ಭಾರತಕ್ಕೆ ಆಸ್ಟ್ರೇಲಿಯಾ ಅಂಡರ್-೧೯ ತಂಡದೆದುರು ೧೦ ವಿಕೆಟ್ ಹಾಗೂ ೨-೦ ಸರಣಿ ಗೆಲುವು
ಅಹಮದಾಬಾದ
ತಾವಾಡಿದ ಮೊದಲ ಪಂದ್ಯದಲ್ಲೇ ಎಡಗೈ ಸ್ಪಿನ್ನರ್ ತನ್ಮಯ್ ಬಲೋಡಾ ೧೪ ವಿಕೆಟ್ ಕಬಳಿಸುವುದರೊಂದಿಗೆ, ಭಾರತದ ೧೯ ವರ್ಷದವರೊಳಗಿನ ತಂಡ ಇಲ್ಲಿ ನಡೆದ ಎರಡನೇ `ಯೂಥ್ ಟೆಸ್ಟ್’ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ೧೯ ವರ್ಷದವರೊಳಗಿನ ತಂಡವನ್ನು ೧೦ ವಿಕೆಟ್ಗಳಿಂದ ಹಣಿದು ಸರಣಿಯನ್ನು ೨-೦ ಅಂತರದಿAಲಂದ ತನ್ನದಾಗಿಸಿಕೊಂಡಿತು.
ಅಮಾನತುಗೊಂಡ ರೋಹಿತ್ ಯಾದವ ಬದಲಿಗೆ ತಂಡಕ್ಕೆ ಸೇರ್ಪಡೆಯಾದ ತನ್ಮಯ್ ಬಲೋಡಾ ಎರಡನೇ ಸರದಿಯಲ್ಲೂ ಮಾರಕ ದಾಳಿ ನಿರ್ವಹಿಸಿ ೪೧ ರನ್ಗಳಿಗೆ ೮ ವಿಕೆಟ್ ಕಬಳಿಸುವುದರೊಂದಿಗೆ ಆಸೀಸ್ ತಂಡ ಕೇವಲ ೧೫೧ಕ್ಕೆ ಕುಸಿಯಿತು. ನಿಚ್ಚಳ ಗೆಲುವಿಗಾಗಿ ಬೇಕಿದ್ದ ೧೧ ರನ್ಗಳನ್ನು ಭಾರತ ಕೇವಲ ೫ ಎಸೆತಗಳಲ್ಲಿ ವಿಕೆಟ್ ಕಳೆದುಕೊಳ್ಳದೇ ಸಂಪಾದಿಸಿತು.
ಮೊದಲ ಸರದಿಯಲ್ಲೂ ೩೨ ರನ್ಗಳನ್ನಿತ್ತು ೬ ವಿಕೆಟ್ ಕಿತ್ತಿದ್ದ ತನ್ಮಯ್ ಬಲೋಡಾ ಇಡೀ ಪಂದ್ಯದಲ್ಲಿ ಒಟ್ಟು ೭೩ ರನ್ಗಳಿಗೆ ೧೪ ವಿಕೆಟ್ ಕಬಳಿಸಿ ಭಾರತ ತಂಡದ ಗೆಲುವಿನ ರೂವಾರಿಯೆನಿಸಿದರು. ಪ್ರವಾಸಿಗರ ಎರಡನೇ ಸರದಿಯಲ್ಲಿ ಏಕಾಂಗಿಯಾಗಿ ಹೋರಾಡಿದ ಬ್ಲೇಕ್ ಕ್ಯಾಟಲ್(೬೩) ಒಬ್ಬರೇ ದಿಟ್ಟ ಅರ್ಧ ಶತಕ ದಾಖಲಿಸಿದರು.
ಸಂಕ್ಷಿಪ್ತ ಸ್ಕೋರುಗಳು:
ಆಸ್ಟ್ರೇಲಿಯಾ ಅಂ-೧೯ ತಂಡ: ೧೭೪ ಹಾಗೂ ೧೫೧, ಭಾರತ ಅಂ-೧೯ ತಂಡ: ೩೧೫ ಹಾಗೂ ವಿಕೆಟ್ ನಷ್ಟವಿಲ್ಲದೇ ೧೧. ಫಲಿತಾಂಶ: ಭಾರತ ಅಂ-೧೯ ತಂಡಕ್ಕೆ ೧೦ ವಿಕೆಟ್ಗಳ ಗೆಲುವು.

