SK Suddimane

Sk Suddimane - ಜನಧ್ವನಿಯ ಅನಾವರಣ

ಕಟ್ಟಡ ವಿವಾದದ ನಡುವೆ ಶಾಲಾ ಆವರಣವೇ ತರಗತಿ ಕೊಠಡಿ

ಜಯದೇವಿತಾಯಿ ಲಿಗಾಡೆ ಶಾಲೆಯ ವಿದ್ಯಾರ್ಥಿಗಳ ಪಾಠಕ್ಕೆ ತೊಂದರೆ; ಮಕ್ಕಳ ಹಿತದೃಷ್ಟಿಯಿಂದ ಸಮಸ್ಯೆ ಪರಿಹರಿಸಲು ಆಗ್ರಹ ಧಾರವಾಡ: ನಗರದ ಕಿಲ್ಲಾ ಪ್ರದೇಶದಲ್ಲಿರುವ ಜಯದೇವಿತಾಯಿ ಲಿಗಾಡೆ ಬಾಲಕಿಯರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಕಟ್ಟಡಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಕಟ್ಟಡದ ವಿಚಾರವಾಗಿ ಉಂಟಾಗಿರುವ ಸಮಸ್ಯೆಯಿಂದಾಗಿ ತರಗತಿಗಳನ್ನು ಸಾಮಾನ್ಯ ಕೊಠಡಿಗಳಲ್ಲಿ ನಡೆಸಲು ಸಾಧ್ಯವಾಗದೆ, ವಿದ್ಯಾರ್ಥಿನಿಯರು ತೆರೆದ ಆವರಣದಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ಕಂಡುಬಂದಿದೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಯರು ಬೆಂಚ್‌ಗಳ…

Read More

ವಿದ್ಯಾಸಂಸ್ಥೆ ಮಕ್ಕಳ ಭವಿಷ್ಯ ರೂಪಿಸುವ ಭವ್ಯ ಮಂದಿರ

ಧಾರವಾಡ: ವಿದ್ಯಾ ಸಂಸ್ಥೆ ಎಂದರೆ ಕೇವಲ ಕಲ್ಲು, ಇಟ್ಟಿಗೆ ಅಥವಾ ಮಣ್ಣಿನ ಗೋಡೆಗಳಲ್ಲ, ಅದು ಮಕ್ಕಳ ಭವಿಷ್ಯ ರೂಪಿಸುವ ಭವ್ಯ ಮಂದಿರ. ಇಂತಹ ಮಂದಿರಕ್ಕೆ ಕೀರ್ತಿ ತರುವ ರೀತಿಯಲ್ಲಿ ವಿದ್ಯಾರ್ಥಿಗಳು ಬೆಳೆಯಬೇಕು ಎಂದು ಟಾಟಾ ಹಿಟ್ಯಾಚಿ ಕಂಪನಿಯ ವಿಭಾಗೀಯ ವ್ಯವಸ್ಥಾಪಕ ಪ್ರಸಾದ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಮರಾಠಾ ವಿದ್ಯಾಪ್ರಸಾರಕ ಮಂಡಳದ ಛತ್ರಪತಿ ಶಿವಾಜಿ ಮಹಾರಾಜ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಭಾಜಿ ಮಹಾರಾಜ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಬಿಎ,…

Read More

ಅಜ್ಞಾನದ ಕತ್ತಲೆಗೆ ಗುರುವೇ ಜ್ಞಾನದ ಬೆಳಕು: ಶ್ರೀ ಸತ್ಯಾತ್ಮತೀರ್ಥರು

‘ಪ್ರಮೋದ ಭಾನು’ ಚಾತುರ್ಮಾಸ್ಯ ಸ್ಮರಣ ಸಂಚಿಕೆ ಲೋಕಾರ್ಪಣೆ ಧಾರವಾಡ: ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಿ ಜ್ಞಾನವೆಂಬ ಬೆಳಕಿನೆಡೆಗೆ ಕೊಂಡೊಯ್ಯುವಲ್ಲಿ ಗುರುವಿನ ಮಾರ್ಗದರ್ಶನ ಅತ್ಯಂತ ಮಹತ್ವದ್ದಾಗಿದೆ. ಗುರುಗಳು ಜ್ಞಾನದ ಬೆಳಕನ್ನು ತೋರಿಸುವ ಮಾರ್ಗದರ್ಶಕರಾಗಿದ್ದಾರೆ ಎಂದು ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು. ಧಾರವಾಡದ ಶ್ರೀ ಉತ್ತರಾದಿ ಮಠದ ನೂತನ ಕಟ್ಟಡದ ಆವರಣದಲ್ಲಿ 31ನೇ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀ ಸತ್ಯಾತ್ಮತೀರ್ಥರು, ಸೋಮವಾರ ನಡೆದ 45ನೇ ದಿನದ ಆಶೀರ್ವಚನದಲ್ಲಿ ಮಾತನಾಡಿದರು. ಭಾಗವತದಲ್ಲಿ ಬರುವ ಪ್ರತಿಯೊಂದು ಕಥೆಯೂ ವಿಶಿಷ್ಟವಾದ ಸಂದೇಶವನ್ನು ಹೊಂದಿದೆ….

Read More

ನಿಮ್ಮ ಬೆರಳ ತುದಿಯಲ್ಲಿ ಕ್ಷಣಕ್ಷಣದ ಸುದ್ದಿ

SKSUDDIMANE.COM — ಸುದ್ದಿಯ ಜಗತ್ತಿನ ಪ್ರತಿಯೊಂದು ಹೊಸ ಬೆಳವಣಿಗೆಯನ್ನೂ ತಲುಪಿಸುವ ನಿಮ್ಮದೇ ಸುದ್ದಿಮನೆ. ನಿಮ್ಮ ಸುತ್ತಮುತ್ತಲಿನ ಸುದ್ದಿ, ರಾಜ್ಯದ ಬೆಳವಣಿಗೆ, ಪ್ರಮುಖ ವಿದ್ಯಮಾನಗಳು ಸೇರಿದಂತೆ ಕ್ಷಣಕ್ಷಣದ ಸುದ್ದಿಗಳನ್ನು ನೇರವಾಗಿ ವಾಟ್ಸ್‌ಆಪ್‌ನಲ್ಲಿ ಪಡೆಯಲು ನಮ್ಮ ಗ್ರೂಪ್‌ಗೆ ಸೇರಿ. 📲 QR ಕೋಡ್ ಸ್ಕ್ಯಾನ್ ಮಾಡಿ… ಸುದ್ದಿಯೊಂದಿಗೆ ಸದಾ ಸಂಪರ್ಕದಲ್ಲಿರಿ. ಈಗಾಗಲೇ ಗ್ರೂಪ್‌ನಲ್ಲಿರುವ ಆತ್ಮೀಯ ಓದುಗರು, ನಿಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಪರಿಚಿತರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ. ನಿಮ್ಮ ಒಂದು ಹಂಚಿಕೆ, ಇನ್ನೊಬ್ಬರಿಗೆ ಸುದ್ದಿಯ ಕಿಟಕಿ ತೆರೆಯಬಹುದು. SKSUDDIMANE.COMಜನಧ್ವನಿಯ ಅನಾವರಣ

