ಕೆ.ಇ. ಬೋರ್ಡಿನಿಂದ ಸಂಸ್ಥಾಪಕರ ದಿನಾಚರಣೆ

ಹಂಚಿಕೊಳ್ಳಿ

ಧಾರವಾಡ
ಓರ್ವ ವ್ಯಕ್ತಿಯನ್ನು ಶ್ರೇಷ್ಠನನ್ನಾಗಿಸುವ ಗುಣ ಮತ್ತು ಸಾಮರ್ಥ್ಯ ಕೇವಲ ಶಿಕ್ಷಣಕ್ಕೆ ಮಾತ್ರ ಇದೆ ಎಂದು ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಕ.ವಿ.ವಿ. ಮನೋವಿಜ್ಞಾನ ವಿಭಾಗದ ಅಧ್ಯಕ್ಷರೂ ಆದ ಡಾ. ಪಿ.ಎಸ್. ಹಳ್ಯಾಳ ಅಭಿಪ್ರಾಯಪಟ್ಟರು.

ಧಾರವಾಡದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕರ್ನಾಟಕ ಎಜ್ಯುಕೇಶನ್ ಬೋರ್ಡಿನ `ಸಂಸ್ಥಾಪಕರ ದಿನಾಚರಣೆ’ಯ ಮುಖ್ಯ ಅತಿಥಿಯಾಗಿ ಗುರುವಾರ ಮಾತನಾಡುತ್ತಿದ್ದ ಅವರು, ಈ ಸಂಸ್ಥೆಯನ್ನು ಹುಟ್ಟು ಹಾಕಿದ ದಿವಾನ್ ರಾವ್‌ಬಹಾದ್ದೂರ ರೊದ್ದ ಶ್ರೀನಿವಾಸರಾವ್ ಅವರು ನೆಟ್ಟ ಗಿಡ ಫಲ ಕೊಟ್ಟಿದೆ. ಎಷ್ಟೋ ತಲೆಮಾರಿನ ಜನರು ಇದರ ಪ್ರಯೋಜನ ಪಡೆದು ಧನ್ಯರಾಗಿದ್ದಾರೆ ಎಂದರು.

ವ್ಯಕ್ತಿತ್ವ ನಿರ್ಮಾಣದ ಅಪಾರ ಶಕ್ತಿ ಹೊಂದಿರುವ ಶಿಕ್ಷಣ ಸದಾ ಮಕ್ಕಳ ಕಲ್ಯಾಣವನ್ನೇ ಬಯಸಬೇಕು ಎಂದು ಅಭಿಪ್ರಾಯ ಪಟ್ಟ ಡಾ. ಹಳ್ಯಾಳ, ಶಿಕ್ಷಣವು ನೀಡುವ ಅವಕಾಶಗಳ ಸದ್ಬಳಕೆ ಮಾಡಿಕೊಂಡು ಯಶಸ್ವಿಯಾಗಿ ಹೊರ ಹೊಮ್ಮುವ ಜವಾಬ್ದಾರಿ ಮಕ್ಕಳ ಮೇಲಿದೆಯೆಂದರು.

ಕೆ.ಇ. ಬೋರ್ಡಿನ ಅಧ್ಯಕ್ಷ ಪ್ರೊ. ಎಂ.ಎನ್. ಜೋಶಿ ಅಧ್ಯಕ್ಷತೆ ವಹಿಸಿದ್ದರು. ಬೋರ್ಡಿನ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಸ್ವಾಗತಿಸಿದರೆ, ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ ಪರಿಚಯಿಸಿದರು. ಖಜಾಂಚಿ ಎನ್.ಎಸ್. ಕುಲಕರ್ಣಿ ರೊದ್ದ ಶ್ರೀನಿವಾಸ ರಾವ್ ಅವರನ್ನು ಸ್ಮರಿಸಿಕೊಂಡರು. ವಿದ್ಯಾರಣ್ಯ ಹೈಸ್ಕೂಲ ಉಪ ಪ್ರಾಂಶುಪಾಲ ಬಿ.ಬಿ. ಪಾಟೀಲ ಸನ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಶ್ರೀಧರ ಉದಗಟ್ಟಿ ವಂದಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *