ರಾಜ್ಯದ ವಿಕಾಸದಲ್ಲಿ ಸರಕಾರಿ ನೌಕರರ ಪಾತ್ರ ಅಧಿಕ
ಬೆಳಗಾವಿ ವಿಭಾಗ ಮಟ್ಟದ ನಿವೃತ್ತ ನೌಕರರ ಸಮಾವೇಶ ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ನುಡಿ ಧಾರವಾಡಸರಕಾರದ ನಿರ್ದೇಶನದಂತೆ ಎಲ್ಲ ಇಲಾಖೆಗಳ ಮೂಲಕವೇ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಜನಪರ ಕೆಲಸಗಳು ನಡೆಯುತ್ತವೆ. ಹಾಗಾಗಿ ರಾಜ್ಯದ ವಿಕಾಸದಲ್ಲಿ ಸರಕಾರಿ ನೌಕರರ ಪಾತ್ರ ಅಧಿಕವಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಜಿ.ಎಸ್. ಪಾಟೀಲ ಹೇಳಿದರು. ಸೋಮವಾರ ನಗರದ ಕ.ವಿ.ವ.ಸಂಘದ ಡಾ.ಪಾಪು ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಬೆಳಗಾವಿ(ಕಿತ್ತೂರು ಕರ್ನಾಟಕ) ವಿಭಾಗ ಮಟ್ಟದ ಸರಕಾರಿ ನಿವೃತ್ತ…