Read More

ಮಾಜಿ ಶಾಸಕ ಶಿರಿಯಣ್ಣವರ ಸರಳ ಸಜ್ಜನ ರಾಜಕಾರಣಿ- ಸಿಎಂ ಸ್ಮರಣೆ

ಬೆಂಗಳೂರು‘ಮಾಜಿ ಶಾಸಕ ಡಾ. ಆರ್.ಬಿ.ಶಿರಿಯಣ್ಣವರ ಸರಳ ವ್ಯಕ್ತಿ, ಸಜ್ಜನ ಅಪರೂಪದ ರಾಜಕಾರಣಿಯಾಗಿದ್ದರು’ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಮರಿಸಿದರು.  ಸೋಮವಾರ ಆರಂಭವಾದ ವಿಶೇಷ ಅಧಿವೇಶನದಲ್ಲಿ ವಿಧಾನಸಭೆಯ ಸಂತಾಪ ಸೂಚಕ ನಿರ್ಣಯದ ಮೇಲೆ ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಡಾ. ಆರ್.ಬಿ.ಶಿರಿಯಣ್ಣವರ ಬಗ್ಗೆ ಸಿಎಂ ಮಾತನಾಡಿದರು. ‘ಡಾ. ಆರ್.ಬಿ. ಶಿರಿಯಣ್ಣವರ ನಿಧನದಿಂದ ತುಂಬಲಾರದ ನಷ್ಟವಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಜನಿಸಿ 2004ರಲ್ಲಿ ನವಲಗುಂದ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆರ್.ಬಿ.ಶಿರಿಯಣ್ಣವರ ತಮ್ಮ ಜನಪರ ಕಾರ್ಯಗಳಿಂದ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು’ ಎಂದರು….

Read More

ಸಿಡಿಲಿಗೆ ಇಬ್ಬರು ರೈತ ಮಹಿಳೆಯರ ಸಾವು

ಕಮಲಾಪುರ(ಕಲಬುರಗಿ)ತಾಲೂಕಿನ ನಾಗೂರ ಗ್ರಾಮದ ಹೊರ ವಲಯದಲ್ಲಿರುವ ಜಮೀನೊಂದರಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಇಬ್ಬರು ಮಹಿಳೆಯರು ಮರಣ ಹೊಂದಿದ್ದಾರೆ. ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿಬಸಯ್ಯಾ ಗುತ್ತೇದಾರ ಅವರ ಹೊಲದಲ್ಲಿಭಾರಿ ಗುಡುಗು ಮಿಂಚಿನ ರಭಸಕ್ಕೆ  ಶೈಜಾದ್ ಬಿ ಗಂಡ ಫತ್ರು ಸಾಬ್(58) ಮತ್ತು ಲಕ್ಷ್ಮಿ ಗಂಡ ಬಸ್ಸಯ್ಯಾ ಗುತ್ತೇದಾರ (45 ) ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಂದಾಯ ನಿರೀಕ್ಷೆಕ ಆನಂದ ನರಾಳೆ,ಗ್ರಾಮ ಆಡಳಿತಧಿಕಾರಿ ಬಸವರಾಜ್ ಮಾಳಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More

ರಾಜ್ಯದ ರೈತರು, ಜನರ ರಕ್ಷಣೆಗೆ ಬದ್ಧ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟೋಕ್ತಿ

ಬೆಂಗಳೂರು ‘ರಾಜ್ಯದ ರೈತರು, ಜನರ ರಕ್ಷಣೆ ನನಗೆ ಮುಖ್ಯ. ಅದಕ್ಕೆ ಬದ್ಧನಾಗಿದ್ದೇನೆ. ದೊರೆತಿರುವ ಈ ಅವಕಾಶವನ್ನು ಬಳಸಿಕೊಂಡು ಎಲ್ಲರನ್ನೂ ರಕ್ಷಣೆ ಮಾಡಬೇಕು. ಸಮಸ್ಯೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ’ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದರು. ಸೋಮವಾರದಿಂದ ಆರಂಭಗೊಂಡಿರುವ 3 ದಿನಗಳ ವಿಶೇಷ ಅಧಿವೇಶನದ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಇದು ಮುಂದುವರಿದ ಅಧಿವೇಶನವೋ, ವಿಶೇಷ ಅಧಿವೇಶನವೋ ಸ್ಪಷ್ಟನೆ ನೀಡಿ ಎಂದು ಪಟ್ಟುಹಿಡಿದ ಸಂದರ್ಭದಲ್ಲಿ ಸಿಎಂ ಮಾತನಾಡಿದರು. ‘ಈ ಹಿಂದಿನ ಸರ್ಕಾರಗಳಲ್ಲಿ…

