SK Suddimane

Sk Suddimane - ಜನಧ್ವನಿಯ ಅನಾವರಣ

ಧಾರವಾಡ ವಲಯಕ್ಕೆ ವೈಷ್ಣವಿ ನಾಯಕಿ

ಹುಬ್ಬಳ್ಳಿಧಾರವಾಡದ ಎಸ್.ಡಿ.ಎಂ. ಕ್ರಿಕೆಟ್ ಅಕಾಡೆಮಿಯ ವೈಷ್ಣವಿ ಬಿ. ಹೊಸಳ್ಳಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ೧೫ ವರ್ಷದವರೊಳಗಿನವರಿಗಾಗಿ ಬೆಂಗಳೂರಿನಲ್ಲಿ ನಡೆಸಲಿರುವ ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಧಾರವಾಡ ವಲಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಲಿದ್ದಾರೆ. ಕೆ.ಎಸ್.ಸಿ.ಎ. ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ಪ್ರಕಟಿಸಿರುವ ೧೫ ಆಟಗಾರ್ತಿಯರು ಹಾಗೂ ೫ ಕಾಯ್ದಿಟ್ಟ ಆಟಗಾರ್ತಿಯರ ಹೆಸರುಗಳು ಇಂತಿವೆ: ವೈಷ್ಣವಿ ಬಿ. ಹೊಸಳ್ಳಿ(ನಾಯಕಿ), ಅಮೃತಾ ವಸಂತಕುಮಾರ ಪಾಟೀಲ(ವಿಕೆಟ್ ಕೀಪರ್), ಪ್ರಿಯಾಂಕಾ ಅನಾಡ(ವಿಕೆಟ್ ಕೀಪರ್), ಸಹನಾ ರಾಮದುರ್ಗ, ಕುಲ್ಸೂಮ್ ಶಿಬಾರಗಟ್ಟಿ(ಐವರೂ…

Read More

ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಕನೂರು ಪರ ಮತಯಾಚಿಸಿದ ಕೇಂದ್ರ ಸಚಿವರು

ದೇಶದ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧಾರವಾಡಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಅವರ ಚುನಾವಣಾ ಪ್ರಚಾರದ ಅಂಗವಾಗಿ, ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಉಪಸ್ಥಿತಿಯಲ್ಲಿ ರವಿವಾರ ಜೆಎಸ್‌ಎಸ್ ಕಾಲೇಜು ಆವರಣದ ಉತ್ಸವ ಹಾಲ್‌ನಲ್ಲಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪ್ರಮುಖ ಗಣ್ಯರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರು, ದೇಶದ…

Read More

ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ

ಮೊದಲ ದಿನವೇ ವಿಶೇಷ ಅಲಂಕಾರ, ದರ್ಶನಕ್ಕೆ ಹರಿದು ಬಂದ ಭಕ್ತಸಾಗರ ಧಾರವಾಡನಾಡಿನಾದ್ಯಂತ ನವರಾತ್ರಿ ಉತ್ಸವದ ಸಂಭ್ರಮ ಮನೆಮಾಡಿದ್ದು, ಧಾರವಾಡದ ದುರ್ಗಾದೇವಿ ದೇವಸ್ಥಾನದಲ್ಲಿಯೂ ಶರನ್ನವರಾತ್ರಿಯ ಮೊದಲ ದಿನ ಭಕ್ತಿಭಾವದಿಂದ ಆಚರಿಸಲಾಯಿತು. ದೇವಿಗೆ ಮೊದಲ ದಿನ ಗೆಜ್ಜೆ ವಿಶೇಷ ಅಲಂಕಾರ ಮಾಡಲಾಗಿದ್ದು, ದೇವಿಯ ದರ್ಶನ ಪಡೆಯಲು ಬೆಳಗ್ಗಿನಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದರು. ನವರಾತ್ರಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವಿಯ ಅಲಂಕಾರ ಭಕ್ತರ ಗಮನ ಸೆಳೆಯಿತು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ದುರ್ಗಾದೇವಿಯ ದರ್ಶನ ಪಡೆದು,…

