ವೀರಭದ್ರ ದೇವರ ಜಯಂತಿ

ಹಂಚಿಕೊಳ್ಳಿ

ಧಾರವಾಡ
ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಸಂಸ್ಥಾನ ಪಂಚಗೃಹ ಹಿರೇಮಠದ ಆವರಣದಲ್ಲಿರುವ ಶ್ರೀವೀರಭದ್ರದೇವರ ದೇವಾಲಯದಲ್ಲಿ ಭಾದ್ರಪದ ಮಾಸದ ಮೊದಲ ಮಂಗಳವಾರ ಶ್ರೀವೀರಭದ್ರ ದೇವರ ಜಯಂತಿ ಆಚರಣೆ ಜರುಗಿತು.

ಪ್ರಾತಃಕಾಲದಲ್ಲಿ ಶ್ರೀವೀರಭದ್ರ ದೇವರಿಗೆ ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ ಸೇರಿ ಪೂಜಾ ಕೈಂಕರ್ಯಗಳು ಜರುಗಿದವು. ಶ್ರೀಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರೀವೀರಭದ್ರ ದೇವರಿಗೆ ಪುಷ್ಪನಮನ ಸಲ್ಲಿಸಿದರು.

ಇಳಿಹೊತ್ತಿನಲ್ಲಿ ನಡೆದ ಶ್ರೀವೀರಭದ್ರ ದೇವರ ಪಲ್ಲಕ್ಕಿ ಸೇವೆ ಮತ್ತು ಮಂಗಳಾರತಿಯ ಪಾವನ ಸಂದರ್ಭದಲ್ಲಿ ಹವ್ಯಾಸೀ ಪತ್ರಕರ್ತ ಗುರುಮೂರ್ತಿ ಯರಗಂಬಳಿಮಠ, ವೀರಯ್ಯ ಹಿರೇಮಠ, ರುದ್ರಪ್ಪ ಕಂಬಾರ, ವೀರಪ್ಪ ಕಂಬಾರ, ಶ್ವೇತಾ ಹಿರೇಮಠ, ರಾಮು ಪತ್ತಾರ, ಸಮೃದ್ಧ ಹಿರೇಮಠ, ಪ್ರಸನ್ನ ಅಯ್ಯನಗೌಡರ ಇತರರು ಇದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *