SK Suddimane

Sk Suddimane - ಜನಧ್ವನಿಯ ಅನಾವರಣ

ದೇಶದ ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖ: ಸಭಾಧ್ಯಕ್ಷ ಜಿ.ಎಸ್. ಪಾಟೀಲ

ಧಾರವಾಡದೇಶದ ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು. ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಶನಿವಾರ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ದೊರೆಯಬೇಕು. ವಿಶ್ವಸಂಸ್ಥೆಯು 2026 ವರ್ಷವನ್ನು ಅಂತರಾಷ್ಟ್ರೀಯ ರೈತ ಮಹಿಳಾ ವರ್ಷ ಎಂದು ಆಚರಣೆ ಮಾಡಲಾಗುತ್ತಿದೆ. ಸಶಕ್ತ ಮಹಿಳೆ ಸುಸ್ಥಿರ ಕೃಷಿ ಈ ವರ್ಷದ ಕೃಷಿ ಮೇಳದ ಧ್ಯೇಯವಾಗಿದೆ ಎಂದರು. ಮಹಿಳೆಯರು ದಿನನಿತ್ಯ ದುಡಿಯುತ್ತಿದ್ದಾರೆ. ಪಹಣಿಯಲ್ಲಿ ಮಹಿಳೆಯರ…

Read More

ಚಂದ್ರು ಅವರು ಮಾಜಿ ಮುಖ್ಯಮಂತ್ರಿ ಆಗೋದೇ ಇಲ್ಲ, ಅವರು ಶಾಶ್ವತ ಮುಖ್ಯಮಂತ್ರಿ

ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸವನ್ನು ರಂಗಭೂಮಿ ನಿರಂತರವಾಗಿ ಮಾಡಿಕೊಂಡು ಬಂದಿದೆ: ಸಿದ್ದರಾಮಯ್ಯ ಬೆಂಗಳೂರುಮುಖ್ಯಮಂತ್ರಿ ಚಂದ್ರು ತಮ್ಮ ಆತ್ಮೀಯ ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ ಅವರೊಂದಿಗೆ ಒಡನಾಟ ಹೊಂದಿರುವುದಾಗಿ ಸಿದ್ದರಾಮಯ್ಯ ಹೇಳಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನವನ್ನು ವೀಕ್ಷಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಳಿಕ ನಾಟಕದ ಪ್ರಮುಖ ಪಾತ್ರಧಾರಿ ಮುಖ್ಯಮಂತ್ರಿ ಚಂದ್ರು ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ಕಾಲ ಬಹಳ ವೇಗವಾಗಿ ಉರುಳುತ್ತದೆ. ಮುಖ್ಯಮಂತ್ರಿ ಚಂದ್ರು ಅವರು ಹಲವು ವರ್ಷಗಳಿಂದ ನಿರಂತರವಾಗಿ ಸಮಾಜಕ್ಕೆ ಹಾಗೂ…

Read More

ನಾಗೋಯಾ ಏಷ್ಯನ್ ಗೇಮ್ಸ್-೨೦೨೬: ಕಬಡ್ಡಿಯಲ್ಲಿ ಭಾರತಕ್ಕೆ ಗೋಲ್ಡನ್ ಡಬಲ್

ನಾಗೋಯಾಭರ್ಜರಿ ಪ್ರದರ್ಶನ ನೀಡಿದ ಭಾರತದ ಪುರುಷ ಹಾಗೂ ಮಹಿಳಾ ತಂಡಗಳೆರಡೂ ಕಬಡ್ಡಿಯಲ್ಲಿ ಎದುರಾಳಿ ರಿಪಬ್ಲಿಕ್ ಆಫ್ ಇರಾನ್‌ಗೆ ಚಳ್ಳೆ ಹಣ್ಣು ತಿನ್ನಿಸಿ ಚಿನ್ನದ ಪದಕಗಳನ್ನು ಬಾಚಿಕೊಂಡವು. ಟೋಕೈ ಸಿಟಿಜನ್ಸ್ ಜಿಮ್ನಾಷಿಯಂದಲ್ಲಿ ಮುಂಜಾನೆ ಪುಷ್ಪಾ ರಾಣಾ ನೇತೃತ್ವದ ಭಾರತದ ಮಹಿಳಾ ತಂಡ ಇರಾನ್ ಎದುರು ಕೇವಲ ಮೂರು ಪಾಯಿಂಟ್‌ಗಳ(೩೭-೩೪) ಗೆಲುವು ದಾಖಲಿಸಿದರೆ, ಮಧ್ಯಾಹ್ನ ಸುನೀಲ್ ಕುಮಾರ ಸಾರಥ್ಯದ ಭಾರತದ ಪುರುಷರ ತಂಡ ತೀವ್ರ ಪ್ರತಿರೋಧವೊಡ್ಡಿದ ಇರಾನ ಪುರುಷರ ತಂಡದ ಎದುರು ೪೦-೩೪ ಅಂತರದ ಗೆಲುವು ದಾಖಲಿಸಿತು. ೨೦೧೦, ೨೦೧೪…

Read More

ಸಂಸಾರ ಸಾಗರ ದಾಟಲು ಪರಮಾತ್ಮನ ಪಾದವೇ ಆಶ್ರಯ

ಧಾರವಾಡ: ಭಗವಂತನನ್ನು ಭಕ್ತಿಯಿಂದ ಸ್ಮರಿಸುವುದರ ಜೊತೆಗೆ ದೇಹ, ಮನಸ್ಸು ಹಾಗೂ ಮಾತಿನಿಂದ ವಿನಮ್ರವಾಗಿ ದೇವರ ಸೇವೆ ಮಾಡಬೇಕು. ನಾವು ಮಾಡುವ ಪ್ರತಿಯೊಂದು ಕಾರ್ಯವೂ ಭಗವಂತನಿಗೆ ಒಪ್ಪಿಗೆಯಾಗುವಂತಿರಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು. ಧಾರವಾಡದ ಉತ್ತರಾದಿ ಮಠದ ನೂತನ ಕಟ್ಟಡದ ಆವರಣದಲ್ಲಿ ನಡೆಯುತ್ತಿರುವ 31ನೇ ಚಾತುರ್ಮಾಸ್ಯ ಅಂಗವಾಗಿ ಶುಕ್ರವಾರ ನಡೆದ 49ನೇ ದಿನದ ಆಶೀರ್ವಚನದಲ್ಲಿ ಅವರು ಮಾತನಾಡಿದರು. ಶ್ರೀಕೃಷ್ಣ ಪರಮಾತ್ಮನ ಲೀಲೆಗಳು ಹಾಗೂ ಅದ್ಭುತ ಮಹಿಮೆಗಳನ್ನು ಭಾಗವತದ ದಶಮ ಸ್ಕಂದದಲ್ಲಿ ವಿವರಿಸಲಾಗಿದೆ. ಜೀವನದಲ್ಲಿ ಎದುರಾಗುವ ಸಂಸಾರದ…

Read More

ಬರ ನಿರ್ವಹಣೆ: ಮೊದಲು SDRF ನಿಧಿ ನೀಡಲಿ ರಾಜ್ಯ ಸರ್ಕಾರ

• ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ• ರಾಜ್ಯ ಸರ್ಕಾರಕ್ಕೆ ಬರ ಪರಿಸ್ಥಿತಿಯ ಗಂಭೀರತೆಯೇ ಇಲ್ಲ• ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆಗಿದ್ದಕ್ಕೆ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ• ಕಸ್ತೂರಿ ರಂಗನ್ ವರದಿ; ಕರ್ನಾಟಕ, ಜನರ ಹಿತಕ್ಕೆ ಕೇಂದ್ರ ಸರ್ಕಾರ ಯಾವತ್ತೂ ಬದ್ಧ ಬೆಂಗಳೂರುಬರ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಗಂಭೀರತೆಯೇ ಇಲ್ಲ. ಹಾಗಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಮೊದಲು SDRF ನಿಧಿ ಬಿಡುಗಡೆ ಮಾಡಲಿ ನೋಡೋಣ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದರು. ಬೆಂಗಳೂರಿನಲ್ಲಿ…

Read More

ಕೃಷಿ ಮೇಳ: ಬೀಜ ಮೇಳ ಹಳೆಯ ತಳಿಗೆ ಮಹತ್ವ ನೀಡಿ

ಹಳೆಯ ತಳಿಯ ಬೀಜಗಳನ್ನು ಸಂರಕ್ಷಣೆ ಮಾಡುವುದು ಅವಶ್ಯ ವಿಶ್ರಾಂತ ಕುಲಪತಿ ಡಾ. ಆರ್.ಆರ್. ಹಂಚಿನಾಳ ಧಾರವಾಡಕೃಷಿಯಲ್ಲಿ ತಲೆ ತಲಾಂತರದಿಂದ ಹಳೆಯ ತಳಿಗಳನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಹಿಂದಿನ ತಳಿಗಳನ್ನು ಸಂರಕ್ಷಿಸಿ ಕಾಪಾಡಬೇಕಿದೆ. ಆ ನಿಟ್ಟಿನಲ್ಲಿ ಹಳೆಯ ತಳಿಗಳ ಬೀಜಗಳನ್ನು ಸಂರಕ್ಷಣೆ ಮಾಡುವುದು ಅವಶ್ಯವಿದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಆರ್.ಆರ್. ಹಂಚಿನಾಳ ಹೇಳಿದರು. ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ಮೇಳ 2026 ರ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿದ್ದ ಬೀಜ ಮೇಳ ಉದ್ಘಾಟಿಸಿ ಅವರು…

Read More

ಕೃಷಿ ಮೇಳದಲ್ಲಿ ತಪ್ಪಿದ ಭಾರೀ ಅನಾಹುತ

7 ತಾತ್ಕಾಲಿಕ ಶೇಡ್‌ಗಳು ಧರೆಗುರುಳಿ; ಮೂವರು ಪ್ರಾಣಾಪಾಯದಿಂದ ಪಾರು ಅಗ್ನಿಶಾಮಕ ಸಿಬ್ಬಂದಿ, ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತ ತಪ್ಪಿತು ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಶುಕ್ರವಾರ ತಾತ್ಕಾಲಿಕ ಶೇಡ್‌ಗಳು ಏಕಾಏಕಿ ಕುಸಿದು ಬಿದ್ದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ್ ಘಟನೆಯಲ್ಲಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ದೊಡ್ಡ ಪ್ರಮಾಣದ ಜೀವಹಾನಿ ಸಂಭವಿಸಿಲ್ಲ. ಕೃಷಿ ಮೇಳಕ್ಕಾಗಿ ನಿರ್ಮಿಸಲಾಗಿದ್ದ ಸುಮಾರು 7 ತಾತ್ಕಾಲಿಕ ಶೇಡ್‌ಗಳು ಏಕಾಏಕಿ ಕುಸಿದು ಬಿದ್ದವು. ಶೇಡ್‌ಗಳ ಕೆಳಗೆ…

Read More

ಕೃಷಿ ಮೇಳದಲ್ಲಿ ಬ್ಯಾಂಕ್‌ಗಳಿಂದ ರೈತರಿಗೆ ಮಾಹಿತಿ

ಧಾರವಾಡಎಸ್‌ಬಿಐ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಕೃಷಿಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವು. ಕರ್ನಾಟಕ ಗ್ರಾಮೀಣ ಬ್ಯಾಂಕ್ ರೈತರಿಗೆ ವಿಶೇಷ ಮಾಹಿತಿ ನೀಡಲು ಸಂಪೂರ್ಣ ಸಿದ್ಧತೆಯೊಂದಿಗೆ ಭಾಗವಹಿಸಿದ್ದು ವಿಶೇಷವಾಗಿತ್ತು. ಕರ್ನಾಟಕ ಗ್ರಾಮೀಣ ಬ್ಯಾಂಕಿನ ವಿಶೇಷ ಮಳಿಗೆಯನ್ನು ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ್ ಭಂಡಿವಾಡ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರ ಅಭಿವೃದ್ಧಿ ಪ್ರಾದೇಶಿಕ ಅಭಿವೃದ್ಧಿಗೆ ಪೂರಕವಾಗಿದೆ. ಈ ಕಾರಣಕ್ಕೆ ಬ್ಯಾಂಕು ರೈತರಿಗೆ ಸಕಾಲಿಕ ಸಾಲ ಸೌಲಭ್ಯ ಒದಗಿಸುತ್ತಿದೆ ಎಂದರು.ರೈತರು ತಮ್ಮ ಸಂಪ್ರದಾಯಕ ಕೃಷಿಯ ಜೊತೆಗೆ ಆದಾಯ ಹೆಚ್ಚಿಸಬಲ್ಲ…

Read More

ಕೃಷಿ ಮೇಳದ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರದಿಂದ ನಾಲ್ಕು ದಿನಗಳ ವರೆಗೆ ನಡೆಯುತ್ತಿರುವ ಕೃಷಿ ಮೇಳದ ಕ್ಷಣಕ್ಷಣದ ಸುದ್ದಿ ಹಾಗೂ ವಿಶೇಷತೆಗಳು ನಿಮ್ಮ SKSUDDIMANE.COM ಅಲ್ಲಿ ಲಭ್ಯ ಧಾರವಾಡಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿ ಮೇಳದ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಬಿ. ಪ್ರಕಾಶ ಶುಕ್ರವಾರ ಚಾಲನೆ ನೀಡಿದರು. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆ.25ರಿಂದ 28ರವರೆಗೆ ನಡೆಯಲಿರುವ ಕೃಷಿ ಮೇಳದಲ್ಲಿ ಫಲಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿ ಗಮನ…

Read More

ಕೃಷಿ ಮೇಳಕ್ಕೆ ಕಳೆ; ಜಾನುವಾರು, ಕೀಟ, ಫಲ-ಪುಷ್ಪ ಪ್ರದರ್ಶನವೇ ಆಕರ್ಷಣೆ

ಧಾರವಾಡ:ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮೇಳದ ಅಂಗವಾಗಿ ನಿರ್ಮಿಸಲಾಗಿರುವ ವಿವಿಧ ಮಳಿಗೆಗಳು ಹಾಗೂ ಪ್ರದರ್ಶನಗಳು ರೈತರು, ಯುವಜನರು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಗಮನ ಸೆಳೆಯುತ್ತಿವೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣವೇ ಮಧುವನಗಿತ್ತಿಯಂತೆ ಶೃಂಗಾರಗೊಂಡಿದ್ದು, ಎಲ್ಲೆಡೆ ಕೃಷಿ ಮೇಳದ ಸಂಭ್ರಮ ಮನೆಮಾಡಿದೆ. ಧಾರವಾಡ ಕೃಷಿ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಜಾನುವಾರು ಪ್ರದರ್ಶನ ವೀಕ್ಷಕರನ್ನು ಸೆಳೆಯುತ್ತಿದೆ. ವಿವಿಧ ತಳಿಯ ಜಾನುವಾರುಗಳು, ಅವುಗಳ ವಿಶೇಷತೆ, ಸಾಕಾಣಿಕೆ ವಿಧಾನ ಹಾಗೂ ವೈಜ್ಞಾನಿಕ ನಿರ್ವಹಣೆ ಕುರಿತು…

Read More