SK Suddimane

Sk Suddimane - ಜನಧ್ವನಿಯ ಅನಾವರಣ

ಶುಲ್ಕ ಹೆಚ್ಚಳಕ್ಕೆ ವಿದ್ಯಾರ್ಥಿ ಸಂಘಟನೆ ವಿರೋಧ

ಪಿಯುಸಿ ಪರೀಕ್ಷಾ ಶುಲ್ಕವನ್ನು ಶೇ. 50ರಷ್ಟು ಹೆಚ್ಚಿಸಿರುವ ಸರ್ಕಾರದ ವಿದ್ಯಾರ್ಥಿ ವಿರೋಧಿ ನಿರ್ಧಾರಕ್ಕೆ ಎಐಡಿಎಸ್‌ಒ ತೀವ್ರ ಖಂಡನೆ ಧಾರವಾಡ​ರಾಜ್ಯದಲ್ಲಿ ಪದವಿ ಪೂರ್ವ (ಪಿಯು) ಕೋರ್ಸ್‌ಗಳ ಪರೀಕ್ಷಾ ಶುಲ್ಕವನ್ನು ಏಕಾಏಕಿ ಶೇ. 50ರಷ್ಟು ಹೆಚ್ಚಿಸಿ, ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿರುವುದು ಅತ್ಯಂತ ಖಂಡನೀಯ. ಈಗಾಗಲೇ ಬರಗಾಲದಿಂದ ಕಂಗಾಲಾಗಿರುವ ರಾಜ್ಯದ ರೈತರು ಮತ್ತು ಕೃಷಿ ಕೂಲಿಕಾರರ ಕುಟುಂಬಗಳ ಮೇಲೆ ರಾಜ್ಯ ಸರ್ಕಾರವು ಶುಲ್ಕ ಏರಿಕೆಯ ಬರೆ ಎಳೆದಿದೆ. ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರು…

Read More

ಮನೋಹರ ಗ್ರಂಥಮಾಲೆಗೆ ಶ್ರೀ ಸತ್ಯಾತ್ಮತೀರ್ಥರ ಭೆಟ್ಟಿ

ಧಾರವಾಡಮೂವತ್ತೊಂದನೆಯ ಚಾತುರ್ಮಾಸ್ಯವನ್ನು ಕೈಗೊಂಡಿರುವ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಗುರುಗಳು ಮನೋಹರ ಗ್ರಂಥಮಾಲೆಯ ಅಟ್ಟಕ್ಕೆ ಭೆಟ್ಟಿ ಕೊಟ್ಟು ಸಂತೋಷ ವ್ಯಕ್ತಪಡಿಸಿದರು. ತಾವು ಈ ಹಿಂದೆ ಅಟ್ಟಕ್ಕೆ ಬಂದದ್ದನ್ನು ಸ್ಮರಿಸಿಕೊಂಡ ಸ್ವಾಮೀಜಿಯವರು ಇಂದಿನ ವ್ಯವಸ್ಥಾಪಕರಾದ ಸಮೀರ ಜೋಶಿ ಅವರನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಸಮೀರ ಜೋಶಿ ಅವರು ಮನೋಹರ ಗ್ರಂಥಮಾಲೆ ಇತ್ತೀಚಿಗೆ ಪ್ರಕಟಿಸಿದ ಕೆಲವು ಕೃತಿಗಳನ್ನು ನೀಡಿದರು ಪಂ.ಸತ್ಯಧ್ಯಾನಾಚಾರ್ಯ ಕಟ್ಟಿ, ಶ್ರೀನಿವಾಸಾಚಾರ್ಯ ಮಾನ್ವಿ, ಆರ್.ಎಂ. ಕುಲಕರ್ಣಿ, ಹನುಮಂತ ಕೊಟಬಾಗಿ, ಪ್ರವೀಣ ದೊಡ್ಡಮನಿ, ಹರ್ಷ ಡಂಬಳ, ಡಾ. ಕೃಷ್ಣ ಕಟ್ಟಿ,…

Read More

ಧಾರವಾಡ ತಹಶೀಲ್ದಾರ್ ಲೋಕಾ ಬಲೆಗೆ; ತಹಶೀಲ್ದಾರ್ ಜೊತೆ ಮತ್ತ್ಯಾರು?

₹50 ಲಕ್ಷ ಲಂಚ ಪ್ರಕರಣ ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆ; ಸಮಗ್ರ ತನಿಖೆಗೆ ಆಗ್ರಹ ಧಾರವಾಡ: ಭೂ ದಾಖಲೆ ತಿದ್ದುಪಡಿ ಹಾಗೂ ಖರಾಬು ಜಮೀನಿನ ಪ್ರಕ್ರಿಯೆಗೆ ಸಂಬಂಧಿಸಿದಂತೆ ₹1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟು, ಅದರ ಮೊದಲ ಕಂತಾಗಿ ₹50 ಲಕ್ಷ ಸ್ವೀಕರಿಸುತ್ತಿದ್ದ ವೇಳೆ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಲೋಕಾಯುಕ್ತರ ಬಲೆಗೆ ಬಿದ್ದಿರುವ ಪ್ರಕರಣ ಇದೀಗ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ. ಧಾರವಾಡ ತಾಲೂಕಿನ ಯರಿಕೊಪ್ಪ ವ್ಯಾಪ್ತಿಯ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಲಂಚದ ಬೇಡಿಕೆ…

Read More

ಬದುಕಿನಲ್ಲಿ ಕೀರ್ತಿ, ಹಣವೇ ಅಂತಿಮವಲ್ಲ

ಧಾರವಾಡಪ್ರತಿ ವಿದ್ಯಾರ್ಥಿ ತನ್ನ ಜೀವನದಲ್ಲಿ ಪರೋಪಕಾರ ಬುದ್ಧಿಯ ಜತೆಗೆ ಪ್ರಾಮಾಣಿಕತನವನ್ನು ಅಳವಡಿಸಿಕೊಳ್ಳಬೇಕು. ಕಲಿತ ಶಾಲೆಗೆ ಒಳ್ಳೆಯ ಹೆಸರು ತರಬೇಕು ಎಂದು ಉತ್ತರಾದಿಮಠಾಧಿಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು. ನಗರದ ವಿದ್ಯಾರಣ್ಯ ಹೈಸ್ಕೂಲ್‌ ನಲ್ಲಿ ಶುಕ್ರವಾರ ದಿ. ರಂಗಾಚಾರ್ಯ ಗುತ್ತಲ ಅವರ ಭಾವಚಿತ್ರ ಅನಾವರಣಗೊಳಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು. ಬದುಕಿನಲ್ಲಿ ಕೀರ್ತಿ, ಹಣವೇ ಅಂತಿಮವಲ್ಲ. ಸತ್ಕಾರ್ಯ, ಪರೋಪಕಾರ ಹಾಗೂ ಧರ್ಮಮಾರ್ಗದ ಸಂಪಾದನೆ ಮುಖ್ಯ. ಒಬ್ಬರಿಗೆ ಮೋಸ ಮಾಡಿ ಗಳಿಸಿದ ಹಣ, ಕೀರ್ತಿ ತಾತ್ಕಾಲಿಕ. ಇಂದಲ್ಲ ನಾಳೆ ಅದು…

Read More

ಸಾಧನೆಯ ಪುಣ್ಯ ಭಗವಂತನಿಗೆ ಅರ್ಪಿಸಿ

ಧಾರವಾಡ‘ಭಗವಂತನ ನಾಮ ಸಂಕೀರ್ತನದ ಮಹಿಮೆಯನ್ನು ತಿಳಿಯಬೇಕು. ಭಗವಂತನ ಶಕ್ತಿ, ಸಾಮರ್ಥ್ಯ, ಭಕ್ತರ ಮೇಲಿನ ಪ್ರೀತಿ ಎಲ್ಲವನ್ನೂ ಶುಕಾಚಾರ್ಯರು ಪರಿಕ್ಷಿತನಿಗೆ ತಿಳಿಸಿಕೊಡುತ್ತಾರೆ. ಅವರವರ ಯೋಗ್ಯತೆಗೆ ತಕ್ಕಂತೆ ಪರಮಾತ್ಮ ಫಲ ಕೊಡುತ್ತಾನೆ. ಸಾಧನೆಗೆ ತಕ್ಕಂತೆ ಫಲವನ್ನು ಕೊಡುತ್ತಾನೆ. ಭಗವಂತ ಭಕ್ತಿಗೆ ಮೆಚ್ಚುತ್ತಾನೆ. ಶ್ರದ್ಧೆ, ಸಾಧನೆಗೆ ಮೆಚ್ಚಿ ಅದಕ್ಕೆ ಯೋಗ್ಯತಾನುಸಾರವಾಗಿ ಫಲ ಕೊಡುತ್ತಾನೆ. ದೇವರ ಸ್ಮರಣೆ ಮಾಡಿದರೆ ದೇವರು ಅನುಗ್ರಹ ಮಾಡುತ್ತಾನೆಯಾದರೂ, ದ್ವೇಷದಿಂದ ವ್ಯವಹಾರ ಮಾಡುವವರಿಗೆ ಭಗವಂತ ರಕ್ಷಣೆ ಮಾಡುತ್ತಾನೆ ಎಂದು ತಿಳಿಯಬಾರದು. ದೇವರ ದರ್ಶನಕ್ಕೆ ಬಂದವರಿಗೆ ಒಳಗೆ ಬಿಡದಿದ್ದಕ್ಕಾಗಿ, ಜಯ…

