SK Suddimane

Sk Suddimane - ಜನಧ್ವನಿಯ ಅನಾವರಣ

ಏಷ್ಯನ್ ಗೇಮ್ಸ್: ಭಾರತದ ಅಥ್ಲೆಟಿಕ್ಸ್ ಅಭಿಯಾನ ಸ್ವರ್ಣ ಪದಕದೊಂದಿಗೆ ಮುಕ್ತಾಯ

ನಾಗೋಯಾಏಷ್ಯನ್ ಕ್ರೀಡಾಕೂಟದ ೨೦ನೇ ಆವೃತ್ತಿಯಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳ ಕೊನೆಯ ದಿನವಾಗಿದ್ದ ಮಂಗಳವಾರದಂದು ಭಾರತ ಚಿನ್ನದ ಪದಕದೊಂದಿಗೆ ತನ್ನ ಅಥ್ಲೆಟಿಕ್ಸ್ ಅಭಿಯಾನಕ್ಕೆ ತೆರೆ ಎಳೆಯಿತು. ವಿಥ್ಯಾ ರಾಮರಾಜ್ ಸಾರಥ್ಯದ ಮಹಿಳೆಯರ ೪ ಷ ೪೦೦ ಮೀಟರ್ ರೀಲೆ ತಂಡ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಪ್ರಸಕ್ತ ಕ್ರೀಡೆಗಳ ಆರನೇ ಚಿನ್ನದ ಪದಕ ತಂದಿತ್ತಿತು. ಕಿರಣ್ ಪಹಲ್, ಅನುಭವಿ ಎಂ.ಆರ್. ಪೂವಮ್ಮ, ಪ್ರಾಚಿ ಹಾಗೂ ವಿಥ್ಯಾ ರಾಮರಾಜ್ ಅವರಿಂದ ಕೂಡಿದ್ದ ಭಾರತ ತಂಡ ೩ ನಿಮಿಷ ೨೯.೬೯ ಸೆಕಂದುಗಳಲ್ಲಿ ಗುರಿ…

Read More

ರೇಬಿಸ್ ನಿಯಂತ್ರಣಕ್ಕೆ ಜನಜಾಗೃತಿಯೇ ಅಸ್ತ್ರ!

ಧಾರವಾಡ ರೇಬಿಸ್‌ನಂತಹ ಮಾರಣಾಂತಿಕ ಕಾಯಿಲೆ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ರೇಬಿಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ಪಶುವೈದ್ಯರು ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳ ಹೇಳಿದರು. ಧಾರವಾಡದ ರಾಯಾಪುರದಲ್ಲಿರುವ ಕರ್ನಾಟಕ ಹಾಲು ಮಹಾಮಂಡಳಿ ತರಬೇತಿ ಕೇಂದ್ರದಲ್ಲಿ ವಿಶ್ವ ರೇಬಿಸ್ ದಿನಾಚರಣೆ–2026ರ ಅಂಗವಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ, ಜಿಲ್ಲಾ ಶಾಖೆ ಧಾರವಾಡದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ…

Read More

ಕೃಷಿ ಮೇಳದಲ್ಲಿ ಗಮನ ಸೆಳೆದ ಫಲಪುಷ್ಪ ಪ್ರದರ್ಶನ

ಧಾರವಾಡಧಾರವಾಡ ಕೃಷಿ ಮೇಳದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ರೈತರು ಹಾಗೂ ಸಾರ್ವಜನಿಕರ ಎಲ್ಲರ ಗಮನ ಸೆಳೆಯಿತು. ವಿವಿಧ ಬಗೆಯ ಹಣ್ಣುಗಳು, ತರಕಾರಿಗಳು ಹಾಗೂ ಆಕರ್ಷಕ ಹೂವಿನ ಅಲಂಕಾರಗಳು ಪ್ರದರ್ಶನದ ಮೆರುಗು ಹೆಚ್ಚಿಸಿವೆ. ಬಣ್ಣಬಣ್ಣದ ಹೂವುಗಳು, ಅಪರೂಪದ ಹಣ್ಣುಗಳು ಮತ್ತು ಉತ್ತಮ ಗುಣಮಟ್ಟದ ತರಕಾರಿಗಳನ್ನು ಒಂದೇ ಸ್ಥಳದಲ್ಲಿ ವೀಕ್ಷಿಸುವ ಅವಕಾಶವನ್ನು ಜನರು ಸದುಪಯೋಗಪಡಿಸಿಕೊಂಡರು. ಪ್ರದರ್ಶನದಲ್ಲಿ ಮಾವು, ಬಾಳೆ, ಪೇರಳೆ, ಸೀಬೆ ಸೇರಿದಂತೆ ವಿವಿಧ ಹಣ್ಣುಗಳ ತಳಿಗಳನ್ನು ಪ್ರದರ್ಶಿಸಲಾಗಿದೆ. ಇದರ ಜೊತೆಗೆ ಟೊಮೆಟೊ, ಮೆಣಸಿನಕಾಯಿ, ಬದನೆಕಾಯಿ, ಸೌತೆಕಾಯಿ ಹಾಗೂ ಇತರ…

Read More

ಕೆಸಿಡಿ ಕಾಲೇಜಿಗೆ ಅತ್ಯುತ್ತಮ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ–೨೦೨೬

ಧಾರವಾಡಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸಮಾರಂಭದಲ್ಲಿ, ೨೦೨೬ನೇ ಸಾಲಿನ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗಕ್ಕೆ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ–೨೦೨೬’ ನೀಡಿ ಗೌರವಿಸಲಾಯಿತು. ರಾಜ್ಯದ ‘ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಅತ್ಯುತ್ತಮ ಶಿಕ್ಷಣ ಸಂಸ್ಥೆ’ ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ, ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜಗದೀಶ್ ಕಿವುಡನವರ,…

Read More

ಏಷ್ಯನ್ ಗೇಮ್ಸ್: ಕೊನೆಗೂ ಬಂತು ಐದನೇ ಚಿನ್ನ, ಟ್ರ್ಯಾಪ್ ಶೂಟಿಂಗ್‌ನಲ್ಲಿ ನೀರು ಧಾಂಡಾ ಹೊಸ ಏಷ್ಯನ್ ದಾಖಲೆ

ನಾಗೋಯಾಪುರುಷರ ಕಬಡ್ಡಿಯಲ್ಲಿಯ ಚಿನ್ನದ ಪದಕದ ಬಳಿಕ ನಾಗೋಯಾ ಎಷ್ಯನ್ ಕ್ರೀಡಾ ಕೂಟದಲ್ಲಿ `ಹೊನ್ನಿನ ಬರ’ ಎದುರಿಸುತ್ತಿದ್ದ ಭಾರತಕ್ಕೆ ಕೊನೆಗೂ ಟ್ರ್ಯಾಪ್ ಶೂಟರ್ ನೀರು ಧಾಂಡಾ ಬಂಗಾರ ಗೆದ್ದು ಕೊಟ್ಟು ಆ ಬರ ನೀಗಿಸಿಕೊಟ್ಟಿದ್ದಾರೆ. ಮಂಗಳವಾರ ಐಚಿ ಜನರಲ್ ಶೂಟಿಂಗ್ ಗ್ಯಾಲರಿಯಲ್ಲಿ ನಡೆದ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ಫೈನಲ್‌ನಲ್ಲಿ ನೀರು ಧಾಂಡಾ ಹೊಸ ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ೧೧೮ ಪಾಯಿಂಟ್‌ಗಳೋಡನೆ ಅಗ್ರ ಸ್ಥಾನ ಸಂಪಾದಿಸಿದ್ದ ನೀರು, ಫೈನಲ್ಸ್ನಲ್ಲಿ ೨೮ ಪಾಯಿಂಟ್ಸಳೊಂದಿಗೆ ಏಷ್ಯನ್ ದಾಖಲೆ…

