್ದು ಗುರುಗಳ ಆಶೀರ್ವಾದ ಪಡೆದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *