SK Suddimane

Sk Suddimane - ಜನಧ್ವನಿಯ ಅನಾವರಣ

ತಹಶೀಲ್ದಾರ್ ವಿರುದ್ಧದ ಆರೋಪಗಳ ತನಿಖೆಗೆ ಆಗ್ರಹ: ನಾಳೆ ಬಿಜೆಪಿ ಪ್ರತಿಭಟನೆ

ಸಾಮಾಜಿಕ ಭದ್ರತಾ ಪಿಂಚಣಿ, ಅಂಗವಿಕಲರ ಹಾಗೂ ವಿಧವಾ ವೇತನ ಸೇರಿದಂತೆ ಜನಪರ ಸಮಸ್ಯೆಗಳ ಕುರಿತು ಧ್ವನಿ ಧಾರವಾಡ: ಸಾಮಾಜಿಕ ಭದ್ರತಾ ಪಿಂಚಣಿ, ಅಂಗವಿಕಲರ ವೇತನ, ವಿಧವಾ ವೇತನ ಸೇರಿದಂತೆ ಸಾರ್ವಜನಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಧಾರವಾಡ ತಹಶೀಲ್ದಾರ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯಲು ಬಿಜೆಪಿ ಧಾರವಾಡ-71 ಗ್ರಾಮೀಣ ಘಟಕದ ವತಿಯಿಂದ ಮಂಗಳವಾರ (ಸೆ.22) ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಧಾರವಾಡದ ತಹಶೀಲ್ದಾರ್ ಕಚೇರಿ ಎದುರು ಬೆಳಗ್ಗೆ 10.30ಕ್ಕೆ ಪ್ರತಿಭಟನೆ ನಡೆಯಲಿದ್ದು, ಪಕ್ಷದ…

Read More

ಮಳೆಯಲ್ಲೂ ಕರ್ತವ್ಯ: ಗಣೇಶ ವಿಸರ್ಜನೆ ಮುಗಿಯುವವರೆಗೂ ಸ್ಥಳದಲ್ಲೇ ನಿಂತ ಎಸಿಪಿ

ಧಾರವಾಡ ಎಸಿಪಿ ಪ್ರಶಾಂತ ಸಿದ್ದನಗೌಡರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಧಾರವಾಡ: ತಡರಾತ್ರಿ ಧಾರವಾಡ ನಗರದಲ್ಲಿ ಜೋರಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯ ಸ್ವಲ್ಪ ತಡವಾಯಿತು. ಆದರೆ ಮಳೆಯನ್ನೂ ಲೆಕ್ಕಿಸದೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದಲ್ಲಿ ಮುಂದುವರಿದಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ಗಣೇಶ ವಿಸರ್ಜನೆ ಸುಗಮವಾಗಿ ನಡೆಯುವಂತೆ ಧಾರವಾಡ ಎಸಿಪಿ ಪ್ರಶಾಂತ ಸಿದ್ದನಗೌಡರ ಅವರು ಸ್ವತಃ ಸ್ಥಳದಲ್ಲೇ ನಿಂತು ಮಾರ್ಗದರ್ಶನ ನೀಡಿದರು. ವಿಸರ್ಜನೆ ಪೂರ್ಣಗೊಳ್ಳುವವರೆಗೂ ಸ್ಥಳದಲ್ಲಿದ್ದು, ಪೊಲೀಸ್ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಿದರು….

Read More

ಪಂ. ಮಳಗಿ ಜಯತೀರ್ಥಾಚಾರ್ಯರ ಸಾಧನೆಗೆ ‘ಸುಮೇರು’ ಕಿರೀಟ

ಧಾರವಾಡ ಪಂ. ಮಳಗಿ ಜಯತೀರ್ಥಾಚಾರ್ಯರು ಶ್ರೀ ಉತ್ತರಾದಿ ಮಠಕ್ಕೆ ಸಲ್ಲಿಸಿರುವ ಸೇವೆ ಹಾಗೂ ಅವರ ಧಾರ್ಮಿಕ, ಸಾಹಿತ್ಯಿಕ ಮತ್ತು ಪ್ರವಚನ ಕ್ಷೇತ್ರದ ಸಾಧನೆ ಅಪಾರವಾಗಿದೆ ಎಂದು ಶ್ರೀ ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥರು ಹೇಳಿದರು. ನಗರದ ಉತ್ತರಾದಿ ಮಠದ ನೂತನ ಕಟ್ಟಡದ ಆವರಣದಲ್ಲಿ ನಡೆಯುತ್ತಿರುವ 31ನೇ ಚಾತುರ್ಮಾಸ್ಯದ 44ನೇ ದಿನದ ಕಾರ್ಯಕ್ರಮದಲ್ಲಿ ಪಂ. ಮಳಗಿ ಜಯತೀರ್ಥಾಚಾರ್ಯರ ಕುರಿತು ರಚಿಸಲಾದ ‘ಸುಮೇರು’ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಪಂ. ಮಳಗಿ ಜಯತೀರ್ಥಾಚಾರ್ಯರು ಉತ್ತರಾದಿ ಮಠದ ಪರಂಪರೆ ಹಾಗೂ…

Read More

ಇಂದಿನಿಂದ ಮೂರು ದಿನಗಳ ವಿಶೇಷ ಅಧಿವೇಶನ

ಬರ ಪರಿಸ್ಥಿತಿ, ರೈತರ ಸಂಕಷ್ಟ ಹಾಗೂ ಕಸ್ತೂರಿ ರಂಗನ್ ವರದಿ ಪ್ರಮುಖ ಚರ್ಚೆ ಬೆಂಗಳೂರುರಾಜ್ಯದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಲು ಕರ್ನಾಟಕ ವಿಧಾನಮಂಡಲದ ಮೂರು ದಿನಗಳ ವಿಶೇಷ ಅಧಿವೇಶನ ಸೆಪ್ಟೆಂಬರ್ 21ರಿಂದ 23ರವರೆಗೆ ನಡೆಯಲಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ರಾಜ್ಯದ ಬರ ಪರಿಸ್ಥಿತಿ, ರೈತರ ಸಮಸ್ಯೆಗಳು ಮತ್ತು ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಪ್ರಮುಖವಾಗಿ ಚರ್ಚೆಗೆ ಬರಲಿವೆ. ಬರ ಪರಿಸ್ಥಿತಿಗೆ ಪರಿಹಾರ…ರಾಜ್ಯದ ಹಲವು ಭಾಗಗಳಲ್ಲಿ ಎದುರಾಗಿರುವ ಬರ, ಬೆಳೆ ನಷ್ಟ, ಕುಡಿಯುವ ನೀರಿನ…

Read More

ರಾಮನಾಮದ ಮಹಿಮೆ ಅಪಾರ

ಮೊಬೈಲ್‌ನಲ್ಲೂ ರಾಮನಾಮ ಬರೆಯುವ ವ್ಯವಸ್ಥೆ; ಭಕ್ತರು ಸದುಪಯೋಗಪಡಿಸಿಕೊಳ್ಳಲಿ: ಶ್ರೀ ಸತ್ಯಾತ್ಮತೀರ್ಥರು ಧಾರವಾಡ: ರಾಮನಾಮದ ಮಹಿಮೆ ಅಪಾರವಾಗಿದ್ದು, ಜಗತ್ತಿನಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯವೂ ಪರಮಾತ್ಮ ಶ್ರೀರಾಮಚಂದ್ರನ ಅನುಗ್ರಹದಿಂದಲೇ ನಡೆಯುತ್ತಿದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು. ಧಾರವಾಡದ ಉತ್ತರಾದಿ ಮಠದ ನೂತನ ಕಟ್ಟಡದ ಆವರಣದಲ್ಲಿ 31ನೇ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀ ಸತ್ಯಾತ್ಮತೀರ್ಥರು, 44ನೇ ದಿನದ ಆಶೀರ್ವಚನದಲ್ಲಿ ಮಾತನಾಡಿದರು. “ಪ್ರತಿಯೊಬ್ಬ ವ್ಯಕ್ತಿಯ ಚರಿತ್ರೆಯನ್ನು ಅನಾದಿ ಕಾಲದಿಂದ ಅನಂತ ಕಾಲದವರೆಗೆ ಶ್ರೀರಾಮಚಂದ್ರನು ಬರೆದಿಟ್ಟಿದ್ದಾನೆ. ಇಂತಹ ಪರಮಾತ್ಮನ ನಾಮಸ್ಮರಣೆಯನ್ನು…

Read More

ಉದ್ಯಾನವನ ಸ್ಪರ್ಧೆ ಮತ್ತೆ ಪ್ರಾರಂಭ

ಅ.12ರಿಂದ 14ರವರೆಗೆ ಸ್ಪರ್ಧೆ; ಅ.5 ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಧಾರವಾಡತೋಟಗಾರಿಕೆ ಇಲಾಖೆಯಿಂದ ಪ್ರತಿವರ್ಷ ನಡೆಯುತ್ತಿದ್ದ ಉದ್ಯಾನವನ ಸ್ಪರ್ಧೆ ಹಾಗೂ ಫಲ-ಪುಷ್ಪ ಪ್ರದರ್ಶನವನ್ನು ಈ ವರ್ಷ ಅನುದಾನದ ಕೊರತೆಯಿಂದಾಗಿ ರದ್ದುಪಡಿಸಲಾಗಿತ್ತು. ಆದರೆ ಸ್ಪರ್ಧೆಗಳು ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಉದ್ಯಾನವನ ಆಸಕ್ತರು ಹಾಗೂ ಪರಿಸರ ಪ್ರೇಮಿಗಳ ಸಹಕಾರದಲ್ಲಿ ಈ ಬಾರಿ ಸ್ಪರ್ಧೆ ಆಯೋಜಿಸಲು ನಿರ್ಧರಿಸಲಾಗಿದೆ. ಧಾರವಾಡದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಸೆ.19ರಂದು ನಡೆದ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಹಾಗೂ ಮುನವಳ್ಳಿ ಫೌಂಡೇಶನ್ ಆಶ್ರಯದಲ್ಲಿ, ತೋಟಗಾರಿಕೆ…

Read More

ಸಿರಿ ಪೌಂಡೇಶನ್‌ನಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ

ಧಾರವಾಡಸಿರಿಗನ್ನಡ ಫೌಂಡೇಶನ್ ಕರ್ನಾಟಕ ವತಿಯಿಂದ ಸಾಧಕರ ಸಂಭ್ರಮ ಕಾರ್ಯಕ್ರಮವನ್ನು ನಗರದ ಕಸಾಪ ಸಾಹಿತ್ಯ ಭವನದಲ್ಲಿ ರವಿವಾರ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾ ಸವದತ್ತಿ ಮಾತನಾಡಿ, ಇಂದಿನ ತಂತ್ರಜ್ಞಾನಕ್ಕೆ ಮಾರು ಹೋಗಿರುವ ಯುವ ಪೀಳಿಗೆಯಲ್ಲಿ ಓದುವ-ಬರೆಯುವ ಹವ್ಯಾಸವೇ ಕಡಿಮೆಯಾಗುತ್ತಿದ್ದು, ಈ ಹವ್ಯಾಸ ಎಂದಿಗೂ ಮಾಸದಿರಲಿ. ಈ ನಿಟ್ಟಿನಲ್ಲಿ ಯುವ ಪೀಳಿಗೆಯಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಆಗಬೇಕು. ಆಗ ಮಾತ್ರ ಸಾಹಿತ್ಯ ಕೃಷಿ ಆಗಲಿದೆ…

Read More

ಪ್ರಜಾಪ್ರಭುತ್ವ ಕಾಪಾಡುವುದು ನಮ್ಮೆಲ್ಲರ ಹೊಣೆ: ಡಾ. ಅಜಿತ್‌ಪ್ರಸಾದ್

ಧಾರವಾಡಪ್ರಜಾಪ್ರಭುತ್ವದ ಬಲವರ್ಧನೆಗೆ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನ ಹಕ್ಕು ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಧಾರವಾಡದಲ್ಲಿ ಜಾಗೃತಿ ಜಾಥಾ ನಡೆಯಿತು. ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆಎಸ್‌ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ, ಮಹಾನಗರ ಪಾಲಿಕೆ, ಜೆಎಸ್‌ಎಸ್‌ನ ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ರಾಜ್ಯಶಾಸ್ತ್ರ ವಿಭಾಗ ಮತ್ತು SVEEP ಸಹಯೋಗದಲ್ಲಿ ಜಾಥಾ ಆಯೋಜಿಸಲಾಗಿತ್ತು….

