SK Suddimane

Sk Suddimane - ಜನಧ್ವನಿಯ ಅನಾವರಣ

ಶ್ರೇಷ್ಠ ರೈತ, ರೈತ ಮಹಿಳೆ ಪ್ರಶಸ್ತಿ

ಧಾರವಾಡನೀವು ಕೃಷಿಯಲ್ಲಿ ಸಾಧನೆ ಮಾಡಿದ್ದೀರಾ, ಕೃಷಿಯನ್ನೇ ನಂಬಿಕೊಂಡು ಒಳ್ಳೆಯ ಬೆಳೆಗಳನ್ನು ಬೆಳೆಯುತ್ತೀದೀರಾ, ಸಾವಯವ ಕೃಷಿಗೆ ಅವಲಂಭಿತರಾಗಿ ಕಾರ್ಯ ನಿರ್ವಹಿಸುತ್ತೀದ್ದೀರಾ… ಹಾಗಾದರೆ ನೀವು ಪ್ರಶಸ್ತಿ ಪಡೆಯಬಹುದು. ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್ 23 ರಿಂದ 25 ರವರೆಗೆ ಬಾಗಲಕೋಟೆಯ ಉದ್ಯಾನಗಿರಿ ಆವರಣದಲ್ಲಿ ಹವಾಮಾನ ವೈಪರೀತ್ಯದಲ್ಲಿ ಸುಸ್ಥಿರ ತೋಟಗಾರಿಕೆ ಎಂಬ ಧ್ಯೇಯವಾಕ್ಯದೊಂದಿಗೆ ತೋಟಗಾರಿಕಾ ಮೇಳ ಹಮ್ಮಿಕೊಳ್ಳಲಾಗಿದೆ. ತೋಟಗಾರಿಕೆ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವಿಶಿಷ್ಟ ಕೃಷಿಕರಿಗೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ…

Read More

ಇತಿಹಾಸ ಅಕಾದೆಮಿ ಪ್ರಶಸ್ತಿಗೆ ಶಾಸನತಜ್ಞ ಡಾ. ನಾಗಯ್ಯ ಭಾಜನ: ನಾಳೆ ಪ್ರದಾನ

ಧಾರವಾಡಕರ್ನಾಟಕ ಇತಿಹಾಸ ಅಕಾದೆಮಿ ಕೊಡಮಾಡುವ ಪ್ರತಿಷ್ಠಿತ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಗೆ ನಗರದ ಕ.ವಿ.ವಿ. ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಂಸೋಧಕ ಹಾಗೂ ಶಾಸನತಜ್ಞ ಡಾ. ಜೆ.ಎಂ. ನಾಗಯ್ಯ ಭಾಜನರಾಗಿದ್ದಾರೆ. 50 ಸಾವಿರ ರೂ.ಗಳ ನಗದು ಪುರಸ್ಕಾರ ಹಾಗೂ ಸ್ಮರಣಿಕೆಯನ್ನು ಪ್ರಶಸ್ತಿ ಒಳಗೊಂಡಿದೆ. ಬೀದರ ಜಿಲ್ಲೆ ಬಾಲ್ಕಿ ಹಿರೇಮಠದ ಶ್ರೀಚೆನ್ನಬಸವೇಶ್ವರ ಗುರುಕುಲ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಅಕ್ಟೋಬರ್ 23 ರಿಂದ 25 ರವರೆಗೆ ಜರುಗಲಿರುವ ಕರ್ನಾಟಕ ಇತಿಹಾಸ ಅಕಾದೆಮಿಯ ೪೦ನೆಯ…

Read More

ನೀರಾವರಿ ಕ್ಷೇತ್ರದ ಶ್ರೇಷ್ಠ ಎಂಜಿನಿಯರ್ ವಿ.ವಿ. ದೇಶಪಾಂಡೆ ಜನ್ಮ ಶತಮಾನೋತ್ಸವಕ್ಕೆ ಸಿದ್ಧತೆ

ಅ.  24ರಂದು ಧಾರವಾಡದಲ್ಲಿ ಕಾರ್ಯಕ್ರಮ; ಗಣ್ಯರಿಂದ ನುಡಿನಮನ, ಹಿರಿಯ ಎಂಜಿನಿಯರ್‌ಗಳಿಗೆ ಸನ್ಮಾನ ಧಾರವಾಡ: ನೀರಾವರಿ ಅಭಿವೃದ್ಧಿ, ಎಂಜಿನಿಯರಿಂಗ್ ಕ್ಷೇತ್ರದ ಶ್ರೇಷ್ಠತೆ ಹಾಗೂ ದಕ್ಷ ಆಡಳಿತದ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದ ದಿವಂಗತ ಎಂಜಿನಿಯರ್ ವಿಠ್ಠಲರಾವ್ ವೈಕುಂಠರಾವ್ ದೇಶಪಾಂಡೆ(ವಿ.ವಿ. ದೇಶಪಾಂಡೆ) ಅವರ ಜನ್ಮಶತಮಾನೋತ್ಸವವನ್ನು ಅಕ್ಟೋಬರ್ 24ರಂದು ಧಾರವಾಡದಲ್ಲಿ ಆಚರಿಸಲಾಗುತ್ತಿದೆ. ನಗರದ ಆಲೂರು ವೆಂಕಟರಾವ್ ಭವನದಲ್ಲಿ ಶನಿವಾರ ಸಂಜೆ 4 ಗಂಟೆಗೆ ನಡೆಯಲಿರುವ ಈ ಸಮಾರಂಭವು ಅವರ ಜೀವನ, ವೃತ್ತಿಪರ ಸಾಧನೆಗಳು ಹಾಗೂ ಸಾರ್ವಜನಿಕ ಸೇವೆಯ ಕೊಡುಗೆಗಳನ್ನು ಸ್ಮರಿಸುವ ಉದ್ದೇಶ…

Read More

ಧಾರವಾಡದ ಶ್ರೀ ಶಿರಡಿ ಸಾಯಿಬಾಬಾ ಮಂದಿರಕ್ಕೆ ರಜತ ಮಹೋತ್ಸವದ ಸಂಭ್ರಮ

ಧಾರವಾಡಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಸೇವಾ ಕಾರ್ಯಗಳ ಮೂಲಕ ಭಕ್ತರ ಶ್ರದ್ಧಾಕೇಂದ್ರವಾಗಿರುವ ಧಾರವಾಡದ ಶ್ರೀ ಶಿರಡಿ ಸಾಯಿಬಾಬಾ ಮಂದಿರವು 24 ವರ್ಷಗಳನ್ನು ಪೂರೈಸಿ, 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ರಜತ ಮಹೋತ್ಸವ ಆಚರಿಸಲು ಮಂದಿರದ ಆಡಳಿತ ಮಂಡಳಿ ನಿರ್ಧರಿಸಿದೆ. ಧಾರವಾಡದ ಪುಣ್ಯಕ್ಷೇತ್ರವಾದ ಶ್ರೀ ಶಿರಡಿ ಸಾಯಿಬಾಬಾ ಮಂದಿರವು ಆರಂಭದಲ್ಲಿ ಕೇವಲ 10×10 ಅಡಿ ತಾತ್ಕಾಲಿಕ ತಗಡಿನ ಶೆಡ್‌ನಲ್ಲಿ ಶ್ರೀ ಗೋಪಾಲರಾವ ಪಾಂಡೆಯವರಿಂದ ಸ್ಥಾಪನೆಯಾಯಿತು. ಅಲ್ಲಿ ಸಾಯಿಬಾಬಾ ಅವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಲು ಪ್ರಾರಂಭಿಸಲಾಯಿತು. ಬಳಿಕ…

Read More

ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವೇ ವಿಜಯದಶಮಿಯ ನಿಜವಾದ ಅರ್ಥ: ಶ್ರೀ ರಂಭಾಪುರಿ ಜಗದ್ಗುರುಗಳು

ಜಮಖಂಡಿಅಧರ್ಮದ ನಾಶ ಧರ್ಮದ ವಿಜಯ ವಿಜಯದಶಮಿ. ಅಜ್ಞಾನದ ಮೇಲೆ ಜ್ಞಾನದ ವಿಜಯ ಅನ್ಯಾಯದ ಮೇಲೆ ನ್ಯಾಯದ ವಿಜಯ ನಿಜವಾದ ವಿಜಯದಶಮಿಯ ಸಂದೇಶವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಬುಧವಾರ ವಿಜಯ ದಶಮಿಯಂದು ಶಮಿ ಸೀಮೋಲಂಘನ ನೆರವೇರಿಸಿ ಸಿಂಹಾಸನಾರೋಹಣ ಮಾಡಿ ವಿಜಯದಶಮಿಯ ಶಾಂತಿ ಸಂದೇಶ ನೀಡುತ್ತಿದ್ದ ಅವರು, ಧರ್ಮ ಎಂದರೆ ಕೇವಲ ಆಚರಣೆಗಳಲ್ಲ. ಧರ್ಮವೆಂದರೆ ಸತ್ಯ ನುಡಿಯುವ ನ್ಯಾಯಪರ ನಿಲ್ಲುವ ಹಸಿದವರಿಗೆ ಅನ್ನ ಕೊಡುವ ಅಸಹಾಯಕರಿಗೆ ನೆರವಾಗುವ ಮಹಿಳೆಯರನ್ನು ಗೌರವಿಸುವ ಮತ್ತು ಪ್ರತಿಯೊಂದು ಜೀವಿಯಲ್ಲಿಯೂ…

Read More

ರಣಜಿ ಪಂದ್ಯ ನೀರಸ ಡ್ರಾ, ಸೌರಾಷ್ಟ್ರಕ್ಕೆ ೩ ಪಾಯಿಂಟ್, ೧ ಪಾಯಿಂಟ್‌ನಿಂದ ತೃಪ್ತಿ ಪಟ್ಟುಕೊಂಡ ಕರ್ನಾಟಕ

ಬೆಂಗಳೂರುಕರ್ನಾಟಕ ಹಾಗೂ ಸೌರಾಷ್ಟ್ರಗಳ ನಡುವೆ ನಗರದ ಹೊರ ವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆದಿದ್ದ ಎಲೀಟ್ ಗುಂಪಿನ ನಾಲ್ಕು ದಿನಗಳ ಲೀಗ್ ಪಂದ್ಯ ಬುಧವಾರ ನೀರಸ ಡ್ರಾನಲ್ಲಿ ಮುಕ್ತಾಯಗೊಂಡಿದೆ. ಮೊದಲ ಸರದಿಯಲ್ಲಿ ೭ ರನ್‌ಗಳ ಮಹತ್ವದ ಮುನ್ನಡೆ ಸಂಪಾದಿಸಿದ್ದಕ್ಕಾಗಿ ಸೌರಾಷ್ಟ್ರ ೩ ಪಾಯಿಂಟ್ ಗಳಿಸಿಕೊಂಡಿತು. ಮಹತ್ವದ ಹಂತಗಳಲ್ಲಿ ಕೆಲವು ಕ್ಯಾಚ್‌ಗಳನ್ನು ನೆಲಕ್ಕೆ ಹಾಕಿದ ಆತಿಥೇಯ ಕರ್ನಾಟಕ ಕೇವಲ ಒಂದೇ ಒಂದು ಪಾಯಿಂಟ್‌ಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಎಲೀಟ್ `ಬಿ’ ಗುಂಪಿನಲ್ಲಿರುವ ಕರ್ನಾಟಕ ಇದರೊಂದಿಗೆ ತಾನಾಡಿರುವ ಎರಡು ಪಂದ್ಯಗಳಿಂದ ಕೇವಲ ಎರಡೇ…

Read More

ವಿಜಯದಶಮಿ ಸ್ನೇಹ ಸಿಂಚನದ ಸಿಹಿ ಹಬ್ಬ

ಅಮ್ಮಿನಬಾವಿಯ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿಜಯದಶಮಿ ಶಾಂತಿ ಸಂದೇಶ ಧಾರವಾಡಬದುಕಿನ ವಿದ್ಯಮಾನಗಳಲ್ಲಿ ಇರಬಹುದಾದ ಶತ್ರುಭಾವಗಳನ್ನು ಮರೆತು ಮಿತ್ರಭಾವಗಳನ್ನು ಬೆಳೆಸುವ ವಿಜಯದಶಮಿ ಸ್ನೇಹ ಸಿಂಚನದ ಸಿಹಿ ಹಬ್ಬವಾಗಿದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ವಿಜಯದಶಮಿಯ ಅಂಗವಾಗಿ ಬುಧವಾರ ಶ್ರೀಮಠದಲ್ಲಿ ಶಮೀಪೂಜೆ ನೆರವೇರಿಸಿ ವಿಜಯದಶಮಿಯ ಶಾಂತಿ ಸಂದೇಶ ಅನುಗ್ರಹಿಸಿದರು. ಭಾರತದ ಸನಾತನ ಸಂಸ್ಕೃತಿ-ಪರಂಪರೆಯ ಹಬ್ಬಗಳು ಲೋಕಕಲ್ಯಾಣದ ಆಶಯಗಳನ್ನು ಹೊಂದಿವೆ. ನಿಸರ್ಗವನ್ನು ಕೇಂದ್ರೀಕರಿಸಿ ಮನುಷ್ಯತ್ವವನ್ನು ಅರಿಯುವಲ್ಲಿ ನಮ್ಮ ಭಾರತೀಯ…

Read More

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶ್ರೀಮನ್ ಮಧ್ವಾಚಾರ್ಯರ ಜಯಂತಿ ಆಚರಣೆ

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ನಡೆದ ಕಾರ್ಯಕ್ರಮ ಧಾರವಾಡಕರ್ನಾಟಕ ಸರ್ಕಾರದ ವತಿಯಿಂದ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಜಯಂತಿ ಆಚರಣೆಯ ಅಂಗವಾಗಿ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಯಂತಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಗೀತಾ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸಂಕ್ಷಿಪ್ತವಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾಧ್ವ ಬ್ರಾಹ್ಮಣ ಸಭಾದ ಹಿರಿಯ…

Read More

ಮಧ್ವ ಜಯಂತಿ: ಅದ್ದೂರಿ ಪಲ್ಲಕ್ಕಿ ಉತ್ಸವ

ರಥಬೀದಿಯಲ್ಲಿ ಕಂಗೊಳಿಸಿದ ಹಯಗ್ರೀವ ಸನ್ನಿಧಾನ; ಸಹಸ್ರಾರು ಭಕ್ತರಿಂದ ಭಕ್ತಿ ಸಮರ್ಪಣೆ ಧಾರವಾಡಮಧ್ವ ಜಯಂತಿ ಅಂಗವಾಗಿ ಬುಧವಾರ ಧಾರವಾಡದ ಮಾಳಮಡ್ಡಿಯಲ್ಲಿರುವ ಉತ್ತರಾದಿಮಠದ ಸರ್ವ ವಿದ್ಯಾಪ್ರದ ಹಯಗ್ರೀವ ಸನ್ನಿಧಾನದ ವತಿಯಿಂದ ನಗರದ ರಥಬೀದಿಯಲ್ಲಿ ಅದ್ದೂರಿ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ಜರುಗಿತು. ಧಾರ್ಮಿಕ ಸಂಭ್ರಮದೊಂದಿಗೆ ನಡೆದ ಉತ್ಸವದಲ್ಲಿ ಶ್ರೀ ಹಯಗ್ರೀವ ದೇವರ ಪಲ್ಲಕ್ಕಿ ಮೆರವಣಿಗೆ ಭಕ್ತರ ಗಮನ ಸೆಳೆಯಿತು. ಭಜನಾ ಮಂಡಳಿಗಳ ಭಕ್ತಿಗೀತೆ, ನಾಮಸ್ಮರಣೆ ಹಾಗೂ ಭಕ್ತರ ಪಾಲ್ಗೊಳ್ಳುವಿಕೆಯಿಂದ ರಥಬೀದಿಯಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿತ್ತು. ಸಹಸ್ರಾರು ಭಕ್ತರು ಉತ್ಸವದಲ್ಲಿ…

Read More

ದಸರಾ ಸಂಭ್ರಮದಲ್ಲಿ ಯುವಕರ ಬಲಪ್ರದರ್ಶನ

ಗ್ರಾಮೀಣ ಕ್ರೀಡಾ ಪರಂಪರೆಗೆ ಮರುಜೀವ ನೀಡಿದ ಸಂಗ್ರಾಮ ಕಲ್ಲು ಎತ್ತುವ ಪ್ರದರ್ಶನ ಕಲಘಟಗಿಒಂದು ಕಡೆ ಮಹಾನವಮಿ ಹಬ್ಬದ ಸಂಭ್ರಮ, ಮತ್ತೊಂದೆಡೆ ಯುವಕರ ಶಕ್ತಿ ಮತ್ತು ಸಾಹಸದ ಅನಾವರಣ! ಗ್ರಾಮದೇವಿ ಆವರಣದಲ್ಲಿ ನೆರೆದಿದ್ದ ಗ್ರಾಮಸ್ಥರ ಕಣ್ಣುಗಳೆಲ್ಲ ಯುವಕರತ್ತ ನೆಟ್ಟಿದ್ದವು. ಯುವಕರು ಒಂದೊಂದಾಗಿ ಸಂಗ್ರಾಮ ಕಲ್ಲುಗಳನ್ನು ಎತ್ತುತ್ತಿದ್ದಂತೆ ನೋಡುಗರಲ್ಲಿ ಕುತೂಹಲ ಹೆಚ್ಚುತ್ತಿತ್ತು. ಇಂತಹ ರೋಚಕ ಕ್ಷಣಗಳಿಗೆ ಸಾಕ್ಷಿಯಾದದ್ದು ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮ. ಮಹಾನವಮಿ ಹಬ್ಬದ ಅಂಗವಾಗಿ ಬುಧವಾರ ಗ್ರಾಮದ ಗ್ರಾಮದೇವಿ ಆವರಣದಲ್ಲಿ ಆಯೋಜಿಸಿದ್ದ ಸಂಗ್ರಾಮ ಕಲ್ಲು ಎತ್ತುವ ಪ್ರದರ್ಶನ…

Read More