Read More

ಧಾರವಾಡ ಕೃಷಿಮೇಳ ದಿನಾಂಕ ಫಿಕ್ಸ್; ಸೆಪ್ಟೆಂಬರ್ 25ರಿಂದ 28ರವರೆಗೆ

ಕೃಷಿ ಎಂದರೆ ಕೇವಲ ಮಣ್ಣಿನಲ್ಲಿ ಬೀಜ ಬಿತ್ತಿ ಬೆಳೆ ತೆಗೆಯುವ ಕೆಲಸವಲ್ಲ. ಬದಲಾಗುತ್ತಿರುವ ಹವಾಮಾನ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಕಾರ್ಮಿಕರ ಕೊರತೆ, ನೀರಿನ ಸಮಸ್ಯೆ, ಕೀಟ–ರೋಗಗಳ ಬಾಧೆ, ಮಾರುಕಟ್ಟೆಯ ಅನಿಶ್ಚಿತತೆ ಸೇರಿದಂತೆ ಹಲವು ಸವಾಲುಗಳನ್ನು ರೈತರು ಪ್ರತಿದಿನ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿಯಲ್ಲಿ ಹೊಸ ತಂತ್ರಜ್ಞಾನ, ವೈಜ್ಞಾನಿಕ ಪದ್ಧತಿ ಮತ್ತು ಮೌಲ್ಯವರ್ಧನೆಯ ಮಾರ್ಗಗಳನ್ನು ರೈತರಿಗೆ ಪರಿಚಯಿಸುವ ಪ್ರಮುಖ ವೇದಿಕೆಯಾಗಿ ಧಾರವಾಡ ಕೃಷಿಮೇಳ–2026 ಮತ್ತೊಮ್ಮೆ ಸಜ್ಜಾಗಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆಪ್ಟೆಂಬರ್ 25, 26, 27 ಮತ್ತು…

Read More

ಧಾರವಾಡ ವಲಯಕ್ಕೆ ಚಿನ್ಮಯಿ ನಾಯಕಿ

ಹುಬ್ಬಳ್ಳಿನಗರದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿಯ ಚಿನ್ಮಯಿ ಬುಕಿಟಗಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ೨೩ ವರ್ಷದವರೊಳಗಿನ ಮಹಿಳೆಯರ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಧಾರವಾಡ ವಲಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಲಿದ್ದಾರೆ. ಕೆಎಸ್‌ಸಿಎ ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ಪ್ರಕಟಿಸಿರುವ ೧೫ ಸದಸ್ಯೆಯರ ತಂಡ ಹಾಗೂ ೫ ಕಾಯ್ದಿಟ್ಟ ಆಟಗಾರ್ತಿಯರ ಪಟ್ಟಿ ಇಂತಿದೆ: ಚಿನ್ಮಯಿ ಬುಕಿಟಗಾರ(ನಾಯಕಿ), ಝೋಯಾ ಇಮ್ತಿಯಾಜ್ ಖಾಜಿ(ಉಪನಾಯಕಿ), ಕಿಂಜಲ್ ಬಿ. ಪಟೇಲ, ಲಕ್ಷ್ಮೀ ಸಿ. ಬಾಗೇವಾಡಿ, ಸಂಜನಾ ಎ. ಮಲ್ಲಾಪುರ,…

