SK Suddimane

Sk Suddimane - ಜನಧ್ವನಿಯ ಅನಾವರಣ

ಜೀವ ಸಂಕುಲದ ಉಳಿವಿಗೆ ಆದ್ಯತೆ ನೀಡಿ

ಧಾರವಾಡಜೀವ ಸಂಕುಲದ ಉಳಿವಿಗಾಗಿ ಸಸ್ಯ ಮತ್ತು ಮರಗಳನ್ನು ಬೆಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಖಾಯದ ಡೀನ್ ಪ್ರೊ. ಸಿ. ಕೃಷ್ಣಮೂರ್ತಿ ಹೇಳಿದರು. ಕರ್ನಾಟಕ ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಆವರಣದಲ್ಲಿ ಆಯೋಜಿಸಿದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿಗಳನ್ನು ‌ನೆಟ್ಟು ಮಾತನಾಡಿದರು. ಪ್ರಸ್ತುತ ಪರಿಸರದ ಅಸಮತೋಲನದಿಂದ ನೈಸರ್ಗಿಕ ವಿಪತ್ತುಗಳು ಹೆಚ್ಚಾಗುತ್ತಿವೆ ಆದ್ದರಿಂದ ಹಸಿರು ಪರಿಸರವನ್ನು ಸಂರಕ್ಷಿಸಿ ಬೆಳಸಬೇಕಾಗಿದೆ ಎಂದ ಅವರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಸ್ಯ ಗಿಡಮರಗಳ ಮಹತ್ವವನ್ನು ಅರಿಯಬೇಕು ಎಂದರು….

Read More

ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆ ಕಲಾ ಸಂಘ

ಧಾರವಾಡಬಿ.ಎ. ವಿದ್ಯಾರ್ಥಿಗಳಿಗೆ ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಕಷ್ಟು ಅವಕಾಶಗಳಿವೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ವರ್ತಮಾನದ ಮಾನದಂಡಗಳಿಗೆ ಸ್ಪಂದಿಸಿ ಕಲಿಕೆ ಮುಂದುವರೆಸಿಕೊಳ್ಳಿರಿ. ನಿಮ್ಮ ಪ್ರತಿಭೆ ಬಹುಮುಖವಾಗಿರಲಿ. ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಿರಿ. ನಿಮ್ಮ ಬದುಕಿನ ಯಶಸ್ಸು ನಮ್ಮ ಗುರಿ. ಕಲಾತ್ಮಕ ಕೌಶಲ್ಯಗಳು ಇಂದು ಸಾಕಷ್ಟು ಲಭ್ಯವಿವೆ ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತಪ್ರಸಾದ ಹೇಳಿದರು. ನಗರದ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಲಾ ಸಂಘದಿಂದ…

Read More

ವಿದ್ಯಾರ್ಥಿಗಳ ಗುರಿ ಉತ್ತಮ ವ್ಯಕ್ತಿತ್ವ: ಶ್ರೀ ರಂಭಾಪುರಿ ಜಗದ್ಗುರುಗಳು

ಪ್ರತಿ ಜಿಲ್ಲೆಗೊಂದು ವೀರಶೈವ ಲಿಂಗಾಯಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕೆಂಬ ಸಂಕಲ್ಪ ಮಹಾಸಭಾ ಕೈಗೊಂಡಿದೆ: ಈಶ್ವರ ಖಂಡ್ರೆ ಚಿಕ್ಕಮಗಳೂರುಶಿಕ್ಷಣವೆಂದರೆ ಕೇವಲ ಅಂಕಗಳನ್ನು ಗಳಿಸುವುದಲ್ಲ. ಶಿಕ್ಷಣವು ವ್ಯಕ್ತಿಯಲ್ಲಿ ಜ್ಞಾನ ಸಂಸ್ಕಾರ ಶಿಸ್ತು ಆತ್ಮವಿಶ್ವಾಸ ಮತ್ತು ಸಮಾಜದ ಬಗ್ಗೆ ಜವಾಬ್ದಾರಿ ಹೊಂದಿರಬೇಕು. ಉತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಬುಧವಾರ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ…

Read More

ಸೌರವ್ ಗಂಗೂಲಿ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್

ನವದೆಹಲಿಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಮುಂದಿನ ಆವೃತ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಸೌರವ ಗಂಗೂಲಿ ೨೦೧೯ರಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದರೂ ಅದರ ಫ್ರೆಂಚೈಸಿಯೊಂದಿಗೆ ಇದು ಅವರ ಮೊದಲ ಅಧಿಕೃತ ಕೋಚಿಂಗ್ ಪಾತ್ರವಾಗಿದೆ. ತಂಡದ ಸಲಹೆಗಾರರಾಗಿ ಆಗ ತಂಡವನ್ನು ಸೇರಿಕೊಂಡಿದ್ದ ಅವರು ನಂತರ ಅದರ ಪುರುಷ ಹಾಗೂ ಮಹಿಳಾ ತಂಡಗಳ ಕ್ರಿಕೆಟ್ ನಿರ್ದೇಶಕರದೂ ಸೇರಿ ಹಲವಾರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಮುಖ್ಯ…

Read More

ಕಾಂಗ್ರೆಸ್ ಕಾರ್ಯಕರ್ತರ ರಾತ್ರೋ ರಾತ್ರಿ ಪ್ರತಿಭಟನೆ

ಧಾರವಾಡಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ರಾತ್ರೋ ರಾತ್ರಿ ಪ್ರತಿಭಟನೆ ನಡೆಸಿದರು. ನಗರದ ಜುಬ್ಲಿ ಸರ್ಕಲ್ ಹಾಗೂ ಬಿಜೆಪಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಹುಲ್ ಗಾಂಧಿ ಅವರ ಬಂಧನವನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಕಚೇರಿ ಎದುರು ಪ್ರತಿಭಟನೆಯ ವೇಳೆ ಪೊಲೀಸರು ಕೆಲ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದು,…

Read More

ಮತ್ತೆ ಜಪಾನ್ ಓಪನ್ ಕಿರೀಟ ಧರಿಸಿದ ಕಾರ್ಲೋಸ್ ಅಲ್ಕರಾಜ್

ಟೋಕಿಯೋಅಗ್ರ ಸೀಡ್ ಸ್ಪೇನಿನ ಕಾರ್ಲೋಸ್ ಅಲ್ಕರಾಜ್ ಜಪಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕಳೆದ ಬಾರಿ ತಾವು ಜಯಿಸಿದ್ದ ಪುರುಷರ ಸಿಂಗಲ್ಸ್ ಪ್ರಶಸ್ತಿ ಉಳಿಸಿಕೊಂಡಿದ್ದಾರೆ. ಇಲ್ಲಿಯ ಅರಿಯಾಕೆ ಕೊಲಿಸಿಯಂನಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಹೋರಾಟದಲ್ಲಿ ಏಳು ಬಾರಿಯ ಗ್ರಾö್ಯನ್ ಸ್ಲಾಮ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಜೆಕ್ ರಿಪಬ್ಲಿಕ್‌ನ ಜಿರಿ ಲೆಹೆಕಾ ಅವರನ್ನು ಎರಡು ನೇರ ಸೆಟ್‌ಗಳಲ್ಲಿ ೭-೬(೪), ೬-೪ ಅಂತರದಿಂದ ಸೋಲಿಸಿದರು. ಪಂದ್ಯದ ಆರಂಭದಲ್ಲಿಯೇ ಸರ್ವಿಸ್ ಕಳೆದುಕೊಂಡಿದ್ದ ಅಲ್ಕರಾಜ್ ಮೊದಲ ಸೆಟ್‌ನಲ್ಲಿ ಸಾಕಷ್ಟು ಪರದಾಡಿದರಾದರೂ, ೯೬ ನಿಮಿಷಗಳ ಹೋರಾಟದಲ್ಲಿ…

Read More

ಮನೋಚೇತನದ ಹರಿಕಾರ ಡಾ. ಆನಂದ ಪಾಂಡುರಂಗಿಗೆ ಭಾವನಮನ

ಧಾರವಾಡಹಿರಿಯ ಮನೋವೈದ್ಯ, ಖ್ಯಾತ ವೈದ್ಯ ಹಾಗೂ ಅಪಾರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದ ಡಾ. ಆನಂದ ಪಾಂಡುರಂಗಿ ಅವರ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ‘ಮನೋಚೇತನ ಭಾವನಮನ’ ಕಾರ್ಯಕ್ರಮ ನಡೆಯಿತು. ಸಾವಿರಾರು ಅಭಿಮಾನಿಗಳು, ವೈದ್ಯಕೀಯ ಕ್ಷೇತ್ರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ. ಆನಂದ ಪಾಂಡುರಂಗಿ ಅವರ ಸೇವೆ, ಸರಳತೆ, ಮಾನವೀಯ ಗುಣಗಳು ಹಾಗೂ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸಿ ಭಾವಪೂರ್ಣ ನಮನ ಸಲ್ಲಿಸಿದರು. ಮನೋವೈದ್ಯಕೀಯ ಕ್ಷೇತ್ರದಲ್ಲಿ ಅವರು…

Read More

ಅಲ್ಕರಾಜ್-ಲೆಹೆಕಾ ಜಪಾನ್ ಓಪನ್ ಟೆನಿಸ್ ಫೈನಲ್‌ಗೆ

ಟೋಕಿಯೋಏಳು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಹಾಗೂ ಅಗ್ರ ಸೀಡ್ ಸ್ಪೇನಿನ ಕಾರ್ಲೋಸ್ ಅಲ್ಕರಾಜ್ ಇಲ್ಲಿ ನಡೆದಿರುವ ಜಪಾನ್ ಓಪನ್ ಟೆನಿಸ್ ಟೂರ್ನಿ ಫೈನಲ್ ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್ ಹಾಗೂ ವಿಶ್ವದ ೩ನೇ ಕ್ರಮಾಂಕದ ಆಟಗಾರ ಅಲ್ಕರಾಜ್, ಸೋಮವಾರ ಅರಿಯಾಕೆ ಕೊಲಿಸಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ದೇಶದವರೇ ಆದ ಜಾಮೆ ಮುನಾರ್ ಅವರನ್ನು ಮೂರು ಸೆಟ್‌ಗಳ ಸೆಣಸಟದಲ್ಲಿ ೫-೭, ೬-೩, ೬-೧ ಅಂತರದಿಂದ ಸೋಲಿಸಿದರು. ಫ್ರಶಸ್ತಿ ಹೋರಾಟದಲ್ಲಿ ಅಲ್ಕರಾಜ್ ಜೆಕ್ ರಿಪಬ್ಲಿಕ್‌ನ ಜಿರಿ ಲೆಹೆಕಾ ಅವರನ್ನು…

Read More

ತೀವ್ರ ನಡಿಗೆ ಸ್ಪರ್ಧೆಯಲ್ಲಿ ಚೆನ್ನಮ್ಮ ದ್ವಿತೀಯ

ಧಾರವಾಡವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ 70 ವರ್ಷ ಮೇಲ್ಪಟ್ಟ ಹಿರಿಯರಿಗಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ತೀವ್ರ ನಡಿಗೆ ಸ್ಪರ್ಧೆಯಲ್ಲಿ ಹಾಗೂ ನಿರ್ದಿಷ್ಟ ದೂರದಲ್ಲಿ ನಿಂತು ಬಕೆಟ್‌ದಲ್ಲಿ ಬಾಲ್ ಹಾಕುವ ಸ್ಪರ್ಧೆಯಲ್ಲಿ ನಿವೃತ್ತ ಶಿಕ್ಷಕಿ ಚೆನ್ನಮ್ಮ ಬೈಲೂರ(ಹೆಡೆ) ದ್ವಿತೀಯ ಸ್ಥಾನ ಪಡೆದುಕೊಂಡರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ…

Read More

ಧರ್ಮದಿಂದ ಸಂಸ್ಕೃತಿ ಉಳಿವು ಸಂಸ್ಕೃತಿಯಿಂದ ಸಮಾಜಕ್ಕೆ ಶಕ್ತಿ: ಶ್ರೀ ರಂಭಾಪುರಿ ಜಗದ್ಗುರುಗಳು

ಯಲಬುರ್ಗಾಭಾರತೀಯ ಸಂಸ್ಕೃತಿಯ ಮೂಲವೇ ಧರ್ಮ. ಆಧ್ಯಾತ್ಮ ಸತ್ಯ ಸಂಸ್ಕಾರ. ನಮ್ಮ ನಾಡಿನ ನೆಲದಲ್ಲಿ ಅನೇಕ ಆಚಾರ್ಯರು ಋಷಿಮುನಿಗಳು ಮತ್ತು ಸತ್ಪುರುಷರು ತಮ್ಮ ಜ್ಞಾನ ಮತ್ತು ಅನುಭಾವದ ಮೂಲಕ ಸಕಲರನ್ನು ಉದ್ಧರಿಸಿದ್ದಾರೆ. ಧರ್ಮದಿಂದ ಸಂಸ್ಕೃತಿ ಉಳಿವು ಮತ್ತು ಸಂಸ್ಕೃತಿಯಿಂದ ಸಮಾಜಕ್ಕೆ ಬಹು ದೊಡ್ಡ ಶಕ್ತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಸೋಮವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದ ನೂತನ ಶಿಲಾ ಮಂಟಪದ ಉದ್ಘಾಟನಾ ಅಂಗವಾಗಿ ಜರುಗಿದ ಜನ…

Read More