SK Suddimane

Sk Suddimane - ಜನಧ್ವನಿಯ ಅನಾವರಣ

ಪ್ರಗತಿಯ ಜೊತೆಗೆ ಮೌಲ್ಯಗಳ ಸಂರಕ್ಷಣೆ ಅತ್ಯಗತ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ನರೇಗಲ್ಇಂದಿನ ಆಧುನಿಕ ಯುಗದಲ್ಲಿ ಭೌತಿಕ ಪ್ರಗತಿಯ ಜೊತೆಗೆ ಮೌಲ್ಯಗಳ ಸಂರಕ್ಷಣೆಯ ಅವಶ್ಯಕತೆಯಿದೆ. ಆಧುನಿಕ ಯುಗದಲ್ಲಿ ಭೌತಿಕ ಪ್ರಗತಿಯ ಜೊತೆಗೆ ನಮ್ಮ ನೆಲದ ಸಂಸ್ಕೃತಿ ಪರಂಪರೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅರಿತು ಬಾಳಲು ಮುಂದಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶನಿವಾರ ಅಬ್ಬಿಗೇರಿ ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ನೂತನ ರಥದ ಉದ್ಘಾಟನೆ ಹಾಗೂ ಲಿಂ. ಸೋಮಶೇಖರ ಶ್ರೀಗಳವರ 6ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ…

Read More

ಕವಿವಿಯಲ್ಲಿ ಅಹಿಂಸಾ ದಿನಾಚರಣೆ

ಧಾರವಾಡಕರ್ನಾಟಕ ವಿಶ್ವವಿದ್ಯಾಲಯದ ಗಾಂಧೀ ಅಧ್ಯಯನ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಕೋಶ ಹಾಗೂ ಕವಿವಿ ಗಾಂಧೀ ಶಾಂತಿ ಪ್ರತಿಷ್ಠಾನ ಕೇಂದ್ರ ಸಹಯೋಗದಲ್ಲಿ 157ನೇ ಗಾಂಧೀ ಜಯಂತಿ ಅಂಗವಾಗಿ ಅಂತರರಾಷ್ಟ್ರೀಯ ಅಹಿಂಸಾ ದಿನಾಚರಣೆ ಶುಕ್ರವಾರ ನಡೆಸಲಾಯಿತು. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಸರ್ವಧರ್ಮ ಪ್ರಾರ್ಥನೆ ನೆರವೇರಿಸಲಾಯಿತು. ಸೆಪ್ಟೆಂಬರ್ 26ರಂದು ಆಯೋಜಿಸಲಾಗಿದ್ದ ಸಿದ್ಧ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ…

Read More

2026ರ ದಸರಾ ಪ್ರಶಸ್ತಿಗಳನ್ನು ಪ್ರಕಟಪಡಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು

ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)ಪ್ರತಿ ವರುಷವೂ ವಿವಿಧ ರಂಗಗಳ ಗಣ್ಯರಿಗೆ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಿಂದ ಕೊಡ ಮಾಡುತ್ತ ಬಂದಿದೆ. ಈ ವರ್ಷ ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಅಕ್ಟೋಬರ್ 11ರಿಂದ 21ರ ವರಗೆ ಜರುಗುವ 35ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಪ್ರದಾನ ಮಾಡಲಿರುವ ಪ್ರಶಸ್ತಿಗಳ ವಿವರಗಳನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದ್ದಾರೆ. ‘ಶಿವಾಚಾರ್ಯ ರತ್ನ’ ಪ್ರದಾನಶತಮಾನದ ಅಂಚಿನ ವಯಸ್ಸಿನಲ್ಲಿಯೂ ಹೊಲ, ಗೋಶಾಲೆ,…

Read More

೪೪ ವರ್ಷಗಳ ನಂತರ ಭಾರತದ ವನಿತೆಯರಿಗೆ ಏಷ್ಯನ್ ಹಾಕಿ ಚಿನ್ನ, ೨೦೨೮ರ ಒಲಿಂಪಿಕ್ಸ್‌ಗೆ ನೇರ ಪ್ರವೇಶ

ನಾಗೋಯಾ(ಜಪಾನ)ಏಷ್ಯನ್ ಕ್ರೀಡೆಗಳಲ್ಲಿ ಮಹಿಳಾ ಹಾಕಿ ಚಿನ್ನಕ್ಕಾಗಿ ೪೪ ವರ್ಷಗಳ ಕಾಯುವಿಕೆ ಕೊನೆಗೂ ಮುಗಿದಿದೆ. ಶುಕ್ರವಾರ ನಡೆದ ಫೈನಲ್ಸ್ ನಲ್ಲಿ ಹಾಲಿ ಚಾಂಪಿಯನ್ ಚೀನದ ಎದುರು ೧-೦ ಗೋಲಿನ ರೋಚಕ ಗೆಲುವನ್ನು ದಾಖಲಿಸಿದ ಸಲಿಮಾ ಟೆಟೆ ಸಾರಥ್ಯದ ಭಾರತ ತಂಡ ಚಿನ್ನದ ಪದಕವನ್ನು ಬಾಚಿಕೊಂಡಿಲ್ಲದೇ ೨೦೨೮ರಲ್ಲಿ ಲಾಸ್ ಏಂಜೆಲ್ಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ‌ಗೂ ನೇರ ಪ್ರವೇಶ ದೊರಕಿಸಿಕೊಂಡಿತು. ಪಂದ್ಯದ ೧೦ನೇ ನಿಮಿಷದಲ್ಲಿ ಲಾಲ್ರೆಮ್‌ಸಿಯಾಮಿ ಹ್ಮಾರ್ಜೊತೆ ಬಾರಿಸಿದ ಗೋಲು ಪಂದ್ಯದ ಹಣೆಬರಹ ಬರೆಯಿತು. ಸಲಿಮಾ ಟೆಟೆ ನೀಡಿದ ನಿಖರ…

Read More

ಗಾಂಧೀಜಿ ತತ್ವಗಳ ಬಗ್ಗೆ ಜಾಗೃತಿ ಅಗತ್ಯ

ಧಾರವಾಡಗಾಂಧೀಜಿಯವರದ್ದು ಮಾದರಿ ವ್ಯಕ್ತಿತ್ವ. ಅವರ ಆದರ್ಶತೆ ಹಾಗೂ ತತ್ವಗಳ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಶ್ರೀ ಸಾಯಿ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಡಾ. ವೀಣಾ ಬಿರಾದಾರ ಹೇಳಿದರು. ನಗರದ ಸಿದ್ದವೀರ್ ಸತ್ಸಂಗ ಮತ್ತು ಬಾಸೆಲ್ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ನಡೆದ ಗಾಂಧೀಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗಾಂಧೀಜಿ ಮನುಕುಲದ ಅಸ್ಮಿತೆ. ನಾವು ಶಿಕ್ಷಕರಾಗಬಹುದು, ಸಾಹಿತಿ ಅಗಬಹುದು, ರಾಜಕಾರಣಿ ಆಗಬಹುದು, ಅಧಿಕಾರಿ ಆಗಬಹುದು, ಆದರೆ ಗಾಂಧೀಜಿ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು….

Read More

ಗಾಂಧೀಜಿ-ಶಾಸ್ತ್ರೀಜಿ ಭಾರತ ದೇಶದ ಎರಡು ನಕ್ಷತ್ರಗಳು

ಧಾರವಾಡದೇಶದ ಉದ್ಧಾರಕ್ಕಾಗಿ ಮಿನುಗಿದ ಎರಡು ನಕ್ಷತ್ರಗಳು ಗಾಂಧೀಜಿ ಮತ್ತು ಶಾಸ್ತ್ರೀಜಿ. ದೇಶದ ಸಾಂತ್ರ್ತಕ್ಕಾಗಿ ಮಹಾತ್ಮಾ ಗಾಂಧೀಜಿಯವರು ಸನಾತನ ಧರ್ಮದ ತತ್ವಗಳಾದ ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ಹೋರಾಟ ಮಾಡಿದರೇ ಲಾಲ ಬಹದ್ದೂರ ಶಾಸ್ತ್ರೀಯವರು ದೇಶಸೇವೆಯೇ ಈಶ ಸೇವೆಯ ಆದರ್ಶದ ಮೇಲೆ ಸ್ವಾತಂತ್ರ ನಂತರ ದೇಶವನ್ನು ಕಟ್ಟಲು ಶ್ರಮಿಸಿದವರು ಎಂದು ಜೆ.ಎಸ್.ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು. ಜನತಾ ಶಿಕ್ಷಣ ಸಮಿತಿಯಲ್ಲಿ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಎಂ.ಸಿ.ಎ ಕಾಲೇಜು ಹಾಗೂ…

Read More

ಗುರುಕುಲ ಜ್ಞಾನ ಸಂಸ್ಕಾರ ಕೊಡುವ ಕೇಂದ್ರವಾಗಿ ಬೆಳೆಯಲಿ: ಶ್ರೀ ರಂಭಾಪುರಿ ಜಗದ್ಗುರುಗಳು

ರೋಣಸಕಲರಿಗೂ ಒಳಿತನ್ನು ಬಯಸಿದ ಧರ್ಮ ವೀರಶೈವ. ವೀರಶೈವ ಧರ್ಮದ ಶ್ರೇಷ್ಠ ಗುರು ಪರಂಪರೆ ಆಯಾ ಕಾಲ ಘಟ್ಟಗಳಲ್ಲಿ ಬೆಳೆದುಕೊಂಡು ಬಂದಿವೆ. ಇಂದು ಪ್ರಾರಂಭಗೊಂಡ ಶ್ರೀ ಜಗದ್ಗುರು ಪಂಚಾಚಾರ್ಯ ಗುರುಕುಲ ಜ್ಞಾನ ಮತ್ತು ಸಂಸ್ಕಾರ ಕೊಡುವ ಕೇಂದ್ರವಾಗಿ ಬೆಳೆಯಲೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶುಕ್ರವಾರ ನಗರದ ಹಿರೇಮಠದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಗುರುಕುಲ ಪ್ರಾರಂಭೋತ್ಸವ ಹಾಗೂ ಲಿಂ.ಶ್ರೀ ವಿರೂಪಾಕ್ಷಯ್ಯ ಅಜ್ಜನವರ 20ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ…

