ಬರ ನಿರ್ವಹಣೆ: ಮೊದಲು SDRF ನಿಧಿ ನೀಡಲಿ ರಾಜ್ಯ ಸರ್ಕಾರ

ಹಂಚಿಕೊಳ್ಳಿ

ಹಂಚಿಕೊಳ್ಳಿ• ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ• ರಾಜ್ಯ ಸರ್ಕಾರಕ್ಕೆ ಬರ ಪರಿಸ್ಥಿತಿಯ ಗಂಭೀರತೆಯೇ ಇಲ್ಲ• ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆಗಿದ್ದಕ್ಕೆ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ• ಕಸ್ತೂರಿ ರಂಗನ್ ವರದಿ; ಕರ್ನಾಟಕ, ಜನರ ಹಿತಕ್ಕೆ ಕೇಂದ್ರ ಸರ್ಕಾರ ಯಾವತ್ತೂ ಬದ್ಧ ಬೆಂಗಳೂರುಬರ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಗಂಭೀರತೆಯೇ ಇಲ್ಲ. ಹಾಗಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಮೊದಲು SDRF ನಿಧಿ ಬಿಡುಗಡೆ ಮಾಡಲಿ ನೋಡೋಣ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದರು. ಬೆಂಗಳೂರಿನಲ್ಲಿ…


ಹಂಚಿಕೊಳ್ಳಿ
Read More

ಬರ ಕುರಿತು ಚರ್ಚೆ; ಅಧಿವೇಶನ ಒಂದು ದಿನ ವಿಸ್ತರಣೆ: ಸಿಎಂ‌ ಡಿಕೆಶಿ

ಹಂಚಿಕೊಳ್ಳಿ

ಹಂಚಿಕೊಳ್ಳಿದೆಹಲಿಗೆ ಸರ್ವಪಕ್ಷ ನಿಯೋಗ ಹೋಗಲು ಎಲ್ಲಾ ನಾಯಕರು ಸಮ್ಮತಿ ಬೆಂಗಳೂರು“ರಾಜ್ಯದಲ್ಲಿ ಬರಗಾಲದ ತೀವ್ರತೆ ಹೆಚ್ಚಿದೆ. 200ಕ್ಕೂ ಹೆಚ್ಚು ತಾಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿದ್ದು, ಪರಿಸ್ಥಿತಿ ತೀವ್ರವಾಗಿದೆ. ಆದ ಕಾರಣ‌ ಬರಗಾಲದ ಕುರಿತಾದ ಚರ್ಚೆ ನಡೆಸಲು ಅಧಿವೇಶನವನ್ನು ಒಂದು ದಿನ ವಿಸ್ತರಿಸಲಾಗಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. “ಶಾಸಕರು ಮತ್ತು ಜನಪ್ರತಿನಿಧಿಗಳು ಬರ ಕುರಿತು ವಿವರವಾಗಿ ಚರ್ಚಿಸಲು ಬಯಸಿದ್ದಾರೆ. ಸಚಿವರು ಹಾಗೂ ಉಪಮುಖ್ಯಮಂತ್ರಿಗಳು ಶಾಸಕರ ಪ್ರಶ್ನೆಗಳು ಮತ್ತು…


ಹಂಚಿಕೊಳ್ಳಿ
Read More

ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಗಂಭೀರ ಪ್ರಶ್ನೆಗಳು: ಸಿದ್ದರಾಮಯ್ಯ

ಹಂಚಿಕೊಳ್ಳಿ

ಹಂಚಿಕೊಳ್ಳಿಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಿ ತನಿಖೆಗೆ ಆದೇಶಿಸಬೇಕು ಎಂದು ರಾಷ್ಟ್ರಪತಿಗಳಿಗೆ ಮಾಜಿ ಮುಖ್ಯಮಂತ್ರಿ ಆಗ್ರಹ ಬೆಂಗಳೂರುಚುನಾವಣಾ ಆಯೋಗದ ಇತ್ತೀಚಿನ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ಮತದಾನವೇ ಭಾರತದ ಪ್ರಜಾಪ್ರಭುತ್ವದ ಆತ್ಮ. ಮತದಾರರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಅನುಮಾನ…


ಹಂಚಿಕೊಳ್ಳಿ
Read More

ಯಶವಂತರಾಯಗೌಡ ಪಾಟೀಲ್‌‌ರು ರಾಜೀನಾಮೆಗೆ ಮುಂದಾಗಿದ್ದು ರೈತರ ಬದುಕಿಗಾಗಿ: ಸಿಎಂ ಡಿ.ಕೆ. ವ್ಯಾಖ್ಯಾನ

ಹಂಚಿಕೊಳ್ಳಿ

ಹಂಚಿಕೊಳ್ಳಿಬೆಂಗಳೂರು“ಯಶವಂತರಾಯಗೌಡ ಪಾಟೀಲ್ ಅವರು ರಾಜೀನಾಮೆಗೆ ಮುಂದಾಗಿದ್ದು ರೈತರ ಬದುಕಿಗಾಗಿಯೇ ಹೊರತು, ಈಶ್ವರಪ್ಪ ಅವರು ಹೇಳಿದ್ದ 15 ಜನರನ್ನು ಕೊಟ್ಟು, ಕೊಳ್ಳುವ ರಾಜೀನಾಮೆ ರೀತಿ ಅಲ್ಲ” ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು. ವಿಧಾನಸಭೆಯಲ್ಲಿ ಬುಧವಾರ ಬರ ವಿಚಾರ ಕುರಿತ ಚರ್ಚೆ ವೇಳೆ ವಿರೋಧ ಪಕ್ಷಗಳ ನಾಯಕರು ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ಪತ್ರದ ಪ್ರತಿಯನ್ನು ಪ್ರದರ್ಶಿಸಿ ಗದ್ದಲ ಎಬ್ಬಿಸಿದಾಗ, ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ವಿರೋಧ ಪಕ್ಷದವರು ಬಹಳ ಆತುರದಲ್ಲಿ ರಾಜಕಾರಣ ಮಾಡಲು ಬಡಿದಾಡುತ್ತಿದ್ದಾರೆ….


ಹಂಚಿಕೊಳ್ಳಿ
Read More

ಯುಕೆಪಿ ನಿವೇಶನ ಹಂಚಿಕೆ ಅಕ್ರಮ: ತಪ್ಪಿತಸ್ಥರನ್ನು ಮುಲಾಜಿಲ್ಲದೆ ಜೈಲಿಗಟ್ಟಿ – ಸಚಿವ ಎನ್. ಚಲುವರಾಯಸ್ವಾಮಿ ಖಡಕ್ ಸೂಚನೆ

ಹಂಚಿಕೊಳ್ಳಿ

ಹಂಚಿಕೊಳ್ಳಿಕೋಲ್ಹಾರ ಪುನರ್ವಸತಿ ಕೇಂದ್ರದ ಅಕ್ರಮಕ್ಕೆ ಸಿಒಡಿ ಚುರುಕು: ಅಕ್ಟೋಬರ್ ಅಂತ್ಯದೊಳಗೆ ಸಮಸ್ಯೆ ಇತ್ಯರ್ಥಕ್ಕೆ ಗಡುವು ಬೆಂಗಳೂರುಯುಕೆಪಿ (ಕೃಷ್ಣಾ ಮೇಲ್ದಂಡೆ ಯೋಜನೆ) ಹಂತ 1 ಹಾಗೂ 2 ರಲ್ಲಿ ಮುಳುಗಡೆ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗಿರುವ ನಿವೇಶನಗಳಲ್ಲಿ ನಡೆದಿರುವ ಅಕ್ರಮಗಳಲ್ಲಿ ಭಾಗಿಯಾಗಿರುವವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಸಿಐಡಿ (ಈ ಹಿಂದೆ ಸಿಒಡಿ ) ತನಿಖೆಯನ್ನು ಇನ್ನಷ್ಟು ವೇಗಗೊಳಿಸಿ, ಅಕ್ರಮಗಳಿಗೆ ಸಹಕರಿಸಿದವರನ್ನು ಮುಲಾಜಿಲ್ಲದೆ ಜೈಲಿಗಟ್ಟಿ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಸೂಚಿಸಿದರು. ​ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1 ಮತ್ತು…


ಹಂಚಿಕೊಳ್ಳಿ
Read More

ನಂದಿನಿ ಹಾಲಿನ ದರ ಹೆಚ್ಚಳ; ಸರ್ಕಾರಕ್ಕೆ ಒಕ್ಕೂಟಗಳ ಮನವಿ

ಹಂಚಿಕೊಳ್ಳಿ

ಹಂಚಿಕೊಳ್ಳಿಹಾಲು ಉತ್ಪಾದನೆಗೆ ತಗಲುವ ವೆಚ್ಚ ಸೇರಿ, ಸಮಗ್ರ ಮಾಹಿತಿ ಒದಗಿಸಲು ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ಬೆಂಗಳೂರುನಂದಿನಿ ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್ ಗೆ ರೂ.8ರಿಂದ ರೂ.10ರಷ್ಟು ಹೆಚ್ಚಿಸಲು ಕರ್ನಾಟಕ ರಾಜ್ಯದ ಸಹಕಾರ ಹಾಲು ಉತ್ಪಾದಕರ ಒಕ್ಕೂಟಗಳ ನಿಯೋಗ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ. ವಿಧಾನಸೌಧದಲ್ಲಿ ಶಿವಕುಮಾರ್ ಅವರನ್ನು ಹಾಲು ಒಕ್ಕೂಟಗಳ ನಿಯೋಗವು ಮಂಗಳವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು, “ಕಳೆದ…


ಹಂಚಿಕೊಳ್ಳಿ
Read More

ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಚಿಂತನೆ: ಸಿಎಂ ಡಿಕೆ ಶಿವಕುಮಾರ್

ಹಂಚಿಕೊಳ್ಳಿ

ಹಂಚಿಕೊಳ್ಳಿಹಗರಣದ‌ ತನಿಖಾಧಿಕಾರಿಗಳ ನೇಮಕದ‌‌ ಸ್ವಾತಂತ್ರ್ಯ ನಮಗೆ ಕೊಡಬೇಕಿತ್ತು ಬೆಂಗಳೂರುಕೆಪಿಎಸ್‌ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಮಂಗಳವಾರ ನಡೆದ ಕಿಯೋನಿಕ್ಸ್‌ನ 50ನೇ ಸಂಸ್ಥಾಪನಾ ದಿನಾಚರಣೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ‌ನೀಡಿದರು. “ಕೆಪಿಎಸ್ ಸಿಯಲ್ಲಿ ಖದೀಮರು ಸೇರಿಕೊಂಡಿದ್ದಾರೆ. ನಾವು ನಂಬಿಕೆ ಇಟ್ಟು ಆಯ್ಕೆ ಮಾಡಿದ ಅಧಿಕಾರಗಳು ಹೀಗೆಲ್ಲಾ ಮಾಡುತ್ತಿದ್ದಾರೆ. ಅಲ್ಲಿರುವ ಸದಸ್ಯರು ಅಂಗಡಿಯನ್ನೇ ತೆರೆದಿದ್ದಾರೆ. ನಮ್ಮ ಪೊಲೀಸ್ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಒಂದು…


ಹಂಚಿಕೊಳ್ಳಿ
Read More

ಕೇಂದ್ರದ ಮಾರ್ಗಸೂಚಿಯಂತೆಯೇ ಬರ ಘೋಷಣೆ

ಹಂಚಿಕೊಳ್ಳಿ

ಹಂಚಿಕೊಳ್ಳಿಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ; ಪರಿಸ್ಥಿತಿಗೆ ಅನುಗುಣವಾಗಿ ಮತ್ತಷ್ಟು ತಾಲೂಕುಗಳ ಸೇರ್ಪಡೆ: ಡಾ. ಜಿ. ಪರಮೇಶ್ವರ ಬೆಂಗಳೂರು ಕಸ್ತೂರಿ ರಂಗನ್ ವರದಿ ಹಾಗೂ ರಾಜ್ಯದಲ್ಲಿ ಉಂಟಾಗಿರುವ ಗಂಭೀರ ಬರ ಪರಿಸ್ಥಿತಿಯ ಕುರಿತು ವಿಧಾನಮಂಡಲದಲ್ಲಿ ಪಕ್ಷಾತೀತವಾಗಿ ಸಮಗ್ರ ಚರ್ಚೆ ನಡೆಸಿ, ರಾಜ್ಯದ ಹಿತಾಸಕ್ತಿಗೆ ಪೂರಕವಾದ ಒಮ್ಮತದ ನಿರ್ಣಯ ಕೈಗೊಳ್ಳಬೇಕಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಹೇಳಿದರು. ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯ 7ನೇ ಕರಡು ಪ್ರತಿಗೆ ಸಂಬಂಧಿಸಿದಂತೆ ರಾಜ್ಯ…


ಹಂಚಿಕೊಳ್ಳಿ
Read More

ಪದವೀಧರ-ಶಿಕ್ಷಕರ ಕ್ಷೇತ್ರಗಳ ಪರಿಷತ್ ಚುನಾವಣೆ ಘೋಷಣೆ

ಹಂಚಿಕೊಳ್ಳಿ

ಹಂಚಿಕೊಳ್ಳಿಅ.23ರಂದು ಮತದಾನ; ನ.11ರಂದು ನಿವೃತ್ತಿಯಾಗಲಿರುವ ಕರ್ನಾಟಕದ ನಾಲ್ವರು ಸದಸ್ಯರ ಸ್ಥಾನಗಳಿಗೆ ಚುನಾವಣೆ ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಆಯೋಗದ ಪ್ರಕಟಣೆಯ ಪ್ರಕಾರ, ಕರ್ನಾಟಕದ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ದಕ್ಷಿಣ-ಪೂರ್ವ ಪದವೀಧರರ ಕ್ಷೇತ್ರದಿಂದ ಚಿದಾನಂದ ಎಂ. ಗೌಡ (ಅಧ್ಯಕ್ಷರು), ಪಶ್ಚಿಮ ಪದವೀಧರರ ಕ್ಷೇತ್ರದಿಂದ ಎಸ್.ವಿ. ಸಂಕನೂರು, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶಶಿಲ್ ಜಿ. ನಮೋಶಿ ಹಾಗೂ…


ಹಂಚಿಕೊಳ್ಳಿ
Read More

ಮಾಜಿ ಶಾಸಕ ಶಿರಿಯಣ್ಣವರ ಸರಳ ಸಜ್ಜನ ರಾಜಕಾರಣಿ- ಸಿಎಂ ಸ್ಮರಣೆ

ಹಂಚಿಕೊಳ್ಳಿ

ಹಂಚಿಕೊಳ್ಳಿಬೆಂಗಳೂರು‘ಮಾಜಿ ಶಾಸಕ ಡಾ. ಆರ್.ಬಿ.ಶಿರಿಯಣ್ಣವರ ಸರಳ ವ್ಯಕ್ತಿ, ಸಜ್ಜನ ಅಪರೂಪದ ರಾಜಕಾರಣಿಯಾಗಿದ್ದರು’ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಮರಿಸಿದರು.  ಸೋಮವಾರ ಆರಂಭವಾದ ವಿಶೇಷ ಅಧಿವೇಶನದಲ್ಲಿ ವಿಧಾನಸಭೆಯ ಸಂತಾಪ ಸೂಚಕ ನಿರ್ಣಯದ ಮೇಲೆ ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಡಾ. ಆರ್.ಬಿ.ಶಿರಿಯಣ್ಣವರ ಬಗ್ಗೆ ಸಿಎಂ ಮಾತನಾಡಿದರು. ‘ಡಾ. ಆರ್.ಬಿ. ಶಿರಿಯಣ್ಣವರ ನಿಧನದಿಂದ ತುಂಬಲಾರದ ನಷ್ಟವಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಜನಿಸಿ 2004ರಲ್ಲಿ ನವಲಗುಂದ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆರ್.ಬಿ.ಶಿರಿಯಣ್ಣವರ ತಮ್ಮ ಜನಪರ ಕಾರ್ಯಗಳಿಂದ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು’ ಎಂದರು….


ಹಂಚಿಕೊಳ್ಳಿ
Read More