SK Suddimane

Sk Suddimane - ಜನಧ್ವನಿಯ ಅನಾವರಣ

ಏಷ್ಯನ್ ಗೇಮ್ಸ್ ೨೦೨೬: ಜಪಾನ್ ಎದುರು ೩-೧ ಗೆಲುವು, ಮಹಿಳಾ ಹಾಕಿ ಸೆಮಿಫೈನಲ್‌ಗೆ ಭಾರತ

ನಾಗೋಯಾ: ಆತಿಥೇಯ ಜಪಾನ ಎದುರು ೩-೧ ಗೋಲುಗಳ ಗೆಲುವು ದಾಖಲಿಸಿದ ಭಾರತದ ಮಹಿಳಾ ಹಾಕಿ ತಂಡ ನಗೋಯಾ ಏಷ್ಯನ್ ಕ್ರೀಡೆಗಳ ಹಾಕಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಗಿಫು ಪ್ರಿಫೆಕ್ಟರಲ್ ಗ್ರೀನ್ ಸ್ಟೇಡಿಯಂನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಪಂದ್ಯದಲ್ಲಿ ಭಾರತದ ಪರ ಲಾಲ್ರೆಮ್‌ಸಿಯಾಮಿ ಹ್ಮಾರ್ಜೊತೆ(೫ನೇ ನಿಮಿಷ), ಇಶಿಕಾ ಚೌಧರಿ(೩೦ನೇ ನಿಮಿಷ) ಹಾಗೂ ನವ್ನೀತ್ ಕೌರ್(೩೬ನೇ ನಿಮಷ) ಗೋಲು ಬಾರಿಸಿದರೆ ಜಪಾನಿನ ಏಕೈಕ ಗೋಲು ಶಿಹೋ ಕೊಬಯಕಾವಾ ಅವರ ಸ್ಟಿಕ್‌ನಿಂದ ೪೬ನೇ ನಿಮಿಷದಲ್ಲಿ ದಾಖಲಾಯಿತು. ೨೦೨೩ರಲ್ಲಿ ಹ್ಯಾಂಗ್‌ಝಾನಲ್ಲಿ ಜಪಾನ್ ಎದುರೇ ಗೆದ್ದು…

Read More

ಇಂದಿನಿಂದ ಧಾರವಾಡ ಕೃಷಿ ಮೇಳ

ಕೃಷಿ ಮೇಳ ಸಿದ್ಧತಾ ಸ್ಥಳಕ್ಕೆ ಕುಲಪತಿ ಡಾ. ಎನ್.ಬಿ. ಪ್ರಕಾಶ್ ಭೇಟಿ ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆಪ್ಟೆಂಬರ್ 25 ರಿಂದ 28 ರವರೆಗೆ ನಡೆಯಲಿರುವ ಕೃಷಿ ಮೇಳ 2026 ರ ಸಿದ್ಧತಾ ಕಾರ್ಯವನ್ನು ಕುಲಪತಿ ಡಾ. ಎನ್.ಬಿ. ಪ್ರಕಾಶ್ ಅವರು ವಿಜ್ಞಾನಿಗಳು ಹಾಗೂ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಶೀಲಿಸಿದರು. ಕುಲಪತಿಗಳು ತಾವೇ ಖುದ್ದಾಗಿ ಮೇಳದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸ್ಟಾಲ್‌ಗಳು ಹಾಗೂ ತಯಾರಿಕಾ ಘಟಕವನ್ನು ವೀಕ್ಷಿಸಿದರು. ಬೃಹತ್ ಜರ್ಮನ್ ಟೆಂಟ್‌ಗಳ ಅಳವಡಿಕೆ, ಒಳಾಂಗಣ ಪ್ರದರ್ಶನ ಹಾಲ್‌ಗಳು,…

Read More

ಭಕ್ತರಿಗೆ ಭಗವಂತನೇ ಸರ್ವಸ್ವ; ಶ್ರೀ ಸತ್ಯಾತ್ಮತೀರ್ಥರು

ಧಾರವಾಡಯಾವುದೇ ಜಡ ಪದಾರ್ಥ ಏನೇ ಮಾಡಬೇಕಾದರೂ ಒಳಗಡೆ ಚೇತನ ಬೇಕೇಬೇಕು. ಸ್ವತಂತ್ರವಾದ ಭಾವವೇ ಭಗವಂತ. ಎಲ್ಲದರಲ್ಲಿಯೂ ದೇವರಿದ್ದಾನೆ. ಬಕಾಸುರನೆಂಬ ಅಸುರ ಬಕ ಪಕ್ಷಿಯ ರೂಪದಲ್ಲಿ ಕೃಷ್ಣನನ್ನು ನುಂಗಿದಾಗ ಒಳ ಹೋದ ಕೃಷ್ಣ ಪರಮಾತ್ಮ ನಿಗಿ ನಿಗಿ ಅಗ್ನಿಯಾಗಿ ಬಿಟ್ಟ. ಅತಿಯಾದ ಶಾಖವನ್ನು ತಡೆಯದ ಬಕ ಪಕ್ಷಿಯ ರೂಪದಲ್ಲಿದ್ದ ಬಕಾಸುರ ಅದನ್ನು ಹೊರ ಉಗುಳಿದಾಗ ಹೊರ ಬಂದ ಕೃಷ್ಣ ಬಕಾಸುರನನ್ನು ಸಂಹರಿಸಿ ಬಿಟ್ಟ. ಗೋವುಗಳನ್ನು ಮತ್ತು ಗೋಪಾಲಕರನ್ನು ರಕ್ಷಣೆ ಮಾಡಿದ ಪರಮಾತ್ಮ. ಎಲ್ಲಿ ನೋಡಿದರೂ ಕೃಷ್ಣ. ಕೃಷ್ಣನೇ ಸರ್ವಸ್ವ…

Read More

ಏಷ್ಯನ್ ಗೇಮ್ಸ್ ಹಾಕಿ: ಭಾರತದ ಗೆಲುವಿನ ನಾಗಾಲೋಟ, ಕೊರಿಯಾ ಎದುರು ೮-೨ ಗೋಲುಗಳ ಜಯ

ನಾಗೋಯಾತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿರುವ ಹಾಲಿ ಚಾಂಪಿಯನ್ ಭಾರತ ನಾಗೋಯಾ ಏಷ್ಯನ್ ಕ್ರೀಡಾಕೂಟದಲ್ಲಿ ಗುರುವಾರ ನಾಲ್ಕು ಸಲದ ಪ್ರಶಸ್ತಿ ವಿಜೇತ ಕೊರಿಯಾ ಎದುರು ೮-೨ ಗೋಲುಗಳ ಗೆಲುವು ದಾಖಲಿಸಿ ಗುಂಪಿನ ಅಗ್ರಸ್ಥಾನಕ್ಕೇರಿತು. ಕೊರಿಯಾ ಎದುರಿನ ಇದುವರೆಗಿನ ಅತಿ ದೊಡ್ಡ ಗೆಲುವನ್ನು ದಾಖಲಿಸಿದ ಭಾರತ ಪಂದ್ಯದ ಆರಂಭದಿಂದಲೂ ದಾಳಿಯಾಟಕ್ಕಿಳಿದು ಮೊದಲ ಕ್ವಾರ್ಟರ್‌ನಲ್ಲೇ ೪-೦ ಮುನ್ನಡೆ ಸಾಧಿಸಿತು. ಶಿಲಾನಂದ ಲಾಕ್ರಾ(೪ನೇ ನಿಮಿಷ), ಸುಖ್ಜೀತ್ ಸಿಂಗ್(೯ನೇ ನಿಮಿಷ), ನಾಯಕ ಹರ್ಮನ್‌ಪ್ರೀತ್ ಸಿಂಗ್(೧೧ನೇ ನಿಮಿಷ) ಹಾಗೂ ಅಭಿಷೇಕ್(೧೪ನೇ ನಿಮಿಷ) ಗೋಲು ಬಾರಿಸಿದರು. ನಂತರ…

Read More

ಶ್ರೀಗಳ ಪಟ್ಟಾಧಿಕಾರ ಮಹೋತ್ಸವ; ಉಚಿತ ಕಣ್ಣಿನ ತಪಾಸಣಾ ಶಿಬಿರ

ಧಾರವಾಡಮೂರುಸಾವಿರ ವಿರಕ್ತಮಠದ ಪೀಠಾಧಿಪತಿ ಶ್ರೀ ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಅವರ 25ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಪ್ರಯುಕ್ತ ಉಪ್ಪಿನಬೆಟಗೇರಿಯ ಪತ್ರಿಕಾ ವಿತರಕರ ಬಳಗದಿಂದ ಪತ್ರಿಕಾ ದಿನಾಚರಣೆ, ಪತ್ರಿಕಾ ವಿತರಕರ ದಿನಾಚರಣೆ, ವಿತಕರಿಗೆ ಬ್ಯಾಗ್ ವಿತರಣೆ ಹಾಗೂ ಡಾ. ಎಂ.ಎಂ. ಜೋಶಿ ನೇತ್ರಾಲಯದಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಶ್ರೀಮಠದಲ್ಲಿ ಸೆ.30 ರಂದು ಬೆಳಿಗ್ಗೆ 10:00 ಗಂಟೆಗೆ ಆಯೋಜಿಸಲಾಗಿದೆ. ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಕರ್ನಾಟಕ ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿಯ ಮಾಜಿ…

Read More

ಡಾ. ಆನಂದ ಪಾಂಡುರಂಗಿ ನಿಧನಕ್ಕೆ ವಿನಯ ಕುಲಕರ್ಣಿ ಸಂತಾಪ

ಧಾರವಾಡಖ್ಯಾತ ಮನೋವೈದ್ಯರು, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಹಾಗೂ ಬಡವರ ಬಂಧುವಾಗಿದ್ದ ಡಾ. ಆನಂದ ಪಾಂಡುರಂಗಿ ಅವರು ನಮ್ಮನ್ನು ಅಗಲಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ ಎಂದು ಶಾಸಕ ವಿನಯ ಕುಲಕರ್ಣಿ ಸಂತಾಪ ಸೂಚಿಸಿದ್ದಾರೆ. ಉತ್ತರ ಕರ್ನಾಟಕದ ಅನೇಕ ಜನರಿಗೆ ತಮ್ಮ ಮಾತು, ಸಲಹೆ ಹಾಗೂ ಚಿಕಿತ್ಸೆಯ ಮೂಲಕ ಮಾನಸಿಕವಾಗಿ ಕುಗ್ಗಿದ ಸಂದರ್ಭದಲ್ಲಿ ನವ ಉಲ್ಲಾಸ ಮತ್ತು ಆತ್ಮವಿಶ್ವಾಸದಿಂದ ಜೀವನ ನಡೆಸುವ ಧೈರ್ಯ ತುಂಬಿದ ಅವರು, ಸಮಾಜಮುಖಿ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಬಡವರು ಹಾಗೂ ಸಾಮಾನ್ಯ ಜನರ…

Read More

ಧಾರವಾಡ ತಾಲೂಕು ಬರಪೀಡಿತವೆಂದು ಘೋಷಣೆ

ಧಾರವಾಡಧಾರವಾಡ ತಾಲೂಕನ್ನು ಬರಪೀಡಿತ ತಾಲೂಕು ಎಂದು ಸರಕಾರ ಘೋಷಣೆ ಮಾಡಿರುವುದನ್ನು ಧಾರವಾಡ-೭೧ ಕ್ಷೇತ್ರದ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಶಿವಳ್ಳಿ ಸ್ವಾಗತಿಸಿದ್ದಾರೆ. ಮಳೆ ಅಭಾವದಿಂದ ಮುಂಗಾರು ಹಂಗಾಮಿನ ಬೆಳೆಗಳು ಸಂಪೂರ್ಣ ರೈತರ ಕೈಗೆ ಸಿಗದಂತಾದವು.ಅಲ್ಲದೇ ‌ಭೂಮಿಯಲ್ಲಿನ ತೇವಾಂಶ ಕೊರತೆಯಿಂದ ಹಿಂಗಾರು ಬಿತ್ತನೆಗೂ ಸಮಸ್ಯೆ ಎದುರಾಗಿದೆ. ಖಷ್ಕಿ ಕೃಷಿಯನ್ನೇ ಅವಲಂಬಿಸಿರುವ ಧಾರವಾಡ ತಾಲೂಕಿನ ರೈತರ‌ ನೆರವಿಗೆ ಸರಕಾರ ಸ್ಪಂದಿಸುವುದು ಅನಿವಾರ್ಯ ಆಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ವಿನಯ ಕುಲಕರ್ಣಿ ಅವರು, ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಮನವಿ…

Read More

ಮನೋವಿಜ್ಞಾನಿ ಡಾ. ಆನಂದ ಪಾಂಡುರಂಗಿ ನಿಧನಕ್ಕೆ ಸಂತಾಪ

ಶಿಕ್ಷಣ ಕ್ಷೇತ್ರದೊಂದಿಗೆ ನಿಕಟ ನಂಟು; ಶಿಕ್ಷಕರು, ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯಕ್ಕೆ ಅಪಾರ ಕೊಡುಗೆ ಧಾರವಾಡನಾಡಿನ ಖ್ಯಾತ ಮನೋವೈದ್ಯ, ಚಿಂತಕ ಹಾಗೂ ಮನೋವಿಜ್ಞಾನಿ ಡಾ. ಆನಂದ ಪಾಂಡುರಂಗಿ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಘಟಕದ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಡಾ. ಆನಂದ ಪಾಂಡುರಂಗಿ ಅವರು ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ರಾಜ್ಯದ ವಿವಿಧೆಡೆ ಸಂಚರಿಸಿ ಮನೋರೋಗ ಚಿಕಿತ್ಸೆ ಹಾಗೂ ಮಾನಸಿಕ ಆರೋಗ್ಯದ…

Read More

ರಾಜ್ಯ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಬಿಜೆಪಿ ಪ್ರತಿಭಟನೆ

ಧಾರವಾಡರಾಜ್ಯ ಸರ್ಕಾರದ ಆರ್ಥಿಕ ನೀತಿಗಳು ಹಾಗೂ ರಾಜ್ಯದ ಹಣಕಾಸು ನಿರ್ವಹಣೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿಯ ಹುಬ್ಬಳ್ಳಿ–ಧಾರವಾಡ ಮಹಾನಗರ ಹಾಗೂ ಧಾರವಾಡ ಗ್ರಾಮಾಂತರ ಜಿಲ್ಲಾ ಘಟಕಗಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಬಿಜೆಪಿ ಮುಖಂಡ ಜಯತೀರ್ಥ ಕಟ್ಟಿ ಮಾತನಾಡಿ, “ರಾಜ್ಯದ ಹಣಕಾಸು ಪರಿಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಸರ್ಕಾರ ಜನರಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು. ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ, ಜನರ ಮೂಲಭೂತ ಅಗತ್ಯಗಳಿಗೆ ಆದ್ಯತೆ…

Read More

ಅಜಾತಶತ್ರುವಾಗಿ ಬದುಕಿದ ಡಾ. ಆನಂದ ಪಾಂಡುರಂಗಿ

ಧಾರವಾಡಶರಣರನ್ನು ಮರಣದಲ್ಲಿ ನೋಡು ಎನ್ನುವಂತೆ ಡಾ. ಆನಂದ ಪಾಂಡುರಂಗಿಯವರ ಅನಿರೀಕ್ಷಿತ ಮರಣದಿಂದ ಸಮಾಜ ತಲ್ಲಣಗೊಂಡಿದೆ. ಸಾವಿರಾರು ಮನೋರೋಗಿಗಳು ಅನಾಥವಾದ ಅನುಭವ ಅನುಭವಿಸುವಂತಾಗಿದೆ. ಸದಾ ಹಸನ್ಮುಖಿಯಾಗಿ ನಗುತ್ತಲೇ ಮಾತಿಗಿಳಿಯುತ್ತಿದ್ದ ಅವರು ಎಂದೂ ಯಾರೊಡನೆಯೂ ಏರುಧ್ವನಿಯಲ್ಲಿ ಮಾತನಾಡಿದವರಲ್ಲ. ನಾಡಿನ ತುಂಬ ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಮನೆ ಮಾತಾದವರು. ತುಂಬಾ ಕಷ್ಟದಲ್ಲಿ ಬದುಕನ್ನು ಕಟ್ಟಿಕೊಂಡು ಸಾರ್ಥಕ ಬದುಕನ್ನು ಸಾಗಿಸಿದವರು.ಪ್ರೀತಿಗೆ ಯಾವ ಪಂಥವನ್ನು ಬೆರೆಸದವರು. ಎಲ್ಲ ವಲಯ ಮತ್ತು ವರ್ಗದ ಜನರೊಡನೆ ಬೆರೆತುಹೋಗುತ್ತಿದ್ದರು. ಅಜಾತಶತ್ರುವಾಗಿ ಬದುಕು ಸಾಗಿಸಿದವರು. ಯರೊಂದಿಗೂ…

Read More