Read More

ಏಷ್ಯನ್ ಗೇಮ್ಸ್: ಶುಕ್ರವಾರ ಭಾರತಕ್ಕೆ ಮತ್ತೆ ೪ ಚಿನ್ನ, ಒಟ್ಟು ಸ್ವರ್ಣಗಳ ಸಂಖ್ಯೆ ೧೫ಕ್ಕೆ

ನಾಗೋಯಾ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಶುಕ್ರವಾರ ಭಾರತದ ಪಾಲಿಗೆ ನಿಜವಾಗಿಯೂ ಶುಭ ಶುಕ್ರವಾರ’ವಾಗಿತ್ತು. ಬಾಕ್ಸಿಂಗ್‌ನಲ್ಲಿ ಮೂರು ಹಾಗೂ ಕುಸ್ತಿಯಲ್ಲಿ ಒಂದು ಹೀಗೆ ಒಂದೇ ದಿನ(ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ ೩.೩೦ರ ವರೆಗೆ) ನಾಲ್ಕು ಚಿನ್ನದ ಪದಕಗಳನ್ನು ಬಾಚಿಕೊಂಡ ಭಾರತ ಒಟ್ಟು ೭೫ ಪದಕಗಳನ್ನು(೧೫ ಚಿನ್ನ, ೨೫ ಬೆಳ್ಳಿ ಹಾಗೂ ೩೫ ಕಂಚು) ಸಂಪಾದಿಸಿ ಪದಕಗಳ ಪಟ್ಟಿಯಲ್ಲಿ ೫ನೇ ಸ್ಥಾನಕ್ಕೇರಿತ್ತು. ದಿನದ ಪ್ರಾರಂಭದಲ್ಲಿ ತಮ್ಮ ೨೯ನೇ ಹುಟ್ಟು ಹಬ್ಬವನ್ನಾಚರಿಸಿಕೊಳ್ಳುತ್ತಿದ್ದ ಭಾರತದ ಅಗ್ರ ಬಾಕ್ಸರ್ ಲವ್ಲೀನಾ ಬೊರ್ಗೊಹೇನ್ ಮಹಿಳೆಯರ ೭೫ ಕೆ.ಜಿ….

Read More

ಹೂಗಾರ ಮಾದಯ್ಯನವರ ಜಯಂತೋತ್ಸವ

ಧಾರವಾಡಜಿಲ್ಲಾ ಹೂಗಾರ ಸಮುದಾಯದ ವತಿಯಿಂದ 12ನೇ ಶತಮಾನದ ಶರಣರಲ್ಲಿ ಪ್ರಮುಖರಾದ ಹೂಗಾರ ಮಾದಯ್ಯನವರ ಜಯಂತೋತ್ಸವ ಅಂಗವಾಗಿ ಧಾರವಾಡ ಜಿಲ್ಲಾ ಹೂಗಾರ ಸಮುದಾಯದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಿ. 4 .10.2026 ರಂದು ಬೆಳಿಗ್ಗೆ 11 ಗಂಟೆಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಭವನದಲ್ಲಿ ಆಯೋಜಿಸಿದ್ದೇವೆ ಎಂದು ಜಿಲ್ಲಾ ಹೂಗಾರ ಸಮುದಾಯದ ಅಧ್ಯಕ್ಷ ಸುರೇಶ್ ಎಸ್ ಪೂಜಾರ ತಿಳಿಸಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ…

Read More

ಅಭಿಯಂತರರ ವೃತ್ತಿಗೆ ಹೊಸ ಆಯಾಮ; ಸಮಾಜದ ಅಭಿವೃದ್ಧಿಗೆ ತಾಂತ್ರಿಕ ಶಕ್ತಿ!

ACCE ಧಾರವಾಡದಿಂದ ಅಭಿಯಂತರರ ದಿನಾಚರಣೆ ಹಾಗೂ 8ನೇ ಸಂಸ್ಥಾಪನಾ ದಿನಾಚರಣೆ; ಸಾಧಕ ಅಭಿಯಂತರರಿಗೆ ಸನ್ಮಾನ ಧಾರವಾಡದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅಭಿಯಂತರರ ಪಾತ್ರ ಮಹತ್ವದ್ದಾಗಿದೆ. ತಾಂತ್ರಿಕ ಜ್ಞಾನ, ವೃತ್ತಿಪರ ಬದ್ಧತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಅಭಿಯಂತರರು ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಅಭಿಯಂತರ ಬಸವರಾಜ ಬಂಡಿವಡ್ಡರ ಹೇಳಿದರು. ನಗರದ ಆಲೂರ ವೆಂಕಟರಾವ ಸಭಾಭವನದಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ACCE), ಧಾರವಾಡ ಲೋಕಲ್ ಸೆಂಟರ್ ವತಿಯಿಂದ ಆಯೋಜಿಸಿದ್ದ…

Read More