ಏಷ್ಯನ್ ಕ್ರೀಡಾಕೂಟ: ಪುರುಷರ ಹಾಕಿಯಲ್ಲಿ ಲಂಕೆಯನ್ನು ೧೬-೧ ಗೋಲುಗಳಿಂದ ಹಣಿದ ಭಾರತ
ಕಕಾಮಿಗಹಾರಾಏಷ್ಯನ್ ಕ್ರೀಡಾಕೂಟದ ಪುರುಷರ ಹಾಕಿಯ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕೆಯನ್ನು ೧೬-೧ ಗೋಲುಗಳಿಂದ ಹಣಿದ ಭಾರತ ನಾಕೌಟ್ ಹಂತದತ್ತ ಮುನ್ನಡೆಯಿತು. `ಎ’ ಗುಂಪಿನ ಮೊದಲ ಪಂದ್ಯದಲ್ಲೂ ಇಂಡೋನೇಷ್ಯಾ ಎದುರು ೧೩-೧ ಗೋಲುಗಳ ಅಂತರದಿಂದ ಗೆದ್ದಿದ್ದ ಭಾರತದ ಪರ ಮಂಗಳವಾರ ಜುಗರಾಜ ಸಿಂಗ್ ನಾಲ್ಕು ಗೋಲು ಬಾರಿಸಿದರೆ, ಅಭಿಷೇಕ್ ಮತ್ತು ದಿಲ್ಪಿಂತ್ `ಹ್ಯಾಟ್ರಿಕ್’ ಸಾಧನೆಗೈದರು. ಭಾರತದ ಗೋಲಿನ ಖಾತೆ ಪಂದ್ಯದ ೫ನೇ ನಿಮಿಷದಲ್ಲಿಯೇ ತೆರೆಯಲ್ಪಟ್ಟಿತು. ಜರ್ಮನ್‌ಪ್ರೀತ್ ಸಿಂಗ್ ನೀಡಿದ ಪಾಸ್‌ನಲ್ಲಿ ಮಂದೀಪ್ ಸಿಂಗ್ ಚೆಂಡನ್ನು ಗುರಿ ತಲುಪಿಸಿದರೆ, ಜುಗರಾಜ್…
