ದಿ. ಹರೀಶ ಕೋಪರ್ಡೆ ಸ್ಮರಣಾರ್ಥ ಗಾಂಧಿನಗರದಲ್ಲಿ ಬಸ್ ತಂಗುದಾಣ ನಿರ್ಮಾಣ
ಹಂಚಿಕೊಳ್ಳಿಸಾರ್ವಜನಿಕರ ಅನುಕೂಲಕ್ಕಾಗಿ ಕೋಪರ್ಡೆ ಕುಟುಂಬದಿಂದ ₹5 ಲಕ್ಷ ವೆಚ್ಚದಲ್ಲಿ ಸೇವಾ ಕಾರ್ಯ ಧಾರವಾಡದಿವಂಗತ ಹರೀಶ ಕೋಪರ್ಡೆ ಅವರ ಸ್ಮರಣಾರ್ಥ ಧಾರವಾಡದ ಗಾಂಧಿನಗರದಲ್ಲಿ ರೋಟರಿ ಸಂಸ್ಥೆ ಹಾಗೂ ಕೋಪರ್ಡೆ ಕುಟುಂಬದ ಸಹಯೋಗದಲ್ಲಿ ನಿರ್ಮಿಸಲಾದ ಬಸ್ ತಂಗುದಾಣದ ಉದ್ಘಾಟನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮವು ಕೋಡಿಮಠದ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳ ಅಮೃತಹಸ್ತದಿಂದ ನೆರವೇರಿತು. ಆಶೀರ್ವಚನ ನೀಡಿದ ಶ್ರೀಗಳು, ಪುತ್ರನ ಸ್ಮರಣಾರ್ಥ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ತಂಗುದಾಣ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. “ತೋಡಿದ ಬಾವಿಗೆ ಜಲವೇ ಸಾಕ್ಷಿ, ಮಾಡಿದ ಕಾರ್ಯಕ್ಕೆ ಮನವೇ…
