ಅಹಮದಾಬಾದ
೨೦೨೯ರ ವಿಶ್ವ ಸೀನಿಯರ್ ವೇಟ್ ಲಿಫ್ಟಿಂಗ್ ಚಾಂಪಿಯನ್ಷಿಪ್ಸ್ಗೆ ಅಹಮದಾಬಾದ್ ಆತಿಥ್ಯ ವಹಿಸಲಿದ್ದು, ಭಾರತದ ಕ್ರೀಡಾ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಘಟನೆಯಾಗಲಿದೆ.
ಚೀನಾದ ನಿಂಗ್ಬೋದಲ್ಲಿ ನಡೆದ ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಫೆಡರೇಷನ್(ಐ.ಡಬ್ಲೂ.ಎಫ್.) ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು ಎಂದು ಭಾನುವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಭಾರತ ಮೊಟ್ಟ ಮೊದಲ ಬಾರಿಗೆ ವಿಶ್ವ ಸೀನಿಯರ್ ವೇಟ್ ಲಿಫ್ಟಿಂಗ್ ಚಾಂಪಿಯನ್ಷಿಪ್ಸ್ ಸಂಘಟಿಸುತ್ತಿದ್ದು, ಇದು ಭಾರತದ ಕ್ರೀಡಾ ಇತಿಹಾಸದಲ್ಲಿ ಐತಿಹಾಸಿಕ ಕ್ಷಣವಾಗಿರಲಿದೆ.
ರಷ್ಯಾ ಮತ್ತು ವೆನೆಜುವೆಲಾ ದೇಶಗಳನ್ನು ಹಿಂದಿಕ್ಕಿ ಭಾರತ ೨೦೨೯ರ ಆತಿಥ್ಯ ಗೆದ್ದಿದೆ. ರಷ್ಯಾದ ರಾಜಧಾನಿ ಮಾಸ್ಕೋಗೆ ೨೦೩೦ರ ವಿಶ್ವ ಚಾಂಪಿಯನ್ಷಿಪ್ಸ್ ಆತಿಥ್ಯ ಸಿಕ್ಕಿದೆ. ಇದೇ ಸಭೆಯಲ್ಲಿ ಇನ್ನೂ ಎರಡು ಚಾಂಪಿಯನ್ಷಿಪ್ಸ್ಗಳ ಆತಿಥ್ಯವನ್ನೂ ಘೋಷಿಸಲಾಗಿದೆ.
೨೦೨೮ರ ವಿಶ್ವ ಯೂಥ್ ಚಾಂಪಿಯನ್ಷಿಪ್ಸ್ ಕೊಸೊವೊದ ಪ್ರಿಸ್ಟಿನಾಗೆ ಹಾಗೂ ೨೦೨೮ರ ವಿಶ್ವ ಜ್ಯೂನಿಯರ್ ಚಾಂಪಿಯನ್ಷಿಪ್ಸ್ಗಳ ಆತಿಥ್ಯಯವನ್ನು ವೆನೆಜುವೆಲಾದ ಕರಾಕಸ್ಗೆ ನೀಡಲಾಗಿದೆ.
ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಷನ್ ಅಧ್ಯಕ್ಷ ಸಹದೇವ್ ಯಾದವ ಇದನ್ನು ದೇಶದ ಕ್ರೀಡೆಗೆ ದೊಡ್ಡ ಬೆಳವಣಿಗೆ ಎಂದು ಹರ್ಷ ವ್ಯಕ್ತ ಪಡಿಸಿದ್ದರೆ, ಗುಜರಾತಿನ ಉಪ ಮುಖ್ಯಮಂತ್ರಿ ಹರ್ಷ ಸಂಘವಿ ಸಹ ಸಂತಸ ವ್ಯಕ್ತ ಪಡಿಸಿದ್ದಾರೆ.