Read More

ಸಾಮಾಜಿಕ ಬದುಕಿಗೆ ವೀರಶೈವ ಪಂಚ ಪೀಠಗಳ ಕೊಡುಗೆ ಅಪಾರ: ಸಿ.ಎಂ. ಡಿ.ಕೆ.ಶಿ

ಬೆಂಗಳೂರುಸಕಲರ ಹಿತವನ್ನು ಸದಾ ಬಯಸಿ ಅಮೂಲ್ಯ ವಿಚಾರ ಧಾರೆಗಳನ್ನು ಕೊಟ್ಟ ಶ್ರೇಯಸ್ಸು ವೀರಶೈವ ಧರ್ಮಕ್ಕಿದೆ. ಮಾನವ ಧರ್ಮದ ಉತ್ಕೃಷ್ಟ ವಿಚಾರಗಳನ್ನು ವೀರಶೈವ ಧರ್ಮ ಪ್ರತಿಪಾದಿಸುತ್ತದೆ. ಸಾಮಾಜಿಕ ಬದುಕಿಗೆ ವೀರಶೈವ ಧರ್ಮದ ಪಂಚ ಪೀಠಗಳು ಕೊಟ್ಟ ಸಂಸ್ಕಾರ ಸಂಸ್ಕೃತಿಯ ಕೊಡುಗೆ ಅಪಾರವಾದುದೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು. ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯಿಂದ ಸಂಯೋಜಿಸಿದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು. ಎಲ್ಲ ಧರ್ಮಗಳಲ್ಲಿ ಅಡಗಿರುವ ಪರಮ…

Read More

ಏಷ್ಯನ್ ಗೇಮ್ಸ್: ಯಶ್‌ವೀರ್, ರೋಹಿತ್ಯಾದವ್‌ರಿಂದ ಪೋಡಿಯಂ ಫಿನಿಷ್’

ನಾಗೋಯಾನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಸೋಮವಾರ ಭಾರತಕ್ಕೊಂದು ಸ್ಮರಣಿಯ ದಿನ. ಇಲ್ಲಿಯ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ ನಡೆದ ಪುರುಷರ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಭಾರತಕ್ಕೆ ಒಲಿಂಪಿಕ್ಸ್ ಚಿನ್ನ ದೊರಕಿಸಿಕೊಟ್ಟ ನೀರಜ್ ಛೋಪ್ರಾ ಅವರ ಅನುಪಸ್ಥಿತಿಯಲ್ಲೂ ಭಾರತದ ಇಬ್ಬರಿಗೆ ಪೋಡಿಯಂ ಫಿನಿಷ್’ನ ಭಾಗ್ಯ ಲಭಿಸಿತು. ಯಶ್‌ವೀರ್ ಸಿಂಗ್ ಭರ್ಚಿಯನ್ನು ೮೫.೭೨ ಮೀಟರ್ ದೂರ ಎಸೆದು ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರೆ, ಭಾರತದವರೇ ಆದ ರೋಹಿತ್ ಯಾದವ ೮೪.೩೫ ಮೀಟರ್‌ಗಳ ಸಾಧನೆಯೊಂದಿಗೆ ಕಂಚಿನ ಪದಕದ ವಾರಸುದಾರರಾದರು. ಸದ್ಯ ವಿಶ್ವದ…

Read More

ಇಂದಿನ ಮಕ್ಕಳೇ ಭವಿಷ್ಯತ್ತಿನ ಆಶಾಕಿರಣಗಳು: ರಂಭಾಪುರಿ ಶ್ರೀ

ಬಾಳೆಹೊನ್ನೂರುಸಜ್ಜನ ಸತ್ಪುರುಷರ ಸಂಗಮದಲ್ಲಿ ಬೆಳೆದು ಬಂದಾಗ ಬದುಕು ಉಜ್ವಲಗೊಳ್ಳುವುದು. ಧಾರ್ಮಿಕ ಮೌಲ್ಯಗಳ ಪುನರುತ್ಥಾನ ಮತ್ತು ಪರಿಪಾಲನೆಯಿಂದ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶ್ರೀ ಜಗದ್ಗುರು ರಂಭಾಪುರಿ ಪೀಠದ ಶಾಲಾ ಆವರಣದಲ್ಲಿ ಬಿಸಿಯೂಟದ ಅಡುಗೆ ಮನೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಇಂದು ಬೆಳೆಯುವ ಮಕ್ಕಳೇ ಭವಿಷ್ಯತ್ತಿನ ಆಶಾ ಕಿರಣಗಳು. ಬಾಲ್ಯದಲ್ಲಿ ಮಕ್ಕಳಿಗೆ ದೊರಕುವ ಸಂಸ್ಕಾರ ಶಿಕ್ಷಣಗಳು ಅವರ ಮುಂದಿನ ಜೀವನಕ್ಕೆ ಭದ್ರ ಬುನಾದಿಗಳಾಗಿವೆ ಎಂದರು….

Read More

ಏಷ್ಯನ್ ಗೇಮ್ಸ್-2026 ಮೈದಾನಕ್ಕಿಳಿಯದೆಯೇ ಸೆಮಿಫೈನಲ್‍ಗೆ ಲಗ್ಗೆಯಿಟ್ಟ ಶ್ರೇಯಸ್ ಅಯ್ಯರ್ ಬಳಗ

ನಿಸ್ಸೀನ್(ಜಪಾನ)ಮೈದಾನಕ್ಕೇ ಇಳಿಯದೇ ಶ್ರೇಯಸ್ ಅಯ್ಯರ್ ಸಾರಥ್ಯದ ಭಾರತದ ಪುರುಷರ ಕ್ರಿಕೆಟ್ ತಂಡ ನಾಗೋಯಾ ಏಷ್ಯನ್ ಕ್ರೀಡಾಕೂಟದಲ್ಲಿ ಸೆಮಿಫೈನಲ್‍ಗೆ ಮುನ್ನಡೆದಿದೆ. ಇಲ್ಲಿಯ ಕರೋಗಿ ಸ್ಪೋಟ್ರ್ಸ್ ಪಾರ್ಕ್‍ನಲ್ಲಿ ಸೋಮವಾರ ಭಾರತ ಹಾಗೂ ಅಫ್ಘಾನಿಸ್ತಾನಗಳ ನಡುವೆ ಎರಡನೇ ಕ್ವಾರ್ಟರ್‍ಫೈನಲ್ ಪಂದ್ಯ ನಡೆಯಬೇಕಿತ್ತಾದರೂ, ಹಿಂದಿನ ದಿನ ರಾತ್ರಿ ಬಿದ್ದ ಮಳೆ ಹಾಗೂ ಒದ್ದೆ ಮೈದಾನದ ಕಾರಣದಿಂದಾಗಿ ಪಂದ್ಯ ಸಾಧ್ಯವಾಗಲೇ ಇಲ್ಲ. ಕ್ರೀಡಾಕೂಟದ ನಿಯಮಾವಳಿಗಳ ಪ್ರಕಾರ ಐಸಿಸಿಯ ಟಿ20 ಕ್ರಿಕೆಟ್ ರ್ಯಾಂಕಿಂಗ್‍ನಲ್ಲಿ ವಿಶ್ವದ ಅಗ್ರ ಸ್ಥಾನದಲ್ಲಿರುವ ಭಾರತ 10ನೇ ಕ್ರಮಾಂಕ ಹೊಂದಿರುವ ಅಫ್ಘಾನ್ ತಂಡವನ್ನು…

Read More

ಬಾಂಗ್ಲಾದ ಎದುರು 10-0 ಗೆಲುವು, ಹರ್ಮನ್‍ಪ್ರೀತ್ ಸಿಂಗ್ ಪಡೆ ಸೆಮೀಸ್‍ಗೆ

ನಾಗೋಯಾಗುಂಪು ಮಟ್ಟದ ಐದಕ್ಕೆ ಐದೂ ಪಂದ್ಯಗಳಲ್ಲಿ ಅಬ್ಬರಿಸಿ ಅಜೇಯವಾಗುಳಿದ ಹಾಲಿ ಚಾಂಪಿಯನ್ಸ್ ಭಾರತದ ಪುರುಷರ ಹಾಕಿ ತಂಡ ನಾಗೋಯಾ ಏಷ್ಯನ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ಸ್‍ಗೆ ಲಗ್ಗೆಯಿಟ್ಟಿದೆ. ನಾಯಕ ಹರ್ಮನ್‍ಪ್ರೀತ್ ಸಿಂಗ್ ಅವರ ಭರ್ಜರಿ ಹ್ಯಾಟ್ರಿಕ್’ ನೆರವಿನೊಡನೆ ಭಾರತ ಸೋಮವಾರ ಕಕಾಮಿಗಹಾರಾ(ಗಿಫು) ಕವಾಸಕಿ ಜುಕೋ ಸ್ಟೇಡಿಯಂನಲ್ಲಿ ಆಡಲ್ಪಟ್ಟಎ’ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 10-0 ಗೋಲುಗಳಿಂದ ಪರಾಭವಗೊಳಿಸಿತು. ಹರ್ಮನ್‍ಪ್ರೀತ್ ಸಿಂಗ್ ಪಂದ್ಯದ 27, 40 ಹಾಗೂ 45ನೇ ನಿಮಿಷಗಳಲ್ಲಿ ಗೋಲು ಬಾರಿಸಿದರೆ, ಅಭಿಷೇಕ(3ನೇ ನಿಮಿಷ), ಜುಗರಾಜ್(22ನೇ ನಿಮಿಷ),…

Read More