ದಸರಾ ಸಂಭ್ರಮದಲ್ಲಿ ಯುವಕರ ಬಲಪ್ರದರ್ಶನ
ಗ್ರಾಮೀಣ ಕ್ರೀಡಾ ಪರಂಪರೆಗೆ ಮರುಜೀವ ನೀಡಿದ ಸಂಗ್ರಾಮ ಕಲ್ಲು ಎತ್ತುವ ಪ್ರದರ್ಶನ ಕಲಘಟಗಿಒಂದು ಕಡೆ ಮಹಾನವಮಿ ಹಬ್ಬದ ಸಂಭ್ರಮ, ಮತ್ತೊಂದೆಡೆ ಯುವಕರ ಶಕ್ತಿ ಮತ್ತು ಸಾಹಸದ ಅನಾವರಣ! ಗ್ರಾಮದೇವಿ ಆವರಣದಲ್ಲಿ ನೆರೆದಿದ್ದ ಗ್ರಾಮಸ್ಥರ ಕಣ್ಣುಗಳೆಲ್ಲ ಯುವಕರತ್ತ ನೆಟ್ಟಿದ್ದವು. ಯುವಕರು ಒಂದೊಂದಾಗಿ ಸಂಗ್ರಾಮ ಕಲ್ಲುಗಳನ್ನು ಎತ್ತುತ್ತಿದ್ದಂತೆ ನೋಡುಗರಲ್ಲಿ ಕುತೂಹಲ ಹೆಚ್ಚುತ್ತಿತ್ತು. ಇಂತಹ ರೋಚಕ ಕ್ಷಣಗಳಿಗೆ ಸಾಕ್ಷಿಯಾದದ್ದು ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮ. ಮಹಾನವಮಿ ಹಬ್ಬದ ಅಂಗವಾಗಿ ಬುಧವಾರ ಗ್ರಾಮದ ಗ್ರಾಮದೇವಿ ಆವರಣದಲ್ಲಿ ಆಯೋಜಿಸಿದ್ದ ಸಂಗ್ರಾಮ ಕಲ್ಲು ಎತ್ತುವ ಪ್ರದರ್ಶನ…
