ಐಚಿ-ನಾಗೋಯಾ ಏಷ್ಯನ್ ಕ್ರೀಡಾ ಕೂಟಕ್ಕೆ ವೈಭವಯುತ ತೆರೆ, ೪ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ ಭಾರತ

ಹಂಚಿಕೊಳ್ಳಿ

ನಾಗೋಯಾ
ಎರಡು ವಾರಗಳ ಕಾಲ ನಡೆದು ರೋಚಕ ಕ್ರೀಡಾ ಕದನಕ್ಕೆ ಸಾಕ್ಷಿಯಾದ ಐಚಿ-ನಾಗೋಯಾ ಏಷ್ಯನ್ ಕ್ರೀಡಾಕೂಟಕ್ಕೆ ವೈಭವಯುತ ತೆರೆ ಬಿದ್ದಿದೆ.

ಏಷ್ಯನ್ ಕ್ರೀಡೆಗಳ ಈ ೨೦ನೇ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ೨೧ ಚಿನ್ನ, ೨೭ ಬೆಳ್ಳಿ ಹಾಗೂ ೩೭ ಕಂಚಿನ ಪದಕಗಳೂ ಸೇರಿದಂತೆ ಒಟ್ಟು ೮೫ ಪದಕಗಳಿಸಿ ಗೌರವಯುತ ನಾಲ್ಕನೇ ಸ್ಥಾನದೊಂದಿಗೆ ತನ್ನ ಅಭಿಯಾನ ಮುಗಿಸಿದೆ.

ನಾಗೋಯಾದ ಪಲೋಮಾ ಮಿಜುಹೊ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಮಧ್ಯಾಹ್ನ ೨.೩೦ಕ್ಕೆ ಆರಂಭವಾದ ಸಮಾರೋಪ ಕಾರ್ಯಕ್ರಮದಲ್ಲಿ ಭಾರತದ ಮಹಿಳಾ ಧ್ವಜಧಾರಿಯಾಗಿ ಶೂಟಿಂಗ್ ತಾರೆ ನೀರು ಧಂಡಾ ಅವರು ತ್ರಿವರ್ಣ ಧ್ವಜವನ್ನು ಹೊತ್ತು ಹೆಮ್ಮೆಯಿಂದ ಮುನ್ನಡೆದರು.

ಸಮಾರಂಭದಲ್ಲಿ ಕ್ರೀಡಾಪಟುಗಳ ಪಥ ಸಂಚಲನ ಮತ್ತು ದೋಹಾ-೨೦೩೦ ಸಂಘಟನಾ ಸಮಿತಿಗೆ ಏಷ್ಯನ್ ಕ್ರೀಡಾಕೂಟದ ಧ್ವಜದ ಔಪಚಾರಿಕ ಹಸ್ತಾಂತರ ಸೇರಿದಂತೆ ಸಂಪ್ರದಾಯಿಕ ಸಮಾರೋಪ ಕಾರ್ಯಕ್ರಮಗಳು ನಡೆದು ಎಲ್ಲರ ಮನಸೂರೆಗೊಂಡವು.

ಒಟ್ಟು ೩೪೧ ಪದಕಗಳನ್ನು ಬಾಚಿಕೊಂಡ ಚೀನಾ(೧೬೯ ಚಿನ್ನ, ೮೯ ಬೆಳ್ಳಿ, ೮೩ ಕಂಚು) ಅಗ್ರಸ್ಥಾನದಲ್ಲುಳಿದರೆ, ಆತಿಥೇಯ ಜಪಾನ(೮೩ ಚಿನ್ನ, ೯೫ ಬೆಳ್ಳಿ, ೯೧ ಕಂಚು) ಒಟ್ಟು ೨೬೮ ಪದಕಗಳೊಡನೆ ಎರಡನೇ ಹಾಗೂ ದಕ್ಷಿಣ ಕೊರಿಯಾ(೩೯ ಚಿನ್ನ, ೪೩ ಬೆಳ್ಳಿ, ೬೮ ಕಂಚು) ಒಟ್ಟು ೧೫೦ ಪದಕಗಳೊಂದಿಗೆ ಅನುಕ್ರಮವಾಗಿ ಎರಡು ಹಾಗೂ ಮೂರನೇಯದಾದವು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *