ಅಲ್ಕರಾಜ್-ಲೆಹೆಕಾ ಜಪಾನ್ ಓಪನ್ ಟೆನಿಸ್ ಫೈನಲ್‌ಗೆ

ಹಂಚಿಕೊಳ್ಳಿ

ಟೋಕಿಯೋ
ಏಳು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಹಾಗೂ ಅಗ್ರ ಸೀಡ್ ಸ್ಪೇನಿನ ಕಾರ್ಲೋಸ್ ಅಲ್ಕರಾಜ್ ಇಲ್ಲಿ ನಡೆದಿರುವ ಜಪಾನ್ ಓಪನ್ ಟೆನಿಸ್ ಟೂರ್ನಿ ಫೈನಲ್ ಪ್ರವೇಶಿಸಿದ್ದಾರೆ.

ಹಾಲಿ ಚಾಂಪಿಯನ್ ಹಾಗೂ ವಿಶ್ವದ ೩ನೇ ಕ್ರಮಾಂಕದ ಆಟಗಾರ ಅಲ್ಕರಾಜ್, ಸೋಮವಾರ ಅರಿಯಾಕೆ ಕೊಲಿಸಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ದೇಶದವರೇ ಆದ ಜಾಮೆ ಮುನಾರ್ ಅವರನ್ನು ಮೂರು ಸೆಟ್‌ಗಳ ಸೆಣಸಟದಲ್ಲಿ ೫-೭, ೬-೩, ೬-೧ ಅಂತರದಿಂದ ಸೋಲಿಸಿದರು.

ಫ್ರಶಸ್ತಿ ಹೋರಾಟದಲ್ಲಿ ಅಲ್ಕರಾಜ್ ಜೆಕ್ ರಿಪಬ್ಲಿಕ್‌ನ ಜಿರಿ ಲೆಹೆಕಾ ಅವರನ್ನು ಎದುರಿಸಲಿದ್ದಾರೆ. ಲೆಹೆಕಾ ಇನ್ನೊಂದು ಸೆಮಿಫೈನಲ್‌ನಲ್ಲಿ ೮ನೇ ಶ್ರೇಯಾಂಕ ಹೊಂದಿರುವ ಮೊನಾಕೊ ಆಟಗಾರ ವ್ಯಾಲೆಂಟಿನ್ ವಾಚೆರೋಟ್ ಅವರನ್ನು ಹೆಚ್ಚಿನ ಪ್ರಯಾಸ ಪಡದೇ ೬-೪, ೬-೨ ರಿಂದ ಪರಾಭವಗೊಳಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *