SK Suddimane

Sk Suddimane - ಜನಧ್ವನಿಯ ಅನಾವರಣ

ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ಸಲಹಾ ಸಮಿತಿಗೆ ನಾಗರಾಜ ಹೂಗಾರ ಕಾಲವಾಡ ನೇಮಕ

ಧಾರವಾಡಕನ್ನಡ ನಾಡು, ನುಡಿ, ಭಾಷೆ, ನೆಲ ಮತ್ತು ಜಲದ ಜಾಗೃತಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ಸಲಹಾ ಸಮಿತಿಯ ಸದಸ್ಯರನ್ನಾಗಿ ಪತ್ರಕರ್ತ ಹಾಗೂ ಆರೂಢ ವಿಶೇಷ ಮಕ್ಕಳ ಚಟುವಟಿಕೆ ಶಿಕ್ಷಣ ಕೇಂದ್ರ ಮತ್ತು ಅಕ್ಷರ ಕಿಡ್ಸ್ ಸ್ಕೂಲ್‌ನ ಮುಖ್ಯಸ್ಥ ನಾಗರಾಜ ಶಿವಪ್ಪ ಹೂಗಾರ ಕಾಲವಾಡ ಅವರನ್ನು ನೇಮಕ ಮಾಡಲಾಗಿದೆ. ಮಕ್ಕಳು, ಮಹಿಳೆಯರು ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಈ ನೇಮಕ ಮಾಡಲಾಗಿದೆ. ಸಂಘದ ಕಾರ್ಯಕಾರಿ…

Read More

೨೦೨೯ರ ವಿಶ್ವ ಸೀನಿಯರ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್ಸ್‌ಗೆ ಭಾರತದ ಆತಿಥ್ಯ, ಭಾರತದ ಕ್ರೀಡಾ ಇತಿಹಾಸದಲ್ಲಿ ಐತಿಹಾಸಿಕ ಕ್ಷಣ !!

ಅಹಮದಾಬಾದ೨೦೨೯ರ ವಿಶ್ವ ಸೀನಿಯರ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್ಸ್‌ಗೆ ಅಹಮದಾಬಾದ್ ಆತಿಥ್ಯ ವಹಿಸಲಿದ್ದು, ಭಾರತದ ಕ್ರೀಡಾ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಘಟನೆಯಾಗಲಿದೆ. ಚೀನಾದ ನಿಂಗ್ಬೋದಲ್ಲಿ ನಡೆದ ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಫೆಡರೇಷನ್(ಐ.ಡಬ್ಲೂ.ಎಫ್.) ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು ಎಂದು ಭಾನುವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ. ಭಾರತ ಮೊಟ್ಟ ಮೊದಲ ಬಾರಿಗೆ ವಿಶ್ವ ಸೀನಿಯರ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್ಸ್ ಸಂಘಟಿಸುತ್ತಿದ್ದು, ಇದು ಭಾರತದ ಕ್ರೀಡಾ ಇತಿಹಾಸದಲ್ಲಿ ಐತಿಹಾಸಿಕ ಕ್ಷಣವಾಗಿರಲಿದೆ. ರಷ್ಯಾ ಮತ್ತು ವೆನೆಜುವೆಲಾ ದೇಶಗಳನ್ನು ಹಿಂದಿಕ್ಕಿ ಭಾರತ…

Read More

ಹರ್ಮನ್‌ಪ್ರೀತ್ ಕೌರ್-ದೀಪ್ತಿ ಶರ್ಮಾ ಶತಕ, ದಾಖಲೆಯ ಶತಕದ ಜೊತೆಯಾಟ, ಭಾರತಕ್ಕೆ ಜಿಂಬಾಬ್ವೆ ಸುಲಭದ ತುತ್ತು, ೨-೦ ಸರಣಿ ಗೆಲುವಿನ ಮುನ್ನಡೆ

ವಡೋದರಾಭರ್ಜರಿ ಶತಕ ಸಿಡಿಸಿದ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ, ದಾಖಲೆಯ ೫ನೇ ವಿಕೆಟ್ ಜೊತೆಯಾಟದಲ್ಲೂ ಪಾಲ್ಗೊಳ್ಳುವುದರೊಂದಿಗೆ ಭಾರತ ಭಾನುವಾರ ರಾತ್ರಿ ನಡೆದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆಯನ್ನು ೧೨೧ ರನ್‌ಗಳಿಂದ ಹಣಿಯಿತು. ಇದರೊಂದಿಗೆ ಸ್ಮೃತಿ ಮಂಧಾನ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ ೨-೦ ಗೆಲುವಿನ ಮುನ್ನಡೆ ಸಾಧಿಸಿತು.ಬಿಸಿಎ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ೫೦ ಓವರ್‌ಗಳಲ್ಲಿ ೬ ವಿಕೆಟ್‌ಗಳಿಗೆ ೩೨೮ರ ಬೃಹತ್ ಮೊತ್ತ ದಾಖಲಿಸಿದರೆ,…

Read More

ದೇವದತ್ ಪಡಿಕ್ಕಲ್ ಅಜೇಯ ಅರ್ಧ ಶತಕ; ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಭಾರತ(ಎ) ತಂಡದ ಪರದಾಟ

ಲಿಂಕನ್ಕನ್ನಡಿಗ ದೇವದತ್ ಪಡಿಕ್ಕಲ್ ಅವರ ದಿಟ್ಟ ಅಜೇಯ ಅರ್ಧ ಶತಕದ ಹೊರತಾಗಿಯೂ ಭಾರತ(ಎ) ತಂಡ ನ್ಯೂಜಿಲೆಂಡ್(ಎ) ತಂಡದ ಎದುರು ಇಲ್ಲಿ ನಡೆದಿರುವ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಪರದಾಡುತ್ತಿದೆ. ಪಂದ್ಯದ ಮೊದಲ ದಿನವಾದ ಶನಿವಾರದಂದು ಭಾರತ(ಎ) ತಂಡ ತನ್ನ ಮೊದಲ ಸರದಿಯಲ್ಲಿ ಕೇವಲ ೧೧೩ಕ್ಕೆ ಆಲೌಟಾದ ನಂತರ ನ್ಯೂಜಿಲೆಂಡ್ ನಾಯಕ ರೈಸ್ ಮಾರಿಯು(೭೬) ಹಾಗೂ ಡೀನ್ ಫಾಕ್ಸ್ ಕ್ರಾಫ್ಟ್(೫೧) ಅವರುಗಳ ಸಮಯೋಚಿತ ಅರ್ಧ ಶತಕಗಳ ಸಹಾಯದಿಂದ ತನ್ನ ಮೊದಲ ಸರದಿಯಲ್ಲಿ ೩೧೭ ರನ್…

Read More

ಶ್ರೀಕರಿಯಮ್ಮ ದೇವಿ ಜಾತ್ರಾ ಮಹೋತ್ಸವ

ಧಾರವಾಡಇಲ್ಲಿನ ಕುಮಾರೇಶ್ವರ ನಗರದ ಶ್ರೀಕರಿಯಮ್ಮ ದೇವಿ ದೇವಸ್ಥಾನ ನಿರ್ವಹಣಾ ಸಂಘವು ಶ್ರೀಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ದಿ. 26.10. 2026 ಸಂಜೆ 5:30ಕ್ಕೆ ಶ್ರೀಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಸದಸ್ಯ ಅನಿತಾ ಚಳಗೇರಿ ಉದ್ಘಾಟಿಸುವರು, ಶ್ರೀಕರಿಯಮ್ಮ ದೇವಸ್ಥಾನ ನಿರ್ವಹಣಾ ಸಂಘದ ಅಧ್ಯಕ್ಷ ಎನ್.ಬಿ. ಪಾಟೀಲ್, ಉಪಾಧ್ಯಕ್ಷ ಜೆ.ವಾಯ್. ತೋಟದ, ಕಾರ್ಯದರ್ಶಿ ಜಿ.ಎಂ. ಹುಲ್ಲೂರ ಉಪಸ್ಥಿತರಿರುವರು. ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ವಿದುಷಿ ಸುಜಾತಾ ಕಮ್ಮಾರ ಗುರವ, ವಿದುಷಿ ಭಾರ್ಗವಿ…

Read More

ಆಕರ್ಷಕ ನಗದು ಬಹುಮಾನಗಳ ‘ಧಾರವಾಡ ೧೦ಕೆ’ ಓಟದ ಸ್ಪರ್ಧೆ ನ. ೨೯ರಂದು

ಧಾರವಾಡವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಪಡೆಯುತ್ತಿರುವ ಧಾರವಾಡ ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್(ಡಿಡಿಒಎ) ಆಶ್ರಯದ `ಧಾರವಾಡ ೧೦ಕೆ’ ಓಟದ ಸ್ಪರ್ಧೆ ಇದೇ ನವಂಬರ್ ೨೯ರಂದು ನಡೆಯುವ ನಿರೀಕ್ಷೆಯಿದೆ. ಮುಕ್ತ ವಿಭಾಗದಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ನಡೆಯಲಿರುವ ೧೦ ಕಿ.ಮೀ. ಓಟದ ಸ್ಪರ್ಧೆಯಲ್ಲಿ ವಿಜೇತರಾಗುವವರು ೧೦ ಸಹಸ್ರ ರೂಪಾಯಿಗಳ ನಗದು ಬಹುಮಾನ ಗಿಟ್ಟಿಸಲಿದ್ದಾರೆ. ಎರಡೂ ವಿಭಾಗಗಳಲ್ಲಿ ಮೊದಲ ೬ ಸ್ಥಾನ ಪಡೆಯುವವರೆಲ್ಲರೂ ಆಕರ್ಷಕ ನಗದು ಬಹುಮಾನಗಳ ಜೊತೆಗೆ ಪದಕ ಹಾಗೂ ಪ್ರಮಾಣ ಪತ್ರಗಳನ್ನೂ ಪಡೆದುಕೊಳ್ಳಲಿದ್ದಾರೆ. ಈ ಸಲ ಹಿರಿಯ ಮಯೋಮಿತಿ ವರ್ಗದವರಿಗೂ…

Read More

ರಾಷ್ಟ್ರೀಯ ಜ್ಯೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ ಧಾರವಾಡದ ಶಿಲ್ಪಾ ಹೊಸಮನಿ

• ರಘುಸುತಧಾರವಾಡನಗರದ ಪ್ರತಿಭಾನ್ವಿತ ಮಧ್ಯಮ ದೂರದ ಓಟಗಾರ್ತಿ ಶಿಲ್ಪಾ ಹೊಸಮನಿ ರಾಷ್ಟ್ರೀಯ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ಸ್‌ನಲ್ಲಿ ೨೦ ವರ್ಷದವರೊಳಗಿನ ಮಹಿಳೆಯರ ೧,೫೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಚೆನ್ನೈನ್ ಜೆ.ಎನ್. ಕ್ರೀಡಾಂಗಣದಲ್ಲಿ ನಡೆದಿರುವ ಕೂಟದಲ್ಲಿ ಶುಕ್ರವಾರ ರಾತ್ರಿ ಅವರು ಈ ದೂರವನ್ನು ೪ ನಿಮಿಷ ೫೨.೧೭ ಸೆಕಂದುಗಳಲ್ಲಿ ಕ್ರಮಿಸಿ ಅಗ್ರಸ್ಥಾನಿಯಾದರು. ಓಟದ ಪ್ರಾರಂಭದಿಂದಲೂ ಮುಂದೆಯೇ ಇದ್ದ ಶಿಲ್ಪಾ ಕ್ರಮೇಣ ಮುನ್ನಡೆಯನ್ನು ಹೆಚ್ಚಿಸಿಕೊಂಡು ಕೊನೆಯಲ್ಲಿ ಸಾಕಷ್ಟು ಅಂತರವಿಟ್ಟೇ ಬಂಗಾರ ಬಾಚಿಕೊಂಡರು. ಸ್ಥಳೀಯ ಜೆ.ಎಸ್.ಎಸ್. ಕಾಲೇಜಿನ ಬಿ.ಎ. ಪ್ರಥಮ…

Read More

ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ಮಹೋತ್ಸವಕ್ಕೆ ಶುಭಾಶಯ

ಧಾರವಾಡ ಜನತಾ ಶಿಕ್ಷಣ ಸಮಿತಿ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದಿಂದ ಶುಭಾಶಯ ಧಾರವಾಡಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ಮಹೋತ್ಸವದ ಶುಭ ಸಂದರ್ಭದಲ್ಲಿ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್, ಆಡಳಿತಾಧಿಕಾರಿ ಅರಿಹಂತ್ ಪ್ರಸಾದ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಪೂಜ್ಯರನ್ನು ಭೇಟಿಯಾಗಿ ಶುಭಾಶಯಗಳನ್ನು ಸಲ್ಲಿಸಿ ಆಶೀರ್ವಾದ ಪಡೆದರು. ಧರ್ಮಸ್ಥಳದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಪೂಜ್ಯ ಡಾ. ವೀರೇಂದ್ರ…

Read More

ಜೆಎಸ್‌ಎಸ್ ಪಿಯು ಕಾಲೇಜ ಪ್ರಥಮ

ಧಾರವಾಡಜಿಲ್ಲಾ ಮಟ್ಟದ ಬಾಲಕ ಮತ್ತು ಬಾಲಕಿಯರ ನೆಟ್ಬಾಲ್ ಪಂದ್ಯಾವಳಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಮದೀನಾ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸವದತ್ತಿ ರಸ್ತೆಯ ಶ್ರೀ ಮಂಜುನಾಥೇಶ್ವರ ವಾಣಿಜ್ಯ ಮತ್ತು ಕಲಾ ಮಹಾವಿದ್ಯಾಲಯದ ಕಾಲೇಜಿನ ಆವರಣದಲ್ಲಿ ನಡೆಯಿತು. ಬಾಲಕರ ವಿಭಾಗದಲ್ಲಿ ಜೆ.ಎಸ್.ಎಸ್ ಆರ್.ಎಸ್.ಹೆಚ್ ಪಿ.ಯು ಕಾಲೇಜು ಪ್ರಥಮ ಸ್ಥಾನ, ಕರ್ನಾಟಕ ಕಲಾ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಎಸ್.ಎಸ್ ಆರ್.ಎಸ್.ಹೆಚ್ ಪಿ.ಯು ಕಾಲೇಜು, ದ್ವಿತೀಯ ಸ್ಥಾನವನ್ನು ವಿದ್ಯಾರಣ್ಯ ಪದವಿ ಪೂರ್ವ ವಿದ್ಯಾಲಯ…

Read More

ಸಾರ್ವಜನಿಕ ಶಿಕ್ಷಣ ಬಲಪಡಿಸಲು ಕಲಬುರಗಿಯಲ್ಲಿ ಎಸ್ಎಫ್ಐ 17ನೇ ರಾಜ್ಯ ಸಮ್ಮೇಳನ

ಧಾರವಾಡಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು, ಕೋಮು ಸೌಹಾರ್ದತೆಗಾಗಿ, ಸಂವಿಧಾನದ 371(ಜೆ) ಕಲಂ ಸಮರ್ಪಕವಾಗಿ ಜಾರಿಗಾಗಿ ಕಲಬುರಗಿಯಲ್ಲಿ ನಡೆಯುವ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್.ಎಫ್.ಐ) ಸಂಘಟನೆಯ 17ನೇ ರಾಜ್ಯ ಸಮ್ಮೇಳನದ ಲೋಗೋವನ್ನು ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಹತ್ತಿರದ ಕನ್ನಡ ಸಾಹಿತ್ಯ ಪರಿಷತ್ತು ಭವನದ ಎದುರಿಗೆ ಬಿಡುಗಡೆಗೊಳಿಸಲಾಯಿತು. ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ದೇಶದಲ್ಲಿ ಆಳುವ ವರ್ಗಗಳ ಪರವಾದ ಶಿಕ್ಷಣ ನೀತಿಗಳು ರೂಪಗೊಂಡು ಕಾರ್ಪೊರೇಟ್ ಸಂಸ್ಥೆಗಳ ಕೈಗೆ ಶಿಕ್ಷಣ ಸಿಕ್ಕು ಬಡ ವಿದ್ಯಾರ್ಥಿಗಳಿಗೆ…

Read More