ಕ್ಯಾಲಿಫೋರ್ನಿಯಾ
ಭಾರತದ ೧೮ರ ಹರೆಯದ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್ ಕ್ರೀಡಾ ವಿಶ್ವದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ್ದಾರೆ.
ಇಲ್ಲಿ ನಡೆದಿರುವ ಸಿಲಿಕಾನ್ ವ್ಯಾಲಿ ಓಪನ್ ಟೂರ್ನಿಯಲ್ಲಿ ಗುರುವಾರವಷ್ಟೇ ೮ ಸಲದ ವಿಶ್ವ ಚಾಂಪಿಯನ್ ಹಾಗೂ ಇಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಈಜಿಪ್ತ್ ದೇಶದ ನೌರ್ ಎಲ್ ಶೆರ್ಬಿನಿ ಅವರನ್ನು ಕೇವಲ ೩೦ ನಿಮಿಷಗಳಲ್ಲಿ ಮೂರು ನೇರ ಸೆಟ್‌ಗಳಲ್ಲಿ ಸೋಲಿಸಿ ಸುದ್ದಿ ಮಾಡಿದ್ದ ಅನಾಹತ್ ಸಿಂಗ್ ಶುಕ್ರವಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವದ ನಂಬರ್ ೧೪ ಆಟಗಾರ್ತಿ ಈಜಿಪ್ತ್‌ನ ಸಲ್ಮಾ ಹನಿ ಅವರನ್ನು ೪೨ ನಿಮಿಷಗಳ ಸೆಣಸಾಟದಲ್ಲಿ ೪-೧೧, ೧೧-೮, ೪-೧೧, ೧೧-೨, ೧೧-೫ ರಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.
ಈ ಗೆಲುವಿನೊಂದಿಗೆ ಗೋಲ್ಡ್ ಇವೆಂಟ್‌ವೊಂದರ ಸೆಮಿಫೈನಲ್ ಪ್ರವೇಶಿಸಿದ ಮೊಟ್ಟ ಮೊದಲ ಭಾರತೀಯ ಸ್ಕ್ವಾಷ್ ಆಟಗಾರ್ತಿ ಎಂಬ ಹೊಸ ಇತಿಹಾಸವನ್ನು ಅನಾಹತ್ ಸಿಂಗ್ ಬರೆದಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲೀಗ ಅನಾಹತ್, ವಿಶ್ವದ ೪ನೇ ಕ್ರಮಾಂಕದ ಆಟಗಾರ್ತಿ ಮಲೇಷ್ಯಾದ ಸಿವಸಂಗರಿ ಸುಬ್ರಮಣಿಯಮ್ ಅವರೆದರು ಹೋರಾಡಲಿದ್ದಾರೆ. ಇತ್ತೀಚಿನ ಏಷ್ಯನ್ ಕ್ರೀಡೆಗಳ ಫೈನಲ್ಸ್ ನಲ್ಲಿ ಅನಾಹತ್ ಸೋತಿದ್ದು ಇವರಿಗೇ ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

