ಮನಸ್ಸುಗಳಿಗೆ ಮದ್ದು ನೀಡಿದ ಮಾನವೀಯ ವೈದ್ಯ ಡಾ. ಆನಂದ ಪಾಂಡುರಂಗಿ
ಹಿರಿಯ ಮನೋವೈದ್ಯರ ಅಗಲಿಕೆಯಿಂದ ಉತ್ತರ ಕರ್ನಾಟಕದ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಧಾರವಾಡಮನಸ್ಸಿನ ನೋವು ಕಣ್ಣಿಗೆ ಕಾಣುವುದಿಲ್ಲ. ಅದರ ಗಾಯಕ್ಕೆ ರಕ್ತ ಸುರಿಯುವುದಿಲ್ಲ. ಆದರೆ ದೈಹಿಕ ಗಾಯಕ್ಕಿಂತಲೂ ಆಳವಾಗಿ ಮನುಷ್ಯನನ್ನು ಕಾಡಬಲ್ಲ ಮನಸ್ಸಿನ ಸಂಕಟವನ್ನು ಅರ್ಥಮಾಡಿಕೊಂಡು, ಅದಕ್ಕೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಪ್ರೀತಿ, ವಿಶ್ವಾಸ ಮತ್ತು ಭರವಸೆಯ ಮದ್ದು ನೀಡಿದವರು ಹಿರಿಯ ಮನೋವೈದ್ಯ ಡಾ. ಆನಂದ ಪಾಂಡುರಂಗಿ. ಉತ್ತರ ಕರ್ನಾಟಕದಲ್ಲಿ ಮನೋವೈದ್ಯಕೀಯ ಚಿಕಿತ್ಸೆ ಎಂದಾಗ ಬಹುಕಾಲದಿಂದ ನೆನಪಾಗುತ್ತಿದ್ದ ಪ್ರಮುಖ ಹೆಸರುಗಳಲ್ಲಿ ಡಾ. ಆನಂದ ಪಾಂಡುರಂಗಿ ಅವರದ್ದು…
