ಮುಗಿಯದ ಹುಬ್ಬಳ್ಳಿ ಮೇಲ್ಸೇತುವೆ ಕಾಮಗಾರಿ

ಹಂಚಿಕೊಳ್ಳಿ

ಹುಬ್ಬಳ್ಳಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೇಲ್ಸೇತುವೆ ಕಾಮಗಾರಿಯು ನಿಗದಿತ ಅವಧಿಗಿಂತ ವಿಳಂಬವಾಗಿದ್ದು, ಸಾರ್ವಜನಿಕರಿಗೆ ತೀವ್ರ ಸಂಚಾರ ಸಮಸ್ಯೆ ಮತ್ತು ಕಿರಿಕಿರಿ ಉಂಟುಮಾಡುತ್ತಿದೆ.
ಕಾಮಗಾರಿಯ ಪ್ರಸ್ತುತ ಸ್ಥಿತಿ…

  • ಆಮೆಗತಿಯ ಕಾಮಗಾರಿ: 2022ರ ಜೂನ್‌ನಲ್ಲಿ ಆರಂಭವಾದ ಈ ಯೋಜನೆ, 2024ರ ಜೂನ್‌ಗೇ ಮುಗಿಯಬೇಕಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿದೆ.
  • ಅರ್ಧದಷ್ಟು ಕೆಲಸ: ಹಲವು ವರ್ಷಗಳು ಕಳೆದರೂ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
  • ಹೊಸ ಗಡುವು: ಕಾಮಗಾರಿ ಪೂರ್ಣಗೊಳಿಸಲು ಹೆದ್ದಾರಿ ಪ್ರಾಧಿಕಾರವು 2025ರ ಜೂನ್ ವರೆಗೆ ಅವಧಿ ವಿಸ್ತರಿಸಿಕೊಂಡಿದ್ದು, ಜುಲೈನಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದೆ.
  • ವಾಹನ ಸಂಚಾರ ಬಂದ್: ಕಾಮಗಾರಿ ಸಲುವಾಗಿ ಚೆನ್ನಮ್ಮ ವೃತ್ತದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಲಾಗಿದೆ, ಇದರಿಂದಾಗಿ ಪರ್ಯಾಯ ಮಾರ್ಗಗಳಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ.
  • ಪರಿಶೀಲನೆ: ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ತ್ವರಿತವಾಗಿ ಕೆಲಸ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.

ಸಮಸ್ಯೆಗಳು:

  • ದೂಳಿನ ಸಮಸ್ಯೆ: ಕಾಮಗಾರಿಯಿಂದಾಗಿ ದೂಳಿನ ಸಮಸ್ಯೆ ವಿಪರೀತವಾಗಿದೆ.
  • ಸಂಚಾರ ಅಸ್ತವ್ಯಸ್ತ: ನಗರದ ಪ್ರಮುಖ ಕೇಂದ್ರವಾಗಿದ್ದ ಚೆನ್ನಮ್ಮ ವೃತ್ತ ಬಂದ್ ಆಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
    ಒಟ್ಟಾರೆಯಾಗಿ, ಈ ಬಹುನಿರೀಕ್ಷಿತ ಮೇಲ್ಸೇತುವೆ ಕಾಮಗಾರಿ 2025ರ ಮಧ್ಯಭಾಗದವರೆಗೂ ಮುಗಿಯುವ ಲಕ್ಷಣಗಳು ಕಂಡುಬರುತ್ತಿಲ್ಲ.

