SK Suddimane

Sk Suddimane - ಜನಧ್ವನಿಯ ಅನಾವರಣ

ಧರ್ಮದಿಂದ ಸಂಸ್ಕೃತಿ ಉಳಿವು ಸಂಸ್ಕೃತಿಯಿಂದ ಸಮಾಜಕ್ಕೆ ಶಕ್ತಿ: ಶ್ರೀ ರಂಭಾಪುರಿ ಜಗದ್ಗುರುಗಳು

ಯಲಬುರ್ಗಾಭಾರತೀಯ ಸಂಸ್ಕೃತಿಯ ಮೂಲವೇ ಧರ್ಮ. ಆಧ್ಯಾತ್ಮ ಸತ್ಯ ಸಂಸ್ಕಾರ. ನಮ್ಮ ನಾಡಿನ ನೆಲದಲ್ಲಿ ಅನೇಕ ಆಚಾರ್ಯರು ಋಷಿಮುನಿಗಳು ಮತ್ತು ಸತ್ಪುರುಷರು ತಮ್ಮ ಜ್ಞಾನ ಮತ್ತು ಅನುಭಾವದ ಮೂಲಕ ಸಕಲರನ್ನು ಉದ್ಧರಿಸಿದ್ದಾರೆ. ಧರ್ಮದಿಂದ ಸಂಸ್ಕೃತಿ ಉಳಿವು ಮತ್ತು ಸಂಸ್ಕೃತಿಯಿಂದ ಸಮಾಜಕ್ಕೆ ಬಹು ದೊಡ್ಡ ಶಕ್ತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಸೋಮವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದ ನೂತನ ಶಿಲಾ ಮಂಟಪದ ಉದ್ಘಾಟನಾ ಅಂಗವಾಗಿ ಜರುಗಿದ ಜನ…

Read More

ಬಸ್ ತಡೆ ಹಿಡಿದು ಗ್ರಾಮಸ್ಥರ ಪ್ರತಿಭಟನೆ

ಹೆಬ್ಬಳ್ಳಿಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಬರದೆ ಇರುವುದನ್ನು ಖಂಡಿಸಿ, ನೂತನ ವೇಳಾಪಟ್ಟಿಯಂತೆ ಬಸ್ ಒಡಿಸುವಂತೆ ಆಗ್ರಹಿಸಿ ಸೋಮಾವಾರ ಗ್ರಾಮಸ್ಥರು, ವಿದ್ಯಾರ್ಥಿಗಳು, ಮಹಿಳೆಯರು ದಿಢೀರ್‌ನೆ ಹುಬ್ಬಳ್ಳಿ ಬಸ್ ತಡೆ ನಡೆಸಿದರು. ಸುಮಾರು ೪ ಗಂಟೆಗಳ ಬಸ್ ತಡೆದು ಪ್ರತಿಭಟನೆ ನಡೆಸಿದ ಸಾರ್ವಜನಿಕರು ಸಾರಿಗೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಸ್ಥಳಕ್ಕೆ ಡೀಪೊ ಮಟ್ಟದ ಅಧಿಕಾರಿಗಳೆ ಬಂದು ಮನವಿ ಸ್ವೀಕರಿಸಬೇಕೆಂದು ಆಗ್ರಹಿಸಿದರು. ೨೦೨೫ ರ ಏಪ್ರೀಲ್ ೮ ರಂದು ಬಸ್…

