ಶ್ರೀಚರಣಿ, ಕ್ರಾಂತಿ ಗೌಡ್ ಮಾರಕ ದಾಳಿ, ಪ್ರತಿಕಾ ರಾವಲ್ ಅಜೇಯ ಶತಕ, ಜಿಂಬಾಬ್ವೆಯನ್ನು ೯ ವಿಕೆಟ್‌ಗಳಿಂದ ಹಣಿದ ಮಂಧಾನ ಪಡೆ

ವಡೋದರಾಮೊದಲು ಶ್ರೀಚರಣಿ ಹಾಗೂ ಕ್ರಾಂತಿ ಗೌಡ್ ಅವರ ಮಾರಕ ಬೌಲಿಂಗ್, ಇದರ ಬೆನ್ನ ಹಿಂದೆಯೇ ಪ್ರತಿಕಾ ರಾವಲ್ ಅವರ ಶತಕ, ಶಫಾಲಿ ವರ್ಮಾ ಅವರ ಅರ್ಧ ಶತಕ…..ಇವೆಲ್ಲವುಗಳ ನೆರವಿನಿಂದ ಸ್ಮೃತಿ ಮಂಧಾನ ಸಾರಥ್ಯದ ಭಾರತ ತಂಡ ಶುಕ್ರವಾರ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆ ತಂಡವನ್ನು ೯ ವಿಕೆಟ್‌ಗಳಿಂದ ಹಣಿಯಿತು. ಈ ಗೆಲುವಿನೊಂದಿಗೆ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಭಾರತ ೧-೦ ಮುನ್ನಡೆ ಸಾಧಿಸಿತು. ಇಲ್ಲಿಯ ಕೋಟಂಬಿ ಬಿಸಿಎ ಸ್ಟೇಡಿಯಂನಲ್ಲಿ ಜಯಿಸಲು ೧೯೮…

Read More

ಸ್ಕ್ವಾಷ್: ಸೆಮಿಫೈನಲ್ ಪ್ರವೇಶಿಸಿ ಹೊಸ ಇತಿಹಾಸ ಬರೆದ ೧೮ರ ಹರೆಯದ ಅನಾಹತ್ ಸಿಂಗ್

ಕ್ಯಾಲಿಫೋರ್ನಿಯಾಭಾರತದ ೧೮ರ ಹರೆಯದ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್ ಕ್ರೀಡಾ ವಿಶ್ವದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ್ದಾರೆ. ಇಲ್ಲಿ ನಡೆದಿರುವ ಸಿಲಿಕಾನ್ ವ್ಯಾಲಿ ಓಪನ್ ಟೂರ್ನಿಯಲ್ಲಿ ಗುರುವಾರವಷ್ಟೇ ೮ ಸಲದ ವಿಶ್ವ ಚಾಂಪಿಯನ್ ಹಾಗೂ ಇಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಈಜಿಪ್ತ್ ದೇಶದ ನೌರ್ ಎಲ್ ಶೆರ್ಬಿನಿ ಅವರನ್ನು ಕೇವಲ ೩೦ ನಿಮಿಷಗಳಲ್ಲಿ ಮೂರು ನೇರ ಸೆಟ್‌ಗಳಲ್ಲಿ ಸೋಲಿಸಿ ಸುದ್ದಿ ಮಾಡಿದ್ದ ಅನಾಹತ್ ಸಿಂಗ್ ಶುಕ್ರವಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವದ ನಂಬರ್ ೧೪ ಆಟಗಾರ್ತಿ…

Read More

ಇತಿಹಾಸ ಸಂಸ್ಕೃತಿ ಶ್ರೀ ಪ್ರಶಸ್ತಿ ಪ್ರದಾನ

ಭಾಲ್ಕಿಬೀದರ ಜಿಲ್ಲೆಯ ಭಾಲ್ಕಿಯಲ್ಲಿ ಶುಕ್ರವಾರ ಆರಂಭಗೊಂಡ ಕರ್ನಾಟಕ ಇತಿಹಾಸ ಅಕಾಡೆಮಿಯ 40ನೇ ವಾರ್ಷಿಕ ಸಮ್ಮೇಳನದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಶಾಸನತಜ್ಞ ಡಾ. ಜೆ.ಎಂ. ನಾಗಯ್ಯ ಮತ್ತು ಸಂಶೋಧಕಿ ಡಾ. ಸ್ನಿತಾ ಸುರೇಬಾನಕರ ಅವರಿಗೆ ಪ್ರತಿಷ್ಠಿತ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ಇಬ್ಬರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು….

