ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಶಿರಸಿ, ಚಿಕ್ಕೋಡಿ, ಗದಗ ಚಾಂಪಿಯನ್
ಹಂಚಿಕೊಳ್ಳಿಧಾರವಾಡ2026-27 ನೇ ಸಾಲಿನ 14 ಹಾಗೂ 17 ವಯೋಮಿತಿಯ ಬಾಲಕ-ಬಾಲಕಿಯರ ಬೆಳಗಾವಿ ವಿಭಾಗಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಶಿರಸಿ, ಚಿಕ್ಕೋಡಿ ಹಾಗೂ ಗದಗ ಜಿಲ್ಲೆಯ ತಂಡಗಳು ಟೀಮ್ ಚಾಂಪಿಯನ್ ಆಗಿ ಹೊರಹೊಮ್ಮಿವೆ. ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಎಸ್ ಜಿ ವಿ ಪ್ರೌಢಶಾಲಾ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಅಂತಿಮ ಪಂದ್ಯಾವಳಿಯಲ್ಲಿ ಸೆಣಿಸಿ, ಚಾಂಪಿಯನ್ ಪಟ್ಟ ಅಲಂಕರಿಸಿದವು. 14 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶಿರಸಿ ತಂಡವು ಟೀಮ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಬಾಗಲಕೋಟೆಯ ತಂಡವು ರನ್ನರ್ ಅಪ್…