Read More

ಇಂಚಗೇರಿ ಮಠಕ್ಕೆ ದಿಂಡಿ ಪಾದಯಾತ್ರೆ

ಹುಬ್ಬಳ್ಳಿಯಿಂದ ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ಹೊರಟ ದಿಂಡಿ ಪಾದಯಾತ್ರಿಕರು ಉಪ್ಪಿನಬೆಟಗೇರಿಗೆ ಆಗಮಿಸಿದಾಗ ಭಕ್ತರು ಅದ್ದೂರಿ ಸ್ವಾಗತ ಕೋರಿದರು. ಧಾರವಾಡಜಾತ್ಯಾತೀತ ಪರಂಪರೆಯನ್ನು ಹೊಂದಿರುವ ಇಂಚಗೇರಿ ಮಠದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳು ಭಾವೈಕ್ಯತೆ ಸಾರುತ್ತವೆ ಎಂದು ಕಲಬುರ್ಗಿ ಆಶ್ರಮದ ಶ್ರೀ ದತ್ತಾತ್ರೆಯ ಮಹಾರಾಜರು ಹೇಳಿದರು. ಚಡಚಣ ತಾಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ನ. 2 ರಂದು ಜರುಗುವ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಗಳ ಜಯಂತಿಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ನಗರದಿಂದ ಉಪ್ಪಿನಬೆಟಗೇರಿಗೆ ಆಗಮಿಸಿದ ದಿಂಡಿ ಪಾದಯಾತ್ರೆ ಭಕ್ತಾಧಿಗಳಿಂದ ಶಿವಮೂರ್ತೆಪ್ಪ ಬುದ್ನಿ…

Read More

ಐಚಿ-ನಾಗೋಯಾ ಏಷ್ಯನ್ ಕ್ರೀಡಾ ಕೂಟಕ್ಕೆ ವೈಭವಯುತ ತೆರೆ, ೪ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ ಭಾರತ

ನಾಗೋಯಾಎರಡು ವಾರಗಳ ಕಾಲ ನಡೆದು ರೋಚಕ ಕ್ರೀಡಾ ಕದನಕ್ಕೆ ಸಾಕ್ಷಿಯಾದ ಐಚಿ-ನಾಗೋಯಾ ಏಷ್ಯನ್ ಕ್ರೀಡಾಕೂಟಕ್ಕೆ ವೈಭವಯುತ ತೆರೆ ಬಿದ್ದಿದೆ. ಏಷ್ಯನ್ ಕ್ರೀಡೆಗಳ ಈ ೨೦ನೇ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ೨೧ ಚಿನ್ನ, ೨೭ ಬೆಳ್ಳಿ ಹಾಗೂ ೩೭ ಕಂಚಿನ ಪದಕಗಳೂ ಸೇರಿದಂತೆ ಒಟ್ಟು ೮೫ ಪದಕಗಳಿಸಿ ಗೌರವಯುತ ನಾಲ್ಕನೇ ಸ್ಥಾನದೊಂದಿಗೆ ತನ್ನ ಅಭಿಯಾನ ಮುಗಿಸಿದೆ. ನಾಗೋಯಾದ ಪಲೋಮಾ ಮಿಜುಹೊ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಮಧ್ಯಾಹ್ನ ೨.೩೦ಕ್ಕೆ ಆರಂಭವಾದ ಸಮಾರೋಪ ಕಾರ್ಯಕ್ರಮದಲ್ಲಿ ಭಾರತದ…

Read More

ಮುಕೇಶ್ ಕುಮಾರ ಮಾರಕ ದಾಳಿ, ಶೇಷ ಭಾರತಕ್ಕೆ ೩೧ನೇ ಇರಾಣಿ ಕಪ್ ಕಿರೀಟ, ಕನ್ನಡಿಗ ಸ್ಮರಣ್ ರವಿಚಂದ್ರನ್ ಪಂದ್ಯದ ಆಟಗಾರ

ಶ್ರೀನಗರವೇಗಿ ಮುಕೇಶ್ ಕುಮಾರ್ ವೇಗದೆದುರು ರಣಜಿ ಚಾಂಪಿಯನ್ಸ್ ಜಮ್ಮು-ಕಾಶ್ಮೀರ ಬ್ಯಾಟರ್‌ಗಳು ತರಗೆಲೆಗಳಂತೆ ಉದುರುವುದರೊಂದಿಗೆ, ಶೇಷ ಭಾರತ ತಂಡ ಇರಾಣಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ೧೬೭ ರನ್‌ಗಳ ಭರ್ಜರಿ ಜಯ ದಾಖಲಿಸಿ ದಾಖಲೆಯ ೩೧ನೇ ಸಲ ಪ್ರಶಸ್ತಿಯ ಮೇಲೆ ಹಕ್ಕು ಜಮಾಯಿಸಿತು. ಶೇರ್-ಎ-ಕಾಶ್ಮೀರ ಕ್ರೀಡಾಂಗಣದಲ್ಲಿ ಪಂದ್ಯದ ನಾಲ್ಕನೇ ದಿನ ಮುಕೇಶ್ ಕೇವಲ ೩೩ ರನ್ ನೀಡಿ ೬ ವಿಕೆಟ್ ಕಬಳಿಸುವುದರೊಂದಿಗೆ, ನಿಚ್ಚಳ ಗೆಲುವು ಸಾಧಿಸಲು ತನ್ನ ಎರಡನೇ ಸರದಿಯಲ್ಲಿ ೨೭೯ ರನ್ ಗಳಿಸಬೇಕಿದ್ದ ಆತಿಥೇಯ ತಂಡ ಭೋಜನ ವಿರಾಮದ…

