ಏಷ್ಯನ್ ಗೇಮ್ಸ್-೨೦೨೬: ಭಾರತಕ್ಕೆ ೧೦ನೇ ಚಿನ್ನದ ಪದಕ
ನಾಗೋಯಾಉತ್ಕೃಷ್ಟ ಪ್ರದರ್ಶನ ನೀಡಿದ ಭಾರತದ ಕ್ರೀಡಾಪಟುಗಳು ಬುಧವಾರ ಮುಂಜಾನೆ ಮತ್ತೆ ನಾಲ್ಕು ಚಿನ್ನದ ಪದಕಗಳಿಗೆ ಲಗ್ಗೆ ಹಾಕುವುದರೊಂದಿಗೆ ನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಗಳಿಸಿದ ಚಿನ್ನದ ಪದಕಗಳ ಸಂಖ್ಯೆ ಹತ್ತಕ್ಕೆ ಏರಿದೆ. ಪ್ರತಿಯೊಂದು ಸಲವೂ `ಬುಲ್ಸ್ ಐಸ್’ಗೆ ಗುರಿಯಿಟ್ಟ ಸಾಹಿಲ್ ಜಾಧವ, ಗಣೇಶ ಮಣಿರತ್ನಮ್ ಟಿ. ಹಾಗೂ ಕುಶಾಲ ದಲಾಲ ಅವರಿಂದ ಕೂಡಿದ್ದ ಭಾರತದ ತಂಡ ಪುರುಷರ ಬಿಲ್ಗಾರಿಕೆ ಕಂಪೌಂಡ್ ಟೀಂ ಸ್ಪರ್ಧೆಯಲ್ಲಿ ಚೀನಾ ತಂಡವನ್ನು(೨೩೮-೨೩೯) ಒಂದೇ ಒಂದು ಪಾಯಿಂಟ್‌ನಿಂದ ಪರಾಭವಗೊಳಿಸಿ ಚಿನ್ನದ ಪದಕಕ್ಕೆ…
