ನಾಗೋಯಾ
ಗುಂಪು ಮಟ್ಟದ ಐದಕ್ಕೆ ಐದೂ ಪಂದ್ಯಗಳಲ್ಲಿ ಅಬ್ಬರಿಸಿ ಅಜೇಯವಾಗುಳಿದ ಹಾಲಿ ಚಾಂಪಿಯನ್ಸ್ ಭಾರತದ ಪುರುಷರ ಹಾಕಿ ತಂಡ ನಾಗೋಯಾ ಏಷ್ಯನ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ಸ್‍ಗೆ ಲಗ್ಗೆಯಿಟ್ಟಿದೆ.
ನಾಯಕ ಹರ್ಮನ್‍ಪ್ರೀತ್ ಸಿಂಗ್ ಅವರ ಭರ್ಜರಿ ಹ್ಯಾಟ್ರಿಕ್’ ನೆರವಿನೊಡನೆ ಭಾರತ ಸೋಮವಾರ ಕಕಾಮಿಗಹಾರಾ(ಗಿಫು) ಕವಾಸಕಿ ಜುಕೋ ಸ್ಟೇಡಿಯಂನಲ್ಲಿ ಆಡಲ್ಪಟ್ಟಎ’ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 10-0 ಗೋಲುಗಳಿಂದ ಪರಾಭವಗೊಳಿಸಿತು.
ಹರ್ಮನ್‍ಪ್ರೀತ್ ಸಿಂಗ್ ಪಂದ್ಯದ 27, 40 ಹಾಗೂ 45ನೇ ನಿಮಿಷಗಳಲ್ಲಿ ಗೋಲು ಬಾರಿಸಿದರೆ, ಅಭಿಷೇಕ(3ನೇ ನಿಮಿಷ), ಜುಗರಾಜ್(22ನೇ ನಿಮಿಷ), ಸುಖ್ಜೀತ್(32ನೇ ನಿಮಿಷ), ಶಿಲಾನಂದ ಲಾಕ್ರಾ(44 ಹಾಗೂ 45ನೇ ನಿಮಿಷ), ಸಂಜಯ್(59ನೇ ನಿಮಿಷ) ಹಾಗೂ ಮಂದೀಪ್ ಸಿಂಗ್(60ನೇ ನಿಮಿಷ) ಭಾರತದ ಪರ ಗೋಲು ಗಳಿಸಿದ ಇನ್ನಿತರರು.
ಇದಕ್ಕೂ ಮೊದಲು `ಎ’ ಗುಂಪಿನ ಇನ್ನುಳಿದ ಪಂದ್ಯಗಳಲ್ಲಿ ಭಾರತ ಇಂಡೋನೇಷ್ಯಾ ಎದುರು 13-1, ಶ್ರೀಲಂಕಾ ಎದುರು 16-1, ದಕ್ಷಿಣ ಕೊರಿಯಾ ಎದುರು 8-2 ಹಾಗೂ ಆತಿಥೇಯ ಜಪಾನ ಎದುರು 2-0 ಗೋಲುಗಳ ಜಯ ಸಾಧಿಸಿತ್ತು.
ಅಕ್ಟೋಬರ್ 1ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಕಣಕ್ಕಿಳಿಯಲಿದೆ.
