ಹುಬ್ಬಳ್ಳಿ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಧಾರವಾಡ ವಲಯ ೧೫ ವರ್ಷದವರೊಳಗಿನ ಬಾಲಕಿಯರ ಕ್ರಿಕೆಟ್ ತಂಡದ ಆಯ್ಕೆ ಪರೀಕ್ಷೆ ಸೋಮವಾರ, ಅಕ್ಟೋಬರ್ ೫ ರಂದು ಇಲ್ಲಿಯ ರಾಜನಗರ ಕೆಎಸ್ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
೨೦೧೧ ಸಪ್ಟೆಂಬರ್ ೧ ಹಾಗೂ ೩೧ ಆಗಸ್ಟ್ ೨೦೧೪ರ ನಡುವೆ ಜನಿಸಿದ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ನಿವಾಸಿಗಳಾದ ಆಟಗಾರ್ತಿಯರು ಮಾತ್ರ ಈ ಆಯ್ಕೆ ಟ್ರಯಲ್ಸ್ನಲ್ಲಿ ಭಾಗವಹಿಸಲು ಅರ್ಹರು ಎಂದು ತಿಳಿಸಿರುವ ಕೆ.ಎಸ್.ಸಿ.ಎ. ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ, ಅಂತಹ ಅರ್ಹ ಆಟಗಾರ್ತಿಯರು ಸೋಮವಾರ ಮುಂಜಾನೆ ೯ ಗಂಟೆಗೆ ಕ್ರಿಕೆಟ್ ಸಮವಸ್ತ್ರದಲ್ಲಿ(ಬಿಳೆ ಬಟ್ಟೆ) ವರದಿ ಮಾಡಿಕೊಳ್ಳಲು ಕೋರಿದ್ದಾರೆ.
ಅಯ್ಕೆ ಪರೀಕ್ಷೆಯಲ್ಲಿ ಭಾಗವಹಿಸುವ ಆಟಗಾರ್ತಿಯರು ತಮ್ಮ ವಯಸ್ಸಿನ ಪುರಾವೆಗಾಗಿ ಡಿಜಿಟಲ್ ಜನನ ಪ್ರಮಾಣ ಪತ್ರ ಮತ್ತು ಹಿಂದಿನ ಮೂರು ವರ್ಷಗಳ ಅಂಕಪಟ್ಟಿಯ ಮೂಲ ಪ್ರತಿಗಳನ್ನು ಮತ್ತು ವಿಳಾಸ/ನಿವಾಸದ ಪುರಾವೆಗಾಗಿ ಆಧಾರ ಕಾರ್ಡ್ ಅಥವಾ ಪಾಸ್ ಪೋರ್ಟ್ ಹಾಜರು ಪಡಿಸುವಂತೆಯೂ ಅವರು ಶುಕ್ರವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿಗಾಗಿ ಕೆಎಸ್ಸಿಎ ಧಾರವಾಡ ವಲಯ ಕಚೇರಿಯನ್ನು( +೯೧ ೯೧೬೪೭೮೮೧೦೦ / ೦೮೩೬-೩೫೦೮೮೪೨) ಸಂಪರ್ಕಿಸುವಂತೆಯೂ ಕೋರಿದ್ದಾರೆ.

