SK Suddimane

Sk Suddimane - ಜನಧ್ವನಿಯ ಅನಾವರಣ

ನಾಳೆಯಿಂದ ನಗರೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರ್ಯೋತ್ಸವ

ಧಾರವಾಡಇಲ್ಲಿನ ಮಂಗಳವಾರ ಪೇಟೆಯಲ್ಲಿಯ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರ್ಯೋತ್ಸವ ರವಿವಾರ ದಿನಾಂಕ ೧೧-೧೦-೨೦೨೬ ರಿಂದ ಪ್ರಾರಂಭವಾಗುವುದು. ಧಾರವಾಡದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಜರುಗುವ ನವರಾತ್ರಿ ಮತ್ತು ದಸರಾ ಜಾತ್ರಾ ಮಹೋತ್ಸವವು ಉತ್ತರ ಕರ್ನಾಟಕದ ಅತ್ಯಂತ ಭಕ್ತಿಪ್ರಧಾನ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ ಉತ್ಸವಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಶರನ್ನವರಾತ್ರಿಯ ಒಂಬತ್ತು ದಿನಗಳ ಕಾಲ ಇಲ್ಲಿ ನಡೆಯುವ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ಇಡೀ ಧಾರವಾಡ ಪೇಡಾನಗರಿಗೆ ದಸರಾ ಹಬ್ಬದ ಸಡಗರವನ್ನು ತರುತ್ತವೆ. ಆರ್ಯ ವೈಶ್ಯ ಸಮಾಜದ ವತಿಯಿಂದ…

Read More

ಡಾ. ಅಜಿತಪ್ರಸಾದರಿಗೆ “ಜಿನಸೇವಾ ರತ್ನ-೨೦೨೬” ಪ್ರಶಸ್ತಿ ಪ್ರದಾನ

ಧಾರವಾಡನಗರದ ವಿವಿಧ ಒಂಬತ್ತು ಜೈನ ಸಂಘಟನೆಗಳ ಸಹಯೋಗದಲ್ಲಿ ಜೈನ ಧಾರ್ಮಿಕ ಶಿಕ್ಷಣ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು. ಮಕ್ಕಳಲ್ಲಿ ಜೈನ ಧರ್ಮದ ಮೌಲ್ಯಗಳು, ಆಚರಣೆಗಳು, ಸಂಸ್ಕಾರ, ಅಹಿಂಸೆ, ಸತ್ಯ, ತ್ಯಾಗ, ಆತ್ಮಶುದ್ದಿ ಹಾಗೂ ಜೀವದಯೆಯಂತಹ ಉನ್ನತ ಜೀವನ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಏರ್ಪಡಿಸಿದ ಪ್ರಸ್ತುತ ಶಿಬಿರವು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳು, ಜೈನ ಮಿಲನ್ ದ ಸ್ಥಾಪಕ ಕಾರ್ಯದರ್ಶಿಗಳು, ಸಮಾಜದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ, ಜೈನ ಧರ್ಮದ ಪರಂಪರೆ, ಸಂಸ್ಕೃತಿ, ತತ್ವ, ಸಿದ್ಧಾಂತ, ರಕ್ಷಿಸಲು ಸದಾ…

Read More

ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ

ಧಾರವಾಡನಗರದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಸಂಭಾಜಿ ಮಹಾರಾಜ ಸಭಾಭವನದಲ್ಲಿ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ವಿಶೇಷ ತರಬೇತಿ ಕಾರ್ಯಾಗಾರ ಜರುಗಿತು. ಡಾ. ಮಯೂರ್ ಮೋರೆ ಫೌಂಡೇಶನ್, ಕ್ರ‍್ಯಾಕಿಟ್ ಅಕ್ಯಾಡೆಮಿ, ಛತ್ರಪತಿ ಶಿವಾಜಿ ಮಹಾರಾಜ ಕಲಾ, ವಾಣಿಜ್ಯ, ವಿಜ್ಞಾನ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಈ ಕಾರ್ಯಾಗಾರ ಆಯೋಜಿಸಿತ್ತು. ಕಾರ್ಯಾಗಾರದಲ್ಲಿ ಕ್ರ‍್ಯಾಕಿಟ್ ಅಕ್ಯಾಡೆಮಿ ನಿರ್ದೇಶಕ ನವೀನ ಎಂ. ಮಾತನಾಡಿ, ಕೇಂದ್ರ ಸರ್ಕಾರದ ಎಸ್‌ಎಸ್‌ಸಿ, ರೈಲ್ವೆ, ಸೈನ್ಯ ಹಾಗೂ ರಾಜ್ಯ ಸರ್ಕಾರದ…

Read More

೧೪ ವರ್ಷದವರೊಳಗಿನ ಅಂತರ-ಕ್ಲಬ್ ಕ್ರಿಕೆಟ್ ಟೂರ್ನಿ ಇಂದಿನಿಂದ

ಹುಬ್ಬಳ್ಳಿ:೨೦೨೬-೨೭ನೇ ಸಾಲಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಧಾರವಾಡ ವಲಯ ೧೪ ವರ್ಷದವರೊಳಗಿನ ಬಾಲಕರ ಅಂತರ-ಕ್ಲಬ್ ಕ್ರಿಕೆಟ್ ಪಂದ್ಯಾವಳಿ ಶನಿವಾರ, ದಿನಾಂಕ ೧೦ರಿಂದ ಪ್ರಾರಂಭವಾಗಲಿದೆ. ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಗದಗ ಹಾಗೂ ಭಟ್ಕಳಗಳ ಒಟ್ಟು ೩೫ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು ಆ ತಂಡಗಳನ್ನು ಎಂಟು ಗುಂಪುಗಳಲ್ಲಿ ವಿಂಗಡಿಸಲಾಗಿದೆ ಎಂದು ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ತಿಳಿಸಿದ್ದು ಲೀಗ್ ಪಂದ್ಯಗಳ ಮುಕ್ತಾಯದ ನಂತರ ದಿನಾಂಕ ೨೫ ಹಾಗೂ ೨೬ ರಂದು ಪ್ರಿ-ಕ್ವಾರ್ಟರ್‌ಫೈನಲ್ಸ್, ೨೮ರಂದು ಕ್ವಾರ್ಟರ್‌ಫೈನಲ್ಸ್, ೨೯ರಂದು…

Read More

ಶಾಯ್ ಹೋಪ್ ಅಬ್ಬರದೆದುರು ಮಂಕಾದ ಶ್ರೇಯಸ್ ಪಡೆ, ವಿಂಡೀಸ್‌ಗೆ ಜಯ, ಸರಣಿಗೆ ೧-೧ರ ಸಮಸ್ಥಿತಿ

ರಾಂಚಿ:ಪ್ರಾರಂಭಿಕ ಬ್ಯಾಟರ್ ಶಾಯ್ ಹೋಪ್ ಅಬ್ಬರದ ಅಜೇಯ ಶತಕ ಸಿಡಿಸುವುದರೊಂದಿಗೆ ಪ್ರವಾಸಿ ವೆಸ್ಟ್ ಇಂಡೀಸ್ ಶುಕ್ರವಾರ ಇಲ್ಲಿ ನಡೆದ ಎರಡನೇ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇನ್ನೂ ೯ ಎಸೆತಗಳು ಬಾಕಿಯಿರುವಂತೆಯೇ ಭಾರತವನ್ನು ೬ ವಿಕೆಟ್‌ಗಳಿಂದ ಪರಾಭವಗೊಳಿಸಿತು. ಇದರೊಂದಿಗೆ ೫ ಪಂದ್ಯಗಳ ಸರಣಿ ೧-೧ರ ಸಮಸ್ಥಿತಿ ಕಂಡಿತು. ತಾವೆದುರಿಸಿದ ೪೫ ಎಸೆತಗಳಲ್ಲಿ ೬ ಬೌಂಡರಿ ಹಾಗೂ ೯ ಸಿಕ್ಸರ್‌ಗಳಿದ್ದ ೧೦೨ ರನ್ ಸಿಡಿಸಿ ಅಜೇಯರಾಗುಳಿದ ಶಾಯ್ ಹೋಪ್ ವಿಂಡೀಸ್ ಗೆಲುವಿನ ರೂವಾರಿಯೆನಿಸಿದರು.ಜೆ.ಎಸ್.ಸಿ.ಎ. ಅಂತಾರಾಷ್ಟ್ರೀಯ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ಗೆಲ್ಲಲು…

Read More

ಐಐಸಿ(IIC)ನಲ್ಲಿ ಪ್ರತಿಷ್ಠಿತ 4-ನಕ್ಷತ್ರ ರೇಟಿಂಗ್ ಪಡೆದ ಎಸ್‌ಡಿಎಂಸಿಇಟಿ

ಧಾರವಾಡಎಸ್. ಡಿ. ಎಮ್. ಇಂಜಿನಿಯರಿಂಗ್ ಕಾಲೇಜು, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ‘ಇನ್ನೋವೇಶನ್ ಕೌನ್ಸಿಲ್’ ವತಿಯಿಂದ ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ಕೊಡಮಾಡುವ 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಉದ್ಯಮಶೀಲತೆ, ಸೃಜನಶೀಲತೆ ಮತ್ತು ಈ ಕುರಿತಾದ ಸಮಸ್ಯೆ-ಪರಿಹರಿಸುವ ಕೌಶಲ್ಯಗಳ ಸಂಸ್ಕೃತಿಯನ್ನು ಬೆಳೆಸಲು ಸಂಸ್ಥೆಯು ನಡೆಸಿದ ನಿರಂತರ ಪ್ರಯತ್ನಗಳಿಗೆ ಈ ಮನ್ನಣೆ ಸಾಕ್ಷಿಯಾಗಿದೆ. ಶಿಕ್ಷಣ ಸಚಿವಾಲಯವು ಗೊತ್ತುಮಾಡಿದ ವರ್ಗಗಳ ಅಡಿಯಲ್ಲಿನ ವಿವಿಧ ಚಟುವಟಿಕೆಗಳು ಮತ್ತು ಉಪಕ್ರಮಗಳಲ್ಲಿ ಸಂಸ್ಥೆಯು ತೋರಿದ ಸಾಧನೆಯ ಆಧಾರದ ಮೇಲೆ ಈ ರೇಟಿಂಗ್ ಅನ್ನು…

Read More

ಅಳಿವಿನ ಅಂಚಿನಲ್ಲಿ ಅಂಚೆಪತ್ರ

ಧಾರವಾಡಅಂಚೆ ಪತ್ರ ಇಂದು ಮೊಬೈಲ್ ಹಾವಳಿಯಿಂದ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದು, ಹಿಂದಿನ ಕಾಲದಲ್ಲಿ ಅಂಚೆ ಪತ್ರ ಮತ್ತು ಮನಿ ಆರ್ಡರ್ ಬರುವುದನ್ನು ಜನ ಕಾಯುತ್ತಿದ್ದರು. ಪೋಸ್ಟಮನ ಯಾವಾಗ ಬರುತ್ತಾರೆ, ಅವರು ಹೊತ್ತು ತರುವ ಪತ್ರಗಳು ಜನ ಕಾತುರದಿಂದ ಕಾದು ಪತ್ರ ಪಡೆಯುತ್ತಿದ್ದರು ಎಂದು ರಾಷ್ಟ್ರೀಯ ಶಿಕ್ಷಕರ ಫೆಡರೇಷನ್ ಅಧ್ಯಕ್ಷರು ಬಸವರಾಜ ಗುರಿಕಾರ ಹೇಳಿದರು. ನಗರದ ರಂಗಾಯಣದಲ್ಲಿ ಪವರ್ ಆಫ್ ಯುತ್ಸ ಫೌಂಡೇಶನ್ ಕರ್ನಾಟಕ ವತಿಯಿಂದ ಜರುಗಿದ ಅಂಚೆ ಪತ್ರ ಕಿರುಚಿತ್ರ ಬಿಡುಗಡೆ ಮತ್ತು ಅಕ್ಷರ ತಾಯಿ ಎಂದೇ…