ಸಂಚಾರದ ದಟ್ಟಣೆ: ಸಾಕಪ್ಪ ಈ ದೂಳು…

ಹುಬ್ಬಳ್ಳಿ ನಗರದ ಒಳಗೆ ಹಾಗೂ ಹೊರಗೆ ನಡೆಯುತ್ತಿರುವ ಮೇಲ್ಸೇತುವೆ ಹಾಗೂ ಬೈಪಾಸ್‌ ರಸ್ತೆ ಕಾಮಗಾರಿಯಿಂದಾಗಿ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ವಾಹನ ಸವಾರರು ಸಹ ಎಲ್ಲೆಂದರಲ್ಲಿ ನುಗ್ಗುತ್ತ ಸುಗಮ ಸಂಚಾರಕ್ಕೆ ತೊಡಕಾಗುತ್ತಿದ್ದಾರೆ.
ನಗರದ ಮಧ್ಯಭಾಗದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಏಳು ಪ್ರಮುಖ ರಸ್ತೆಯ ಕೂಡು ಸ್ಥಳವಾದ ಇಲ್ಲಿಯ ಯಾವ ರಸ್ತೆಯಲ್ಲಿ ಸಂಚರಿಸಿದರೆ, ಎಲ್ಲಿಗೆ ತಲುಪುತ್ತೇವೆ ಎನ್ನುವ ಗೊಂದಲ ಹೆಚ್ಚಾಗುತ್ತಿದೆ.
ವೃತ್ತದ ಸುತ್ತ ಮೇಲ್ಸೇತುವೆಯ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ, ಅಲ್ಲಲ್ಲಿಯೇ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿದೆ. ಕೆಲವು ಕಡೆ ಆಳವಾಗಿ ತೆಗ್ಗು ತೋಡಿ ಕಾಮಗಾರಿ ನಡೆಸಲಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ಬ್ಯಾರಿಕೇಡ್‌ ಅಳವಡಿಸಿ, ಸಂಚಾರ ನಿಷೇಧಿಸಲಾಗಿದೆ. ಮೊದಲಿದ್ದ ರಸ್ತೆಗಳಲ್ಲಿ ಬೃಹತ್‌ ಫಿಲ್ಲರ್‌ಗಳು ನಿರ್ಮಾಣವಾಗಿರುವುದರಿಂದ, ವಾಹನಗಳ ಸಂಚಾರಕ್ಕೆ ರಸ್ತೆಯೇ ಇಲ್ಲದಂತಾಗಿದೆ. ಪರಿಣಾಮ ವಾಹನಗಳ ಸಂಚಾರ ದಟ್ಟಣೆ ಮಿತಿಮೀರುತ್ತಿದೆ.
‘ಸಂಜೆ 5ರ ನಂತರ ಹೊಸೂರು ವೃತ್ತ, ಭಗತ್‌ ಸಿಂಗ್‌ ವೃತ್ತ, ಬಸವವನ, ನ್ಯೂಕಾಟನ್‌ ಮಾರ್ಕೆಟ್‌, ಚನ್ನಮ್ಮ ವೃತ್ತ, ರಾಯಣ್ಣ ವೃತ್ತ, ಹಳೇ ಕೋರ್ಟ್‌ ವೃತ್ತ, ಮಿರ್ಜಾನಕರ್‌ ಪೆಟ್ರೋಲ್‌ ಬಂಕ್‌, ಇಂದಿರಾಗಾಜಿನ ಮನೆ ಮುಂಭಾಗ, ದೇಶಪಾಂಡೆನಗರ, ಪಿಂಟೋ ರಸ್ತೆ, ಸಿದ್ದಪ್ಪ ಕಂಬಳಿ ಮಾರ್ಗದ ಬಳಿ ವಿಪರೀತ ಎನ್ನುವಷ್ಟು ವಾಹನಗಳ ದಟ್ಟಣೆ ಉಂಟಾಗುತ್ತಿದೆ. ಒಮ್ಮೊಮ್ಮೆ ವಾಹನಗಳು ಅರ್ಧಗಂಟೆ ನಿಂತಲ್ಲಿಯೇ ನಿಲ್ಲುತ್ತವೆ. ದಟ್ಟಣೆ ತಪ್ಪಿಸಿಕೊಂಡು ಹೊರಬರುವಷ್ಟರಲ್ಲಿ ಸವಾರರು ಹೈರಾಣಾಗುತ್ತಾರೆ. ಸಂಚಾರ ಪೊಲೀಸರು ನೋಡಿಯೂ ನೋಡದಂತೆ ಇರುತ್ತಾರೆ’ ಎಂದು ಬೈಕ್‌ ಸವಾರರರು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಹೊರವಲಯದ ಗಬ್ಬೂರು ವೃತ್ತದ ಬಳಿಯಂತೂ ಮುಖ್ಯರಸ್ತೆ ಎಲ್ಲಿದೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿ–ಧಾರವಾಡ ಬೈಪಾಸ್‌ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭಾಗವಾಗಿ ವೃತ್ತದ ಮಧ್ಯಭಾಗದಲ್ಲಿ ಮೇಲ್ಸೇತುವೆ ನಿರ್ಮಿಸಿದ್ದು, ಅಲ್ಲಿಯೂ ಕಾಮಗಾರಿ ಪ್ರಗತಿಯಲ್ಲಿದೆ. ಟ್ಯಾಂಕರ್‌, ಲಾರಿ ಓಡಾಡುವ ಸ್ಥಳದಲ್ಲಿಯೇ ಪ್ರಯಾಣಿಕರು ಅಪಾಯ ಎದುರಿಸುತ್ತ ಬಸ್‌ಗೆ ಕಾಯುತ್ತ ನಿಲ್ಲುತ್ತಾರೆ.
‘ತಾತ್ಕಾಲಿಕವಾಗಿ ಪರ್ಯಾಯ ರಸ್ತೆ ನಿರ್ಮಿಸಿದ್ದರೂ, ಅದರ ಅಕ್ಕಪಕ್ಕ ಸಾಲಾಗಿ ಲಾರಿಗಳು ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಬೆಂಗಳೂರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ಪಕ್ಕ ಸಂಜೆ ವೇಳೆ ಸಾಲಾಗಿ ಡಬ್ಬ ಅಂಗಡಿಗಳು ಕಾರ್ಯ ನಿರ್ವಹಿಸುತ್ತವೆ. ಇದರಿಂದಲೂ ಸಮಸ್ಯೆಯಾಗುತ್ತಿದೆ. ಬೈಪಾಸ್‌ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು’ ಎಂದು ವಿನಂತಿಸಿದ್ದಾರೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *