ಸಂಗೀತ ಘರಾಣೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ: ಪಂ. ಎಂ. ವೆಂಕಟೇಶಕುಮಾರ
ಧಾರವಾಡಇಂದಿನ ವಿದ್ಯಾರ್ಥಿಗಳು ಸಂಗೀತ ಪರಂಪರೆ, ಘರಾಣೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಿದೆ. ಸಂಗೀತ ಕೇಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಹಿಂದೂಸ್ತಾನಿ ಗಾಯಕ ಪಂ. ಎಂ. ವೆಂಕಟೇಶಕುಮಾರ ಅಭಿಪ್ರಾಯಪಟ್ಟರು. ನಗರದ ಹಿರೇಮಲ್ಲೂರ ಈಶ್ವರನ್ ಮಹಾವಿದ್ಯಾಲಯದಲ್ಲಿ ಸ್ವರಸೇನ ಪಂ. ಸಂಗಮೇಶ್ವರ ಗುರವ ಸಂಗೀತ ಪ್ರತಿಷ್ಠಾನವು ಏರ್ಪಡಿಸಿದ್ದ ಪಂ. ಕೈವಲ್ಯಕುಮಾರ ಗುರವ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ತಂದೆ ಸ್ವರಸೇನ ಪಂ.ಸಂಗಮೇಶ್ವರ ಗುರವ ಅವರನ್ನೇ ಗುರುವಾಗಿಸಿಕೊಂಡ ಪಂ.ಕೈವಲ್ಯಕುಮಾರ ಅವರು ತಂದೆಯನ್ನೇ ಮೀರಿಸುವ ಹಾಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ…