Read More

ವಿ.ಎಂ.ಸಿ.ಎ.ಗೆ ಭೆಟ್ಟಿ ನೀಡಿದ ಮಾಜಿ ರಾಜ್ಯ ರಣಜಿ ಆಟಗಾರ ಆನಂದ ಕಟ್ಟಿ

ಧಾರವಾಡಪಕ್ಕಾ ಗುರಿ ಹಾಗೂ ಸತತ ಪರಿಶ್ರಮವಿದ್ದರೆ ಏನೆಲ್ಲ ಸಾಧ್ಯವೆಂದು ಮಾಜಿ ರಾಜ್ಯ ರಣಜಿ ಆಟಗಾರ ಹಾಗೂ ಮಾಜಿ ರಾಜ್ಯ ರಣಜಿ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಆನಂದ ಕಟ್ಟಿ ನುಡಿದರು. ತಮ್ಮ ಕ್ರಿಕೆಟ್ ಜೀವನವನ್ನಾರಂಭಿಸಿದ ನಗರದ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿ(ವಿ.ಎಂ.ಸಿ.ಎ.)ಗೆ ಭಾನುವಾರ ಮುಂಜಾನೆ ಭೆಟ್ಟಿಯಿತ್ತು ಕ್ರಿಕೆಟ್ ಕಲಿಯುತ್ತಿದ್ದ ಎಳೆಯರೊಡನೆ ಸಂವಾದ ನಡೆಸಿದ ಅವರು ಮಾಳಮಡ್ಡಿಯ ಕೆ.ಇ. ಬೋರ್ಡ್ಸ್ ಶಾಲಾ ಮೈದಾನದಲ್ಲಿ ಪ್ರಾರಂಭದ ದಿನಗಳಲ್ಲಿ ತಾವು ಟೆನಿಸ್ ಬಾಲ್ ಕ್ರಿಕೆಟ್ಟನ್ನೇ ಹೆಚ್ಚಾಗಿ ಆಡುತ್ತಿದ್ದುದನ್ನು ನೆನಪಿಸಿಕೊಂಡರು. ನಂತರ ಲೆದರ್‌ಬಾಲ್…

Read More

ಧಾರವಾಡ ವಲಯ ೧೫ ವರ್ಷದವರೊಳಗಿನ ಬಾಲಕಿಯರ ಕ್ರಿಕೆಟ್ ತಂಡದ ಆಯ್ಕೆ ಅಕ್ಟೋಬರ್ ೫ರಂದು

ಹುಬ್ಬಳ್ಳಿಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಧಾರವಾಡ ವಲಯ ೧೫ ವರ್ಷದವರೊಳಗಿನ ಬಾಲಕಿಯರ ಕ್ರಿಕೆಟ್ ತಂಡದ ಆಯ್ಕೆ ಪರೀಕ್ಷೆ ಸೋಮವಾರ, ಅಕ್ಟೋಬರ್ ೫ ರಂದು ಇಲ್ಲಿಯ ರಾಜನಗರ ಕೆಎಸ್‌ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ೨೦೧೧ ಸಪ್ಟೆಂಬರ್ ೧ ಹಾಗೂ ೩೧ ಆಗಸ್ಟ್ ೨೦೧೪ರ ನಡುವೆ ಜನಿಸಿದ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ನಿವಾಸಿಗಳಾದ ಆಟಗಾರ್ತಿಯರು ಮಾತ್ರ ಈ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅರ್ಹರು ಎಂದು ತಿಳಿಸಿರುವ ಕೆ.ಎಸ್.ಸಿ.ಎ. ಧಾರವಾಡ ವಲಯ ನಿಮಂತ್ರಕ ವೀರಣ್ಣ…

