SK Suddimane

Sk Suddimane - ಜನಧ್ವನಿಯ ಅನಾವರಣ

ರಾಹುಲ್ ಶತಕ, ರೇವಂತ ಜೊತೆ ದ್ವಿಶತಕದ ಜೊತೆಯಾಟ, ಆಂಧ್ರಕ್ಕೆ ಮಹತ್ವದ ಲೀಡ್

ಮಲಪಾಡು(ವಿಜಯವಾಡ)ಆರನೇ ಕ್ರಮಾಂಕದ ಬ್ಯಾಟರ್ ಶ್ರೀರಾಮ ವೆಂಕಟ ರಾಹುಲ್ ಅವರ ಸಮಯೋಚಿತ ಶತಕ ಹಾಗೂ ರೇವಂತ ರೆಡ್ಡಿ ಅವರ ಜೊತೆಗಿನ ಆರನೇ ವಿಕೆಟ್‌ಗೆ ಭರ್ಜರಿ ದ್ವಿಶತಕದ ಜೊತೆಯಾಟದ ನೆರವಿನಿಂದ ಆತಿಥೇಯ ಆಂಧ್ರ ಇಲ್ಲಿ ನಡೆದಿರುವ ರಣಜಿ ಟ್ರೋಫಿ ಎಲೀಟ್ ಗುಂಪಿನ ಪಂದ್ಯದಲ್ಲಿ ಕಳೆದ ಸಲದ ರನ್ನರ್-ಅಪ್’ ಕರ್ನಾಟಕದ ಮೇಲೆ ಮಹತ್ವದ ಮೊದಲ ಇನ್ನಿಂಗ್ಸ್ ಲೀಡ್ ಸಂಪಾದಿಸಿತು. ಆಂಧ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಪಂದ್ಯದ ಮೊದಲ ದಿನವಾಗಿದ್ದ ಭಾನುವಾರದಂದು ಕರ್ನಾಟಕ ತನ್ನ ಮೊದಲ ಸರದಿಯಲ್ಲಿ ೨೭೪ಕ್ಕೆ ಆಲೌಟಾದ ನಂತರ ಎರಡನೇ…

Read More

ಸರ್ಫಾಕೋಟ್ಸ್ ಪೇಂಟ್ಸ್ 3 ಹೊಸ ಉತ್ಪನ್ನ ಬಿಡುಗಡೆ

ದಾಂಡೇಲಿಯಲ್ಲಿ ನಡೆದ ಸರ್ಫಾಕೋಟ್ಸ್ ಪೇಂಟ್ಸ್ ಕಂಪನಿಯ ಹೊಸ ಪ್ರಾಡಕ್ಟ್‌ಗಳ ಬಿಡುಗಡೆ ಕಾರ್ಯಕ್ರಮಕ್ಕೆ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಯು. ಪ್ರಶಾಂತ್ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ದಾಂಡೇಲಿದೇಶದ ಮುಂಚೂಣಿಯ ಪೇಂಟ್‌ಗಳಲ್ಲೊಂದಾದ ಸರ್ಫಾಕೋಟ್ಸ್ ಪೇಂಟ್ಸ್ ಕಂಪನಿಯ ಮೂರು ಹೊಸ ಪ್ರಾಡಕ್ಟ್ ಗಳನ್ನು ದಾಂಡೇಲಿಯ ವಿಸ್ಲಿಂಗ್ ವುಡ್ಸ್ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಯು. ಪ್ರಶಾಂತ್, ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ಹಿರಿಯ ಏರಿಯಾ ಸೇಲ್ಸ್ ಮ್ಯಾನೇಜರ್ ಶ್ರೀಧರ…

Read More

ಅಂತರಂಗ-ಬಹಿರಂಗ ಶುದ್ದಿ ವೀರಶೈವ ಧರ್ಮದ ಗುರಿ: ಶ್ರೀ ರಂಭಾಪುರಿ ಜಗದ್ಗುರುಗಳು

ಜಮಖಂಡಿಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಮತ ಧರ್ಮಗಳು ಬೆಳೆದುಕೊಂಡು ಬಂದಿವೆ. ಇವುಗಳಲ್ಲಿ ಒಂದಾಗಿರುವ ವೀರಶೈವ ಧರ್ಮವು ಒಂದು. ಇದರ ಇತಿಹಾಸ ಮತ್ತು ಬೆಳೆದುಕೊಂಡು ಬಂದ ಪರಂಪರೆ ಅತ್ಯಂತ ಪ್ರಾಚೀನವಾದುದು. ಅಂತರಂಗ ಮತ್ತು ಬಹಿರಂಗ ಶುದ್ದಿಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟ ಧರ್ಮ ವೀರಶೈವ ಧರ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಸೋಮವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಎರಡನೇ ದಿನದ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಯುಗ ಯುಗಗಳ ಪ್ರಾಚೀನ…

Read More

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದ ಕಾವು!

ಉರಿ ಬಿಸಿಲನ್ನೂ ಲೆಕ್ಕಿಸದೆ ಮತದಾರರ ಮನಗೆಲ್ಲಲು ಸಂಕನೂರ–ಲಿಂಬಿಕಾಯಿ ಕಸರತ್ತು • ಶ್ರೀಕಾಂತ ಬೆಟಗೇರಿಧಾರವಾಡಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ ಅಭ್ಯರ್ಥಿ ಪ್ರೊ. ಎಸ್.ವಿ. ಸಂಕನೂರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಕ್ಷೇತ್ರದಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದೇ ಬರುವ ಅಕ್ಟೋಬರ್ 23ರಂದು ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ ಉರಿ ಬಿಸಿಲನ್ನೂ ಲೆಕ್ಕಿಸದೆ ಇಬ್ಬರೂ ಅಭ್ಯರ್ಥಿಗಳು ನಾಲ್ಕು ಜಿಲ್ಲೆಯಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಮತದಾರರ…

Read More

ದುರ್ಗಾ ಮಾತಾ ದೌಡ್‌ಗೆ ಚಾಲನೆ

ಧಾರವಾಡ10ನೇ ವರ್ಷದ ದುರ್ಗಾ ಮಾತಾ ದೌಡ ಸೋಮವಾರ ಬೆಳಿಗ್ಗೆ ನಗರದ ದುರ್ಗಾದೇವಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಾಜಿ ಶಾಸಕ ಅಮೃತ ದೇಸಾಯಿ ಮತ್ತು ಮಾಜಿ ಶಾಸಕಿ ಸೀಮಾ ಮಸೂತಿ ಭಗವಾಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದುರ್ಗಾ ದೌಡ ಅಧ್ಯಕ್ಷ ಶಂಕರ ಶೇಳಕೆ, ರಾಕೇಶ ನಾಜರೆ, ಮಂಜುನಾಥ ನಡಟ್ಟಿ, ಮಾಜಿ ಮಹಾಪೌರ ಈರೇಶ ಅಂಚಟಗೇರಿ, ನಿತಿನ ಇಂಡಿ, ಸುನೀಲ ಮೊರೆ, ಮಂಜುನಾಥ ನಿರಲಕಟ್ಟಿ, ಬಾಬು ಪವಾರ, ಸುರೇಶ ಹುಬ್ಬಳ್ಳಿ, ಮಂಜುನಾಥ ಬೊಸ್ಲೆ,…

Read More

ಮಿಂಚಿದ ಅಭಿಷೇಕ, ಅರ್ಷದೀಪ್; ಭಾರತಕ್ಕೆ ಗೆಲುವು, ಸರಣಿಯಲ್ಲಿ ೨-೧ ಮುನ್ನಡೆ

ಇಂದೋರ್ಮೊದಲು ಅಭೀಷೇಕ ಶರ್ಮಾ ಬಿರುಸಿನ ಅರ್ಧ ಶತಕ ಹಾಗೂ ನಂತರ ಅರ್ಷದೀಪ್ ಪರಿಣಾಮಕಾರ ದಾಳಿಯ ನೆರವಿನಿಂದ ಭಾರತ ಭಾನುವಾರ ಇಲ್ಲಿ ನಡೆದ ಮೂರನೇ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು ೧೪ ರನ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ ೨-೧ ರಿಂದ ಮುನ್ನಡೆಯಿತು. ಇಲ್ಲಿಯ ಹೋಳ್ಕರ್ ಸ್ಟೇಡಿಯಂನಲ್ಲಿ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಭಾರತ ೨೦ ಓವರ್‌ಗಳಲ್ಲಿ ೨೨೩ಕ್ಕೆ ಆಲೌಟಾದರೆ, ಉತ್ತರವಾಗಿ ವಿಂಡೀಸ್ ೭ ವಿಕೆಟ್‌ಗಳಿಗೆ ೨೦೯ರ ಮೊತ್ತ ತಲುಪುವಲ್ಲಿ ಮಾತ್ರ ಯಶ…

Read More

ಕೆ.ಎಸ್.ಸಿ.ಎ. ೧೪ಕ್ಕಿಂತ ಕಿರಿಯರ ಕ್ರಿಕೆಟ್: ಸಿ.ಸಿ.ಕೆ., ನೀನಾ ಸ್ಪೋರ್ಟ್ಸ್‌ಗೆ ಗೆಲುವು

ಹುಬ್ಬಳ್ಳಿಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ) ಧಾರವಾಡ ವಲಯ ೧೪ ವರ್ಷದವರೊಳಗಿನ ಅಂತರ-ಕ್ಲಬ್ ಕ್ರಿಕೆಟ್ ಟೂರ್ನಿಯ ಮೊದಲ ದಿನ ನಗರದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಧಾರವಾಡದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ(ಸಿ.ಸಿ.ಕೆ.) ಹಾಗೂ ಬೆಳಗಾವಿಯ ನೀನಾ ಸ್ಪೋರ್ಟ್ಸ್ ಕ್ಲಬ್‌ಗಳು ಸುಲಭದ ಗೆಲುವು ಸಂಪಾದಿಸಿದವು. ಇಲ್ಲಿಯ ರಾಜನಗರ ಕೆ.ಎಸ್.ಸಿ.ಎ. ಸ್ಟೇಡಿಯಂದಲ್ಲಿ ನಡೆದ ಪಂದ್ಯದಲ್ಲಿ ಧಾರವಾಡದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ(ಸಿ.ಸಿ.ಕೆ.) ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್(ಎಚ್.ಎಸ್.ಸಿ)`ಬಿ’ ತಂಡವನ್ನು ೮ ವಿಕೆಟ್‌ಗಳಿಂದ ಪರಾಭವಗೊಳಿಸಿದರೆ, ಕರ್ನಾಟಕ ಜಿಮಖಾನಾ ಅಸೋಸಿಯೇಶನ್(ಕೆ.ಜಿ.ಎ.) ಮೈದಾನದಲ್ಲಿ ಬೆಳಗಾವಿಯ ನೀನಾ ಸ್ಪೋರ್ಟ್ಸ್…

Read More

ನಾಯಕನಾಗಿ ಚೊಚ್ಚಲ ಪಂದ್ಯದಲ್ಲೇ ಸ್ಮರಣ್ ರವಿಚಂದ್ರನ್ ಸೊಗಸಾದ ಶತಕ, ಕರ್ನಾಟಕ-೨೭೪, ಆಂಧ್ರ-೨ ವಿಕೆಟ್‌ಗೆ ೧೬

ಮಲಪಾಡುಹೊಸ ನಾಯಕ’ ಸ್ಮರಣ್ ರವಿಚಂದ್ರನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ೮ನೇ ಶತಕ ಬಾರಿಸುವುದರೊಂದಿಗೆ ಹೊಸ ರಣಜಿ ಋತುವಿನ ಮೊದಲ ದಿನ ಕರ್ನಾಟಕದ ಪಾಲಿಗೆ ಕಾಯಕಲ್ಪವಾದರು. ನಾಯಕನಾಗಿ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಶತಕ ಬಾರಿಸಿದ ಕೆಲವೇ ಕೆಲವು ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡ ಎಡಚ ಸ್ಮರಣ್ ರವಿಚಂದ್ರನ್ ಜವಾಬ್ದಾರಿಯುತ ಆಟವಾಡಿ ತಾವೆದುರಿಸಿದ ೨೧೮ ಎಸೆತಗಳಲ್ಲಿ ೧೧ ಬೌಂಡರಿ ಹಾಗೂ ೨ ಸಿಕ್ಸರ್‌ಗಳಿದ್ದ ಮನಮೋಹಕ ೧೨೬ ರನ್ ಸಿಡಿಸಿದರು. ಇದರೊಂದಿಗೆ ಆಂಧ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆಂಧ್ರ ಪ್ರದೇಶದ ಎದುರು…

Read More

ಸಮಾಜದ ಒಳಿತಿಗಾಗಿ ಬದುಕನ್ನು ಸಮರ್ಪಿಸಿಕೊಳ್ಳುವುದೇ ನಿಜವಾದ ಶಕ್ತಿ ಆರಾಧನೆ : ಶ್ರೀ ರಂಭಾಪುರಿ ಜಗದ್ಗುರುಗಳು

ಜಮಖಂಡಿಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಆಧ್ಯಾತ್ಮದ ಅರಿವು ಅವಶ್ಯಕ. ಭೌತಿಕ ಸಂಪತ್ತು ಅಳಿದರೂ ಆಧ್ಯಾತ್ಮದ ಸಂಪತ್ತು ಶಾಶ್ವತ. ಅಜ್ಞಾನವನ್ನು ತೊರೆದು ಜ್ಞಾನವನ್ನು ಸಂಪಾದಿಸುವುದು ಅನ್ಯಾಯದ ವಿರುದ್ಧ ನಿಲ್ಲುವುದು ಸತ್ಯದ ಮಾರ್ಗದಲ್ಲಿ ನಡೆಯುವುದು ಮತ್ತು ಸಮಾಜದ ಒಳಿತಿಗಾಗಿ ಬದುಕನ್ನು ಸಮರ್ಪಿಸಿಕೊಳ್ಳುವುದೇ ನಿಜವಾದ ಶಕ್ತಿಯ ಆರಾಧನೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಭಾನುವಾರ ಜಮಖಂಡಿ ಕಡಪಟ್ಟಿ ಶ್ರೀ ಬಸವಣ್ಣ ದೇವಸ್ಥಾನದ ಆವರಣದ ಮಾನವ ಧರ್ಮ ಮಂಟಪದಲ್ಲಿ ಜರುಗಿದ ದಸರಾ ಧರ್ಮ ಸಮ್ಮೇಳನದ ಉದ್ಘಾಟನಾ…

Read More

ಕೆ.ಇ. ಬೋರ್ಡಿನ ನೂತನ ಕಾರ್ಯಾಧ್ಯಕ್ಷರಾಗಿ ಡಾ. ಕೃಷ್ಣ ಕುಲಕರ್ಣಿ

ಧಾರವಾಡಯುವ ಉದ್ಯಮಿ ಡಾ. ಕೃಷ್ಣ ಕುಲಕರ್ಣಿ ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಕರ್ನಾಟಕ ಎಜ್ಯುಕೇಶನ್ ಬೋರ್ಡಿನ ನೂತನ ಕಾಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ಎರಡು ಅವಧಿಗಳಿಂದ ಕಾಯಾಧ್ಯಕ್ಷರಾಗಿದ್ದ ಖ್ಯಾತ ನ್ಯಾಯವಾದಿ ಶ್ರೀಕಾಂತ ಪಾಟೀಲ ಅವರಿಂದ ಅಧಿಕಾರ ವಹಿಸಿಕೊಂಡಿರುವ ಡಾ. ಕೃಷ್ಣ ಕುಲಕರ್ಣಿ ಅವರ ಅಧಿಕಾರಾವಧಿ ೨೦೨೮-೨೯ರವರೆಗೂ ಇರಲಿದೆ. ನಿವೃತ್ತ ಪ್ರಾಧ್ಯಾಪಕ ಡಾ. ರಾಘವೇಂದ್ರ ಕಟ್ಟಿ ಅವರು ಕಳೆದೆರಡು ಅವಧಿಗಳಿಂದ ಕಾರ್ಯದರ್ಶಿಗಳಾಗಿದ್ದ ಡಿ.ಎಸ್. ರಾಜಪುರೋಹಿತ ಅವರ ಸ್ಥಾನದಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕೆನರಾ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ರಾಜೀವ ದೀಕ್ಷಿತ…

Read More