Read More

ಎಐ ಬೆಳವಣಿಗೆಯಲ್ಲಿ ಸಂಖ್ಯಾಶಾಸ್ತ್ರದ ಕೊಡುಗೆ ಅಪಾರ

ಧಾರವಾಡಡಾಟಾ ಸೈನ್ಸ್ ಮತ್ತು ಎಐ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಸಂಖ್ಯಾಶಾಸ್ತ್ರದ ಕೊಡುಗೆ ಬಹಳ ಇದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರದ ವಿಭಾಗದ ಮುಖ್ಯಸ್ಥ ಪ್ರೊ. ಎ.ಎಸ್. ತಳವಾರ ಅಭಿಪ್ರಾಯಪಟ್ಟರು. ಕರ್ನಾಟಕ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ವತಿಯಿಂದ ಬಿಸಿಎ ಸಭಾಂಗಣದಲ್ಲಿ ಆಯೋಜಿಸಿದ ಪ್ರಥಮ ವರ್ಷದ ಸಂಖ್ಯಾಶಾಸ್ತ್ರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಸಂಖ್ಯಾಶಾಸ್ತ್ರದ ಸ್ಟಡಿ ಸರ್ಕಲ್ ದ ‘ಸ್ಟ್ಯಾಟೋರಾ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಖ್ಯಾಶಾಸ್ತ್ರವು ದತ್ತಾಂಶಗಳ ವಿಶ್ಲೇಷಣೆ, ಕೃಷಿ ವಿಜ್ಞಾನ ಸಂಶೋಧನೆ, ವಿಮೆ, ಮಾರುಕಟ್ಟೆ ಸಂಶೋಧನೆ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ…

Read More

ನಾದಮೋದವೈಭವಂನಲ್ಲಿ ಕಲಾಸೇವೆಯ ವೈಭವ

ಧಾರವಾಡ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 31ನೇ ಚಾತುರ್ಮಾಸ್ಯದ ಅಂಗವಾಗಿ ಆಯೋಜಿಸಲಾಗಿರುವ ‘ನಾದಮೊದವೈಭವಂ’ ಕಾರ್ಯಕ್ರಮವು ಭಾನುವಾರ ದಾಸವಾಣಿ, ಭಜನೆ ಹಾಗೂ ಭರತನಾಟ್ಯದ ಅಪೂರ್ವ ಸಂಗಮದೊಂದಿಗೆ ಭಕ್ತರ ಮನಸೂರೆಗೊಂಡಿತು. ಬೆಳಗ್ಗೆಯಿಂದಲೇ ದಾಸರ ಪದಗಳ ಮಧುರ ನಾದ ಮೊಳಗುವ ಮೂಲಕ ಆಧ್ಯಾತ್ಮಿಕ ವಾತಾವರಣ ನಿರ್ಮಾಣಗೊಂಡಿತು. ಧಾರವಾಡದ ಶ್ರೀಮತಿ ರಶ್ಮಿ ದೇಶಪಾಂಡೆ ಹಾಗೂ ಶ್ರೀಮತಿ ವಾಣಿ ಸೂಳಿಭಾವಿ ಅವರ ದಾಸವಾಣಿ ಸೇವೆಯಿಂದ ಕಾರ್ಯಕ್ರಮಕ್ಕೆ ಭಕ್ತಿಪೂರ್ಣ ಆರಂಭ ದೊರೆಯಿತು. ಬಳಿಕ ಬೆಂಗಳೂರಿನ ಗಾಯಿತ್ರಿ ರವೀಂದ್ರ, ಹಾವೇರಿಯ ವಾಣಿ ಸುರೇಶ್ ಕಣೇಕಲ್ ಹಾಗೂ ಬೆಂಗಳೂರಿನ ಸುಮಾ…

Read More