Read More

ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

ಅಕ್ಟೋಬರ್ 11ರಿಂದ 21ರ ವರಗೆ ಜಮಖಂಡಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಬಾಳೆಹೊನ್ನೂರುಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕ ಕೇಂದ್ರದಲ್ಲಿ ಇದೇ ಅಕ್ಟೋಬರ್ 11 ರಿಂದ 21ರ ವರೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 35ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಜರುಗಲಿದೆ. ಜಮಖಂಡಿಯ ಕಡಪಟ್ಟಿ ಶ್ರೀ ಬಸವಣ್ಣ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ಮಾನವ ಧರ್ಮ ಮಂಟಪದಲ್ಲಿ ಪ್ರತಿ ನಿತ್ಯದ ಕಾರ್ಯಕ್ರಮಗಳು ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುತ್ತವೆ ಎಂದು…

Read More

ಕರಿಯಮ್ಮ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ಧಾರವಾಡನಗರದ ಕೆಲಗೇರಿ ರಸ್ತೆಯ ಶಾಂತಿ ನಿಕೇತನ ನಗರದಲ್ಲಿರುವ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ಬರುವ ರವಿವಾರ ಅಕ್ಟೋಬರ್ ೧೧ ರಿಂದ ಒಂಬತ್ತು ದಿನಗಳ ಕಾಲ ನವರಾತ್ರಿ ಉತ್ಸವವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶಾಂತಿ ನಿಕೇತನ ನಗರದಲ್ಲಿ ನೆಲೆಗೊಂಡಿರುವ ಶ್ರೀ ಕರಿಯಮ್ಮ ದೇವಿಯನ್ನು ಶ್ರೀ ಮಹಾಕಾಳಿ, ಶ್ರೀ ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ತ್ರಿಗುಣಾತ್ಮಕ ಸ್ವರೂಪಳೆಂದು ಹೇಳಲಾಗುತ್ತಿದೆ. ದೇವಿಯು ನಂಬಿದ ಭಕ್ತರು ಮತ್ತು ರೈತರಿಗೆ ಆದಿಶಕ್ತಿಯಾಗಿದ್ದಾಳೆ. ನವರಾತ್ರಿ ಉತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ದೇವಿಗೆ ವಿವಿಧ ಅಲಂಕಾರ ಮಾಡಲಾಗುತ್ತಿದೆ….

Read More

೧೪ ವಿಕೆಟ್ ಕಬಳಿಸಿದ ತನ್ಮಯ್ ಬಲೋಡಾ

ಭಾರತಕ್ಕೆ ಆಸ್ಟ್ರೇಲಿಯಾ ಅಂಡರ್-೧೯ ತಂಡದೆದುರು ೧೦ ವಿಕೆಟ್ ಹಾಗೂ ೨-೦ ಸರಣಿ ಗೆಲುವು ಅಹಮದಾಬಾದತಾವಾಡಿದ ಮೊದಲ ಪಂದ್ಯದಲ್ಲೇ ಎಡಗೈ ಸ್ಪಿನ್ನರ್ ತನ್ಮಯ್ ಬಲೋಡಾ ೧೪ ವಿಕೆಟ್ ಕಬಳಿಸುವುದರೊಂದಿಗೆ, ಭಾರತದ ೧೯ ವರ್ಷದವರೊಳಗಿನ ತಂಡ ಇಲ್ಲಿ ನಡೆದ ಎರಡನೇ `ಯೂಥ್ ಟೆಸ್ಟ್’ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ೧೯ ವರ್ಷದವರೊಳಗಿನ ತಂಡವನ್ನು ೧೦ ವಿಕೆಟ್‌ಗಳಿಂದ ಹಣಿದು ಸರಣಿಯನ್ನು ೨-೦ ಅಂತರದಿAಲಂದ ತನ್ನದಾಗಿಸಿಕೊಂಡಿತು. ಅಮಾನತುಗೊಂಡ ರೋಹಿತ್ ಯಾದವ ಬದಲಿಗೆ ತಂಡಕ್ಕೆ ಸೇರ್ಪಡೆಯಾದ ತನ್ಮಯ್ ಬಲೋಡಾ ಎರಡನೇ ಸರದಿಯಲ್ಲೂ ಮಾರಕ ದಾಳಿ ನಿರ್ವಹಿಸಿ ೪೧…

Read More