Read More

ಧರ್ಮವೇ ನಮ್ಮ ಬದುಕಿನ ದಾರಿ

ಹರಪನಹಳ್ಳಿಮಾನವ ಜೀವನದ ಉಜ್ವಲ ಭವಿಷ್ಯಕ್ಕೆ ಗುರು ಪರಂಪರೆ ಮುಖ್ಯ. ಧರ್ಮ ನಮ್ಮ ಬದುಕಿನ ದಾರಿಯಾದರೆ ಸಂಸ್ಕೃತಿ ನಮ್ಮ ಶಕ್ತಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶುಕ್ರವಾರ ನಗರದ ಶ್ರೀ ಗುರು ಮಧ್ವ ಮಂಟಪದಲ್ಲಿ ನಡೆದ ಜನಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಧರ್ಮವು ಮನುಷ್ಯನಿಗೆ ಸತ್ಯ ನೀತಿ ಸಂಯಮ ಸದಾಚಾರದ ಮಾರ್ಗವನ್ನು ತೋರಿಸುತ್ತದೆ. ಗುರು ಸಂತರ ಮಾರ್ಗದರ್ಶನದಲ್ಲಿ ನಡೆಯುವ ಇಂತಹ ಸಮಾರಂಭಗಳು ಸಮಾಜದಲ್ಲಿ ಭಕ್ತಿ ಮತ್ತು ಧಾರ್ಮಿಕ ಪ್ರಜ್ಞೆಯ ಜೊತೆಗೆ…

Read More

ಸವಾಲೇ ಆಗದ ಜಪಾನ್, ಭಾರತ ಸೆಮಿಫೈನಲ್‌ಗೆ

ನಾಗೋಯಾ: ದುಬೈನಲ್ಲಿ ಇತ್ತೀಚೆಗಷ್ಟೇ ಏಷ್ಯಾ ಕಪ್ ಟಿ೨೦ ಕ್ರಿಕೆಟ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತಕ್ಕೆ ಏಷ್ಯನ್ ಕ್ರೀಡಾಕೂಟದಲ್ಲಿ ಆತಿಥೇಯ ಜಪಾನ ಸವಾಲಾಗಲೇ ಇಲ್ಲ. ಕೇವಲ ಎಂಟು ತಂಡಗಳೂ ಮಾತ್ರ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ನೇರವಾಗಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜಪಾನಿನ ಎದುರು ಇನ್ನೂ ೧೫ ಓವರ್‌ಗಳ ಆಟ ಬಾಕಿಯಿರುವಂತೆಯೇ ೮ ವಿಕೆಟ್‌ಗಳಿಂದ ಗೆದ್ದು ಬೀಗಿದ ಹರ್ಮನ್‌ಪ್ರೀತ್ ಕೌರ್ ಪಡೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ಗೆಲ್ಲಲು ಕೇವಲ ೫೮ ರನ್ ಗಳಿಸಬೇಕಿದ್ದ ಭಾರತ ೫ ಓವರ್‌ಗಳು ಮುಗಿಯುತ್ತಿದ್ದಂತೆಯೇ ಗೆಲುವಿನ ಕೇಕೆ ಹಾಕಿತು….

Read More

ಅಭಿಷೇಕ್ ಅಬ್ಬರಕ್ಕೆ ಅಫ್ಘಾನ್ ನುಚ್ಚುನೂರು

ನವದೆಹಲಿಪ್ರಾರಂಭಿಕ ಬ್ಯಾಟರ್ ಅಭಿಷೇಕ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಎದುರು ನಲುಗಿದ ಅಫ್ಘಾನಿಸ್ತಾನ ಗುರುವಾರ ರಾತ್ರಿ ನಡೆದ ಮೂರನೇ ಹಾಗೂ ಕೊನೆಯ ಟಿ೨೦ ಅಂತಾರಾಷ್ಟ್ರೀಯ ಪಂದ್ಯವನ್ನು ೧೨೭ ರನ್‌ಗಳ ಬೃಹತ್ ಅಂತರದಿಂದ ಸೋಲುವುದರೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯನ್ನು ೩-೦ `ಕ್ಲೀನ್ ಸ್ವೀಪ್’ ಮಾಡಿತು. ಇದಕ್ಕೂ ಮೊದಲು ೨೦೧೨ರಲ್ಲಿ ಕೊಲಂಬೋದಲ್ಲಿ ಆಂಗ್ಲರ ಎದುರು ೧೧೬ ರನ್‌ಗಳಿಂದ ಸೋತಿದ್ದ ಅಫ್ಘಾನ್ ತಂಡಕ್ಕೆ ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇದು ಅತ್ಯಂತ ಹೀನಾಯ ಸೋಲು. ಅರುಣ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ ಮೊದಲು…

Read More