ಕೈದಿಗಳ ಕೈಚಳಕಕ್ಕೆ ಭಾರೀ ಬೇಡಿಕೆ

ಹಂಚಿಕೊಳ್ಳಿ

ಧಾರವಾಡ ಕೃಷಿ ಮೇಳದಲ್ಲಿ ಕೇಂದ್ರ ಕಾರಾಗೃಹದ ಮಳಿಗೆ ಗ್ರಾಹಕರಿಂದ ಮೆಚ್ಚುಗೆ

ಧಾರವಾಡ
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರು ಕೃಷಿ ಮೇಳದಲ್ಲಿ ಕೇಂದ್ರ ಕಾರಾಗೃಹದ ವತಿಯಿಂದ ತೆರೆದಿರುವ ಮಳಿಗೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಕಾರಾಗೃಹದ ಕೈದಿಗಳು ತಯಾರಿಸಿದ ವಿವಿಧ ಕೈಮಗ್ಗ ಹಾಗೂ ಕರಕುಶಲ ಉತ್ಪನ್ನಗಳಿಗೆ ಮೇಳಕ್ಕೆ ಆಗಮಿಸುತ್ತಿರುವ ಲಕ್ಷಾಂತರ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೃಷಿ ಮೇಳದಲ್ಲಿ ಈ ವರ್ಷದಿಂದ ಮೊದಲ ಬಾರಿಗೆ ಮಳಿಗೆ ಹಾಕಿದ್ದು ವಿಶೇಷ.

ಬಣ್ಣ ಬಣ್ಣದ ಚೀಲಗಳು, ಬಟ್ಟೆ, ಕರಕುಶಲ ವಸ್ತುಗಳು, ಬೇಕರಿ ಉತ್ಪನ್ನಗಳು ಸೇರಿದಂತೆ ವಿವಿಧ ಉತ್ಪನ್ನಗಳು ಮಳಿಗೆಯಲ್ಲಿ ಲಭ್ಯವಿದ್ದು, ಅವುಗಳ ಗುಣಮಟ್ಟ ಹಾಗೂ ಆಕರ್ಷಕ ವಿನ್ಯಾಸ ಗ್ರಾಹಕರನ್ನು ಸೆಳೆಯುತ್ತಿದೆ. ಹಲವರು ಉತ್ಪನ್ನಗಳನ್ನು ಕುತೂಹಲದಿಂದ ವೀಕ್ಷಿಸಿ ಖರೀದಿಸುತ್ತಿರುವುದು ಕಂಡುಬಂದಿತು.

ಕೈದಿಗಳ ಶ್ರಮಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಕಾರಾಗೃಹದ ಸಿಬ್ಬಂದಿಯಲ್ಲೂ ಸಂತಸ ಮೂಡಿಸಿದೆ. ಕೃಷಿ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಕೇಂದ್ರ ಕಾರಾಗೃಹದ ಮಳಿಗೆಯೂ ಒಂದಾಗಿ ಗಮನ ಸೆಳೆಯುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ, ಎಲ್ಲರೊಂದಿಗೆ ಹಂಚಿಕೊಳ್ಳಿ…


ಹಂಚಿಕೊಳ್ಳಿ

Leave a Reply

Your email address will not be published. Required fields are marked *