Read More

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿಯಿಂದ ಪಾಕಿಸ್ತಾನ ಔಟ್

ನವದೆಹಲಿಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂಜಾಬ್-೨೦೨೬ ಪಾಕಿಸ್ತಾನ ಅಧಿಕೃತವಾಗಿ ಹಿಂದೆ ಸರಿದಿದ್ದು, ಅದರ ಬದಲು ಬಾಂಗ್ಲಾದೇಶ ತಂಡವನ್ನು ಸೇರಿಸಲಾಗಿದೆ. ಇದೇ ತಿಂಗಳ ೨೭ರಿಂದ ಪಂದ್ಯಾವಳಿ ಜಲಂಧರ ಹಾಗೂ ಮೊಹಾಲಿಗಳಲ್ಲಿ ಎಕಕಾಲಕ್ಕೆ ಪ್ರಾರಂಭವಾಗಲಿದೆ. ಪಾಕಿಸ್ತಾನ ಹಿಂದೆಗೆದುಕೊಂಡಿರುವುದರ ಹಿನ್ನೆಲೆಯಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಹಾಗೂ ಆತಿಥೇಯ ಭಾರತ ದಿನಾಂಕ ೨೭ರ ಉದ್ಘಾಟನಾ ಪಂದ್ಯವನ್ನು ಬಾಂಗ್ಲಾದೇಶದ ಎದುರು ಆಡಲಿದೆ. ನವಂಬರ್ ೫ರ ವರೆಗೆ ಜಲಂಧರಿನ ಒಲಿಂಪಿಯನ್ ಸುರ್ಜೀತ್ ಸಿಂಗ್ ಹಾಗೂ ಮೊಹಾಲಿಯ ಒಲಿಂಪಿಯನ್ ಬಲ್ಬೀರ್‌ಸಿಂಗ್ ಸೀನಿಯರ್ ಅಂತಾರಾಷ್ಟ್ರೀಯ ಹಾಕಿ…

Read More

೧೯ ವರ್ಷದವರೊಳಗಿನ ಕ್ರಿಕೆಟ್: ಕರ್ನಾಟಕದ ವನಿತೆಯರಿಗೆ ಸತತ ಎರಡನೇ ಗೆಲುವು

ರೋಪರ್(ರೂಪನಗರ, ಪಂಜಾಬ)ಕೇರಳದ ಎದುರು ೪ ವಿಕೆಟ್‌ಗಳಿಂದ ಜಯಿಸಿದ ಕರ್ನಾಟಕದ ವನಿತೆಯರು ಬಿಸಿಸಿಐ ಆಶ್ರಯದ ೧೯ ವರ್ಷದವರೊಳಗಿನ ಮಹಿಳೆಯರ ಟಿ೨೦ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಸತತ ಎರಡನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ `ಎ’ ಗುಂಪಿನ ಅಗ್ರಸ್ಥಾನಕ್ಕೇರಿದರು. ಇಲ್ಲಿಯ ಸರಕಾರಿ ಕಾಲೇಜು ಮೈದಾನದಲ್ಲಿ ಗೆಲುವಿಗೆ ಬೇಕಿದ್ದ ೧೨೮ ರನ್‌ಗಳನ್ನು ಕರ್ನಾಟಕದ ವನಿತೆಯರು ೬ ವಿಕೆಟ್‌ಗಳನ್ನು ಕಳೆದುಕೊಂಡು ೧೬.೫ ಓವರ್‌ಗಳಲ್ಲಿ ಸಂಪಾದಿಸಿದರು. ಪ್ರಾರಂಭಿಕ ಬ್ಯಾಟರ್ ರಚಿತಾ ಹತ್ವಾರ(೩೪, ೨೪ ಎಸೆತ, ೬ ಬೌಂಡರಿ), ಲಾವಣ್ಯ ಚಲನಾ(೨೮, ೨೫ ಎಸೆತ, ೪…

Read More

ಡಾ. ಲಿಂಗರಾಜ ಅಂಗಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಹುಬ್ಬಳ್ಳಿಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರು ಇತ್ತೀಚೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಡಾ. ಲಿಂಗರಾಜ ಅಂಗಡಿ ಅವರು ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೇಟ್, ಸಿನೇಟ್ ಹಾಗೂ ಅಕ್ಯಾಡೆಮಿಕ ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾದವರು.‌ ಅದೇ ರೀತಿ ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ಶಿಕ್ಷಕರ ಸಂಘದ ಒಕ್ಕೂಟದ ಅಧ್ಯಕ್ಷರಾಗಿ ಕೆಲಸ…

Read More

ಅನ್ವಯ್ ದ್ರಾವಿಡ್ ಬಿರುಸಿನ ಶತಕ, ಕರ್ನಾಟಕಕ್ಕೆ ವಿನೂ ಮಂಕಡ್ ಟ್ರೋಫಿಯಲ್ಲಿ ಮೊದಲ ಜಯ

ವಿಶಾಖಪಟ್ಟಣ(ಆಂಧ್ರಪ್ರದೇಶ)ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್‌ರ ಕಿರಿಯ ಪುತ್ರ ಹಾಗೂ ನಾಯಕ ಅನ್ವಯ ದ್ರಾವಿಡ್ ಬಿರುಸಿನ ಶತಕ ಸಿಡಿಸುವುದರೊಂದಿಗೆ ಕರ್ನಾಟಕ ತಂಡ ಬಿಸಿಸಿಐನ ೧೯ ವರ್ಷದವರೊಳಗಿನ ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ‘ಇ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಚಂಡೀಗಢದ ಎದುರು ಬರೋಬ್ಬರಿ ೧೦೦ ರನ್‌ಗಳ ಗೆಲುವು ದಾಖಲಿಸಿದೆ. ನಗರದ ಡಾ. ವಾಯ್.ಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕರ್ನಾಟಕದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅನ್ವಯ…

Read More

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರಿಗೆ ಭಕ್ತರಿಂದ ಸನ್ಮಾನ, ಬೀಳ್ಕೋಡುಗೆ

ಹುಬ್ಬಳ್ಳಿನಗರದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶ್ರಿಮದ್ವೀರಶೈವ ಸದ್ಭೋದನಾ ಸಂಸ್ಥೆ ಮತ್ತು ಶ್ರೀ ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ಜಮಖಂಡಿಗೆ ತೆರಳುತ್ತಿರುವ ಸಂದರ್ಭದಲ್ಲಿ ಭಕ್ತರ ಸಮ್ಮುಖದಲ್ಲಿ ಜಗದ್ಗರುಗಳನ್ನು ಶನಿವಾರ ಸನ್ಮಾನಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಯಡೆಯೂರು ಹಿರೇಮಠದ ಶ್ರೀ ರೇಣುಕ ಶಿವಾಚಾರ್ಯರು, ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವ ಸಿದ್ಧರಾಮೇಶ್ವರ ಸ್ವಾಮೀಜಿ, ಮಳಲಿಯ ಶ್ರೀ ನಾಗಭೂಷಣ ಶಿವಾಚಾರ್ಯರು, ಶ್ರಿಮದ್ವೀರಶೈವ ಸದ್ಭೋದನಾ…

Read More

ಅಯೋಧ್ಯೆ ರಾಮ ಮಂದಿರಕ್ಕೆ ಕಾಶಿ ಜಗದ್ಗುರುಗಳು-ಪೇಜಾವರ ಶ್ರೀಗಳ ಭೇಟಿ

ಶ್ರೀರಾಮಜನ್ಮಭೂಮಿ ಕ್ಷೇತ್ರದಲ್ಲಿ ನಡೆದ ವಿಶೇಷ ಧನ್ವಂತರಿ ಹೋಮ, ಮತ್ತಿತರ ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗಿ ಅಯೋಧ್ಯೆ(ಉ.ಪ್ರ.)ಶ್ರೀ ವಿವೇಕಾನಂದ ಸೇವಾ ಸಮಿತಿ ವತಿಯಿಂದ ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಕ್ಷೇತ್ರದ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಧನ್ವಂತರಿ ಹೋಮ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಉಡುಪಿ ಪೇಜಾವರ ಅಧೋಕ್ಷಜಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಕಾಶಿ ಜಗದ್ಗುರುಗಳು ರಾಮಜನ್ಮಭೂಮಿ ಮಂದಿರದ…

Read More

ಧರ್ಮದ ರಕ್ಷಣೆ-ಅಧರ್ಮದ ವಿನಾಶ ದಸರಾ ಮಹೋತ್ಸವದ ಮೂಲ ಗುರಿ: ಶ್ರೀ ರಂಭಾಪುರಿ ಜಗದ್ಗುರುಗಳು

ಜಮಖಂಡಿಭಾರತೀಯ ಸಂಸ್ಕೃತಿ ಧಾರ್ಮಿಕ ಪರಂಪರೆಯಲ್ಲಿ ಶಕ್ತಿಯ ಆರಾಧನೆಗೆ ಅತ್ಯಂತ ಪವಿತ್ರ ಸ್ಥಾನವಿದೆ. ಧರ್ಮದ ರಕ್ಷಣೆ ಮತ್ತು ಅಧರ್ಮದ ವಿನಾಶ ದಸರಾ ಧರ್ಮ ಸಮ್ಮೇಳನದ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶನಿವಾರ ದಸರಾ ಧರ್ಮ ಸಮ್ಮೇಳನಕ್ಕಾಗಿ ಜಮಖಂಡಿ ನಗರಕ್ಕೆ ಆಗಮಿಸಿದಾಗ ಭಕ್ತರು ಸಂಯೋಜಿಸಿದ ಶುಭಾಗಮನದ ಸ್ವಾಗತ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಜಗತ್ತಿನ ಸೃಷ್ಟಿ ಸ್ಥಿತಿ ಮತ್ತು ಲಯಕ್ಕೆ ಮೂಲವಾಗಿರುವ ಪರಾಶಕ್ತಿಯು ಜಗನ್ಮಾತೆಯಾಗಿ ಆದಿಶಕ್ತಿಯಾಗಿ ದುರ್ಗಿಯಾಗಿ ಚಾಮುಂಡೇಶ್ವರಿಯಾಗಿ…

Read More