Read More

ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ಶಾಂತಿಯುತ ಮತದಾನ

ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿ ಒಟ್ಟು ಶೇ. 75.62 ರಷ್ಟು ಮತದಾನ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಧಾರವಾಡಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿ ಒಟ್ಟು ಶೇ. 75.62 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತ ಕೆ.ಎಮ್.ಜಾನಕಿ ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ನಿಗದಿಯಂತೆ ನಾಲ್ಕು ಜಿಲ್ಲೆಯ 137 ಮತದಾನ ಕೇಂದ್ರಗಳಲ್ಲಿ ಮತದಾನ ಆರಂಭವಾಯಿತು. ಬೆಳಿಗ್ಗೆ…

Read More

ನಮನ್ ‘ಧೀರ’ ಆಟ, ಶ್ರೇಯಸ್ ಬಳಗಕ್ಕೆ ಮಣಿದ ಕೀವೀಸ್ ದಂಡು, ಭಾರತದ ಯಶಸ್ವಿ ರೆಕಾರ್ಡ್ ಚೇಸ್’

ಕ್ರೈಸ್ಟ್‌ಚರ್ಚ್ (ನ್ಯೂಜಿಲೆಂಡ್)ಪ್ರಾರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಅಬ್ಬರದ ಅರ್ಧ ಶತಕ ಹಾಗೂ ಹೊಸ ಹುಡುಗ’ ನಮನ್ ಧೀರ್ ಅವರ ಸಮಯೋಚಿತ, ಅಷ್ಟೇ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಭಾರತ ತಂಡ ಗುರುವಾರ ನಡೆದ ಮೊದಲ ಟಿ೨೦ ಅಂತಾರಾಷ್ಟ್ರೀಯ’ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ೪ ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿ ಐದು ಪಂದ್ಯಗಳ ಸರಣಿಯಲ್ಲಿ ೧-೦ ಯಿಂದ ಮುನ್ನಡೆಯಿತು. ಭಾರತದ ಪಾಲಿಗೆ ಇದು ದಾಖಲೆಚೇಸ್’. ಇದಕ್ಕೂ ಮೊದಲು ಭಾರತ ೨೦೨೩ರಲ್ಲಿ ವಿಶಾಖಪಟ್ಟಣದಲ್ಲಿ ಆಸ್ಟ್ರೇಲಿಯಾದ ಎದುರು ಹಾಗೂ ಇದೇ…

Read More

೮ ಸಲದ ವಿಶ್ವ ಚಾಂಪಿಯನ್‌ಗೇ ಶಾಕ್ ನೀಡಿದ ಭಾರತದ ಉದಯೋನ್ಮುಖ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್

ಚಿಕಾಗೋ(ಅಮೇರಿಕ)ಭಾರತದ ೧೮ ವರ್ಷ ವಯಸ್ಸಿನ ಉದಯೋನ್ಮುಖ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್ ಅವರು ಗುರುವಾರ ಕ್ರೀಡಾ ವಿಶ್ವವನ್ನೇ ಬೆಚ್ಚಿ ಬೀಳಿಸಿದರು ಎಂದರೆ ತಪ್ಪಾಗಲಿಕ್ಕಿಲ್ಲ. ಚಿಕಾಗೋದಲ್ಲಿ ನಡೆದಿರುವ ಪಿ.ಎಸ್.ಎ. ಗೋಲ್ಡ್ ಚಿಕಾಗೋ ಓಪನ್ ಸ್ಕ್ವಾಷ್ ಟೂರ್ನಿಯ ಅಂತಿಮ ೧೬ರ ಹಂತದ ಪಂದ್ಯದಲ್ಲಿ ಅನಾಹತ್ ಸಿಂಗ್ ತಮ್ಮ `ಆರಾಧ್ಯ ದೈವ’, ೮ ಸಲದ ವಿಶ್ವ ಚಾಂಪಿಯನ್ ಹಾಗೂ ಇಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಈಜಿಪ್ತ್ ದೇಶದ ನೌರ್ ಎಲ್ ಶೆರ್ಬಿನಿ ಅವರನ್ನು ಕೇವಲ ೩೦ ನಿಮಿಷಗಳಲ್ಲಿ ಮೂರು ನೇರ ಸೆಟ್‌ಗಳಲ್ಲಿ…

Read More

ಧಾರವಾಡ ಎಮ್ಮೆ ಪುರಾಣ ಕೃತಿ ಬಿಡುಗಡೆ

ಧಾರವಾಡನಗರದ ಧಾರವಾಡ ರಂಗಾಯಣದ ಸುವರ್ಣ ಸಮುಚ್ಛಯ ಭವನದಲ್ಲಿ ಗುರುವಾರ ಲೇಖಕ ಕುಮಾರ್ ಕುಳೇನವರ ರಚಿತ ‘ಧಾರವಾಡ ಎಮ್ಮೆ ಪುರಾಣ’ ಕೃತಿಯನ್ನು ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷ ಮನೋಹರ ಮೋರೆ ಲೋಕಾರ್ಪಣೆ ಮಾಡಿದರು. ಮರಾಠಾ ಮಂಡಳದ ಆಡಳಿತ ಅಧಿಕಾರಿ ಡಾ.ಸುರೇಶ ತುವಾರ್ ಮಾತನಾಡಿ, ಸಾಹಿತ್ಯ ಲೋಕಕ್ಕೆ ಅಂಬೆಗಾಲು ಇಡುವ ಕುಮಾರ ಚಿಕ್ಕ ವಯಸ್ಸಿನ ಹುಡಗನ. ಈ ಕೃತಿಗೆ ಮುನ್ನುಡಿ ಬರೆಯುವ ಜೊತೆಗೆ ಅವರಿಗೆ ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷರಾದ ಎಂ.ಎನ್.ಮೊರೆ ಅವರು ಪ್ರೋತ್ಸಹದ ನೀರು ಎರೆದ ಕಾರ್ಯ ಶ್ಲಾಘಿಸಿದರು….

Read More

ಕಣ್ಣೀರಾದ ನೆನಪು…, ಮೌನವಾದ ಸಭಾಂಗಣ…, ಮಾನವೀಯತೆಗೆ ಸಂದ ಗೌರವ…!

ತಂದೆಯ ಸೇವೆಗೆ ಸಂದ ಮರಣೋತ್ತರ ಗೌರವ ಸ್ವೀಕರಿಸುವಾಗ ಭಾವುಕರಾದ ಡಾ. ಆದಿತ್ಯ ಪಾಂಡುರಂಗಿ ಗದಗಕೆಲವು ಸಮಾರಂಭಗಳು ಮುಗಿದ ಬಳಿಕವೂ ನೆನಪಿನಲ್ಲಿ ಉಳಿಯುತ್ತವೆ. ಕೆಲವು ಸನ್ಮಾನಗಳು ಗೌರವಿಸಲ್ಪಟ್ಟ ವ್ಯಕ್ತಿಯ ಸಾಧನೆಯನ್ನು ಸಾರುತ್ತವೆ. ಆದರೆ, ಅಪರೂಪದ ಕೆಲವು ಕ್ಷಣಗಳು ಮಾತ್ರ ನೆರೆದವರ ಹೃದಯವನ್ನು ತಟ್ಟಿ, ಕಣ್ಣಂಚಿನಲ್ಲಿ ನೀರು ಜಿನುಗಿಸಿ, ಮಾತುಗಳೇ ಮೌನವಾಗುವಂತೆ ಮಾಡುತ್ತವೆ. ಅಂತಹದ್ದೊಂದು ಅಪೂರ್ವ, ಆತ್ಮೀಯ ಹಾಗೂ ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಯಿತು ಗದಗಿನ ಜಗದ್ಗುರು ತೋಂಟದಾರ್ಯ ಮಠದ ಪುಣ್ಯಸ್ಮರಣೆಯ ಸಮಾರಂಭ. ಲಿಂಗೈಕ್ಯ ಜಗದ್ಗುರು ತೋಂಟದಾರ್ಯ ಶ್ರೀ ಸಿದ್ಧಲಿಂಗ ಸ್ವಾಮಿಗಳ…

