ಧಾರವಾಡ
‘ಪರಮ ಭಾಗವತರಾದ ಶುಕಾಚಾರ್ಯರು ನಾರಾಯಣ ಬ್ರಹ್ಮದೇವರಿಗೆ, ಬ್ರಹ್ಮ ದೇವರು ನಾರದರಿಗೆ, ನಾರದರು ಶುಕಾಚಾರ್ಯರಿಗೆ, ಶುಕಾಚಾರ್ಯರು ಪರೀಕ್ಷಿತ ರಾಜನಿಗ ಭಾಗವತವನ್ನು ಉಪದೇಶ ಮಾಡಿದರು. ಪುಣ್ಯದ ಸ್ವಲ್ಪಾದರು ಅಂಶ ನಮ್ಮಲ್ಲಿದ್ದಿರೆ ಭಾಗವತ ಶ್ರವಣ ಮಾಡಬೇಕು. ಭಗವಂತನ ಮಹಿಮೆಯನ್ನು ಹೇಳಿ ಆತನ ವರ್ಣನೆಯನ್ನು ಕೇಳಬೇಕು. ಕೃಷ್ಣ ಉಪದೇಶ ಮಾಡಿದ. ಕೃಷ್ಣನ ಆಜ್ಞೆ ಎಂದರೆ ಅದೇ ಧರ್ಮ’ ಎಂದು ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಧಾರವಾಡ ಉತ್ತರಾದಿ ಮಠದ ನೂತನ ಕಟ್ಟಡ ಆವರಣದಲ್ಲಿ ೩೧ ನೆಯ ಚಾತುರ್ಮಾಸ್ಯವನ್ನು ಕೈಗೊಂಡಿರುವ ಉತ್ತರಾದಿ ಮಠದ ಶ್ರೀಪಾದಂಗಳಾದ ಶ್ರೀ ಸತ್ಯಾತ್ಮತೀರ್ಥರು ನಾಲ್ವತ್ತನೆಯ ದಿನದ ಬುಧವಾರ ಆಶೀರ್ವಚಗನ ಸಂದೇಶದಲ್ಲಿ ಮೇಲಿನಂತೆ ತಿಳಿಸಿದರು.
ಮುಂದುವರೆದು ‘ಬ್ರಹ್ಮ ದೇವರು ಸನಕಾದಿಗಳನ್ನು ಸೃಷ್ಟಿ ಮಾಡಿದ್ದಾರೆ. ಅನಂತ ಜೀವ ರಾಶಿಗಳಿದ್ದಾರೆ. ಅವರವರ ಸಾಧನೆಯ ಅವಿರ್ಭಾವವಾಗಬೇಕು. ದೇವರು ಭೂಮಿಯನ್ನು ಉದ್ಧಾರ ಮಾಡೇ ಮಾಡುತ್ತಾನೆ. ಭಗವಂತ ರಕ್ಷಣೆಯನ್ನು ಮಾಡೇ ಮಾಡುತ್ತಾನೆ. ದೇವರಿಗೆ ಪ್ರಾರ್ಥನೆ ಮಾಡಬೇಕು. ಸಲಹೆ ಮಾಡಬಾರದು. ಪರಮಾತ್ಮನಲ್ಲಿ ವಿಶ್ವಾಸ ಇಡಿ ಎಂದು ಬ್ರಹ್ಮದೇವ ಎಲ್ಲಾ ದೇವ ದೇವತೆಗಳಿಗೆ ಉಪದೇಶ ಮಾಡುತ್ತಾನೆ. ದೇವರು ಕಣ್ಣು ಅರಳಿಸಿದರೆ ಸಾಕು, ಮೋಕ್ಷವಾಗುತ್ತದೆ. ಬ್ರಹ್ಮ ದೇವರ ಮಗ ಸ್ವಯಂಭೂ ಮನು. ಪರಮಾತ್ಮನ ಪ್ರೀತಿಗಾಗಿ ನಾವು ಪ್ರಾರ್ಥಿಸಬೇಕು. ದೇವಭೂತಿ ಕಪಿಲನಾಮಕ ಭಗವಂತನ ತಾಯಿ, ವಿಷಯಗಳಲ್ಲಿ ವೈರಾಗ್ಯ ಬರಬೇಕು. ಸಜ್ಜನರ ಸಂಘ ಮಾಡಬೇಕು. ಸರ್ವೋತ್ತಮನಲ್ಲಿ ಭಜನೆ ಮಾಡಬೇಕು. ದೈಹಿಕ, ವಾಚಿಕ, ಮಾನಸಿಕ ತಪಸ್ಸು ಮಾಡಬೇಕು. ವಿಷಯ ಭೋಗಾಸಕ್ತಿ ಇರಬಾರದು’ ಎಂದು ಶ್ರೀ ಸತ್ಯಾತ್ಮತೀರ್ಥ ಗುರುಗಳು ಹೇಳಿದರು.