Read More

ಏಷ್ಯನ್ ಗೇಮ್ಸ್: ಮಲೇಷ್ಯಾ ಎದುರು ೫-೧ ಜಯಭೇರಿ, ಹಾಕಿ ಚಿನ್ನ ಉಳಿಸಿಕೊಂಡ ಹರ್ಮನ್‌ಪ್ರೀತ್ ಪಡೆ, ೨೦೨೮ರ ಒಲಿಂಪಿಕ್ಸ್‌ಗೆ ನೇರ ಪ್ರವೇಶ

ಕಾಕಮಿಗಹರಾ(ಜಪಾನ)ಮಲೇಷ್ಯಾ ಎದುರು ೫-೧ ಗೋಲುಗಳ ಅಧಿಕಾರಯುತ ಜಯ ದಾಖಲಿಸಿದ ಹರ್ಮನ್‌ಪ್ರೀತ್ ಸಿಂಗ್ ಸಾರಥ್ಯದ ಭಾರತದ ಪುರುಷರ ಹಾಕಿ ತಂಡ ನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಬಾಚಿಕೊಂಡಿದೆಯಲ್ಲದೇ, ೨೦೨೮ರಲ್ಲಿ ಲಾಸ್ ಏಂಜೆಲ್ಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡೆಗಳಿಗೆ ನೇರ ಪ್ರವೇಶ ದೊರಕಿಸಿಕೊಂಡಿದೆ. ಶನಿವಾರ ಇಲ್ಲಿಯ ಗಿಫು ಪ್ರಿಫೆಕ್ಟರಲ್ ಗ್ರೀನ್ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಬಾರಿಸಿದರೆ, ಜುಗರಾಜ ಸಿಂಗ್, ಹಾರ್ದಿಕ್ ಸಿಂಗ್ ಹಾಗೂ ಶಿಲಾನಂದ ಲಾಕ್ರಾ ತಲಾ ಒಂದೊಂದು ಯಶ…

Read More

ಸನ್ಮತಿ ಸ್ಕೂಲ್‌ನಲ್ಲಿ ಸಂತಸ, ಸಂಭ್ರಮದೊಂದಿಗೆ ಅಜ್ಜ ಅಜ್ಜಿಯರ ದಿನಾಚರಣೆ

ಧಾರವಾಡಸನ್ಮತಿ ಕಿಡ್ಸ್ ವರ್ಲ್ಡ್ ಪ್ರಿ-ಪ್ರೈಮರಿ ಸ್ಕೂಲ್‌ನಲ್ಲಿ ಅಜ್ಜ–ಅಜ್ಜಿಯರ ದಿನಾಚರಣೆಯನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಅಜ್ಜ–ಅಜ್ಜಿಯರು ಪಾಲ್ಗೊಂಡು ಮಕ್ಕಳೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಹಿರಿಯರು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಮಕ್ಕಳಿಗೆ ಅಜ್ಜ–ಅಜ್ಜಿಯರ ಮಹತ್ವ, ಅವರ ಪ್ರೀತಿ, ಅನುಭವ ಹಾಗೂ ಕುಟುಂಬದಲ್ಲಿ ಹಿರಿಯರ ಪಾತ್ರವನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷವಾಗಿತ್ತು. ಮಕ್ಕಳೊಂದಿಗೆ ಹಿರಿಯರು ಬೆರೆತು ಸಂಭ್ರಮಿಸಿದ ಕ್ಷಣಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು….

Read More

6ರಂದು ಮನೋಚೇತನ ಭಾವನಮನ

ಧಾರವಾಡಇತ್ತೀಚೆಗೆ ನಿಧನರಾದ ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಅವರಿಗೆ ನುಡಿನಮನ ಸಲ್ಲಿಸುವ ನಿಟ್ಟಿನಲ್ಲಿ ಅ. 6ರಂದು ಸಂಜೆ 5.30ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಮನೋಚೇತನ ಭಾವನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಡಂಬಳ-ಗದಗದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಬೈರನಟ್ಟಿಯ ಶಾಂತಲಿಂಗ ಸ್ವಾಮೀಜಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ರಾಮಕೃಷ್ಣ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿ, ಆರ್‌ಎಸ್ಸೆಸ್‌ ಅಖಿಲ ಭಾರತ ವ್ಯವಸ್ಥಾ ಪ್ರಮುಖ…

Read More