Read More

ಅದಾಲತ್‍ನಲ್ಲಿ 27,531 ಪ್ರಕರಣಗಳ ಇತ್ಯರ್ಥ

ಧಾರವಾಡರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಸೆಪ್ಟೆಂಬರ್ 19ರಂದು ಧಾರವಾಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 54,937 ಪ್ರಕರಣಗಳ ಪೈಕಿ 3,908 ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ತೆಗೆದುಕೊಂಡು ಅವುಗಳ ಪೈಕಿ 2,160 ಬಾಕಿ ಇದ್ದ ಪ್ರಕರಣಗಳನ್ನು ಹಾಗೂ 31,090 ಪೂರ್ವ ವ್ಯಾಜ್ಯ ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 27,531 ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸಲಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿಕೊಂಡ ಒಟ್ಟು ಮೊತ್ತ 29,11,872 ರೂಪಾಯಿಗಳು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿಕೊಂಡ ಒಟ್ಟು ಮೊತ್ತ…

Read More

ಧಾರವಾಡದಲ್ಲಿ ಅ.4ರಂದು ಪ್ರತಿಭಟನಾ ರ್ಯಾಲಿ

ಧಾರವಾಡ: ಪ್ರಜಾಪ್ರಭುತ್ವ, ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಹಾಗೂ ಮಾನವ ಘನತೆಯ ಪರವಾಗಿ ಧ್ವನಿ ಎತ್ತುವ ಉದ್ದೇಶದಿಂದ ಅಕ್ಟೋಬರ್ 4ರಂದು ಧಾರವಾಡದಲ್ಲಿ ಪ್ರತಿಭಟನಾ ರ್ಯಾಲಿ ಮತ್ತು ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಸಂಘ ಪರಿವಾರದ ರಾಜಕಾರಣ ಹಾಗೂ ಹಿಂದೂತ್ವದ ರಾಜಕೀಯದ ವಿರುದ್ಧ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ನಡೆದ ಸಮುದಾಯ ಸಾಂಸ್ಕೃತಿಕ ಕಾರ್ಯಕ್ರಮದ ಮೇಲಿನ ಹಲ್ಲೆಯ ಘಟನೆ ಸೇರಿದಂತೆ ವಿವಿಧ ಬೆಳವಣಿಗೆಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರತಿಭಟನಾ ರ್ಯಾಲಿ…

Read More

ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಫ್‌ಪಿಜಿಎ ಕಾರ್ಯಾಗಾರ

ಧಾರವಾಡ: ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಎಐಸಿಟಿಇ ಪ್ರಾಯೋಜಿತ ಆರು ದಿನಗಳ ಅಟಲ್ ಫ್ಯಾಕಲ್ಟಿ ಡೆವಲಪ್‌ಮೆಂಟ್ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಸೆ.21ರಿಂದ 26ರವರೆಗೆ ನಡೆಯಲಿರುವ ಕಾರ್ಯಕ್ರಮವನ್ನು ಇನ್ಫೋಸಿಸ್ ಹುಬ್ಬಳ್ಳಿ ಕೇಂದ್ರದ ಮುಖ್ಯಸ್ಥ ಹಾಗೂ ಇನ್ಫೋಸಿಸ್ ಲಿಮಿಟೆಡ್‌ನ ಅಸೋಸಿಯೇಟ್ ಉಪಾಧ್ಯಕ್ಷ ಅಲ್ಲಾಬಕ್ಷ್ ಅಸಾದುಲ್ಲಾ ಉದ್ಘಾಟಿಸಿದರು. ಆಧುನಿಕ ಎಐ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಧಾರಿತ ತಂತ್ರಜ್ಞಾನ ಮತ್ತು ಉಷ್ಣ ನಿರ್ವಹಣೆಯ ಅಗತ್ಯವಿದೆ. ಎಐ ಆಧಾರಿತ ವ್ಯವಸ್ಥೆಗಳಲ್ಲಿ ಎಫ್‌ಪಿಜಿಎ ತಂತ್ರಜ್ಞಾನವು ವಿದ್ಯುತ್…

Read More