ಧಾರವಾಡ ಜೆ.ಎಸ್.ಎಸ್. ಕಾಲೇಜು ಎರಡು ವರ್ಷಗಳ ನಂತರ ಮತ್ತೆ ಕ.ವಿ.ವಿ. ಮಹಿಳಾ ವಾಲಿಬಾಲ್ ಚಾಂಪಿಯನ್ !!
ಹಂಚಿಕೊಳ್ಳಿಧಾರವಾಡಎರಡು ವರ್ಷಗಳ ಹಿಂದೆ ಪ್ರಶಸ್ತಿ ವಿಜೇತರಾಗಿ ಕಳೆದೆರಡು ವರ್ಷಗಳಿಂದ ರನ್ನರ್-ಅಪ್’ ಸ್ಥಾನಕ್ಕೇ ತೃಪ್ತಿ ಪಟ್ಟುಕೊಂಡಿದ್ದ ನಗರದ ಜೆ.ಎಸ್.ಎಸ್. ಕಾಲೇಜು ತಂಡ ಕರ್ನಾಟಕ ವಿಶ್ವವಿದ್ಯಾಲಯ ಮಹಿಳೆಯರ ಅಂತರ ಕಾಲೇಜು ವಾಲಿಬಾಲ್ ಪ್ರಶಸ್ತಿಯ ಮೇಲೆ ಮತ್ತೆ ತನ್ನ ಅಧಿಕಾರ ಜಮಾಯಿಸಿದೆ. ಟೂರ್ನಿಯಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಜಯಿಸಿದ ಸುಷ್ಮಾ ಬೆಂಗೇರಿ ಹಾಗೂ ಬೆಸ್ಟ್ ಪಾಸರ್’ ಪ್ರಶಸ್ತಿಯನ್ನು ಬಾಚಿಕೊಂಡ ಕಾವೇರಿ ಬಡಿಗೇರ ಅವರ ಭರ್ಜರಿ ಆಟದ ನೆರವಿನಿಂದ ಜೆ.ಎಸ್.ಎಸ್. ಕಾಲೇಜು ತಂಡ ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಎಸ್.ಡಿ.ಎಂ. ಕಾಲೇಜು ಆಶ್ರಯದಲ್ಲಿ ಶುಕ್ರವಾರ ನಡೆದ…