Read More

ಶ್ರೇಷ್ಠ ರೈತ, ರೈತ ಮಹಿಳೆ ಪ್ರಶಸ್ತಿ

ಧಾರವಾಡನೀವು ಕೃಷಿಯಲ್ಲಿ ಸಾಧನೆ ಮಾಡಿದ್ದೀರಾ, ಕೃಷಿಯನ್ನೇ ನಂಬಿಕೊಂಡು ಒಳ್ಳೆಯ ಬೆಳೆಗಳನ್ನು ಬೆಳೆಯುತ್ತೀದೀರಾ, ಸಾವಯವ ಕೃಷಿಗೆ ಅವಲಂಭಿತರಾಗಿ ಕಾರ್ಯ ನಿರ್ವಹಿಸುತ್ತೀದ್ದೀರಾ… ಹಾಗಾದರೆ ನೀವು ಪ್ರಶಸ್ತಿ ಪಡೆಯಬಹುದು. ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್ 23 ರಿಂದ 25 ರವರೆಗೆ ಬಾಗಲಕೋಟೆಯ ಉದ್ಯಾನಗಿರಿ ಆವರಣದಲ್ಲಿ ಹವಾಮಾನ ವೈಪರೀತ್ಯದಲ್ಲಿ ಸುಸ್ಥಿರ ತೋಟಗಾರಿಕೆ ಎಂಬ ಧ್ಯೇಯವಾಕ್ಯದೊಂದಿಗೆ ತೋಟಗಾರಿಕಾ ಮೇಳ ಹಮ್ಮಿಕೊಳ್ಳಲಾಗಿದೆ. ತೋಟಗಾರಿಕೆ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವಿಶಿಷ್ಟ ಕೃಷಿಕರಿಗೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ…

Read More

ಇತಿಹಾಸ ಅಕಾದೆಮಿ ಪ್ರಶಸ್ತಿಗೆ ಶಾಸನತಜ್ಞ ಡಾ. ನಾಗಯ್ಯ ಭಾಜನ: ನಾಳೆ ಪ್ರದಾನ

ಧಾರವಾಡಕರ್ನಾಟಕ ಇತಿಹಾಸ ಅಕಾದೆಮಿ ಕೊಡಮಾಡುವ ಪ್ರತಿಷ್ಠಿತ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಗೆ ನಗರದ ಕ.ವಿ.ವಿ. ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಂಸೋಧಕ ಹಾಗೂ ಶಾಸನತಜ್ಞ ಡಾ. ಜೆ.ಎಂ. ನಾಗಯ್ಯ ಭಾಜನರಾಗಿದ್ದಾರೆ. 50 ಸಾವಿರ ರೂ.ಗಳ ನಗದು ಪುರಸ್ಕಾರ ಹಾಗೂ ಸ್ಮರಣಿಕೆಯನ್ನು ಪ್ರಶಸ್ತಿ ಒಳಗೊಂಡಿದೆ. ಬೀದರ ಜಿಲ್ಲೆ ಬಾಲ್ಕಿ ಹಿರೇಮಠದ ಶ್ರೀಚೆನ್ನಬಸವೇಶ್ವರ ಗುರುಕುಲ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಅಕ್ಟೋಬರ್ 23 ರಿಂದ 25 ರವರೆಗೆ ಜರುಗಲಿರುವ ಕರ್ನಾಟಕ ಇತಿಹಾಸ ಅಕಾದೆಮಿಯ ೪೦ನೆಯ…

Read More