ಭಾರತ ೭.೪ ಓವರ್‌ಗಳಲ್ಲಿ ೫ ವಿಕೆಟ್‌ಗಳಿಗೆ ೧೧೮, ವಿಂಡೀಸ್‌ಗೆ ಬೇಕಿತ್ತು ೫ ಓವರ್‌ಗಳಲ್ಲಿ ೮೪
ಬೆಂಗಳೂರು
ನಿರೀಕ್ಷಿಸಿದ್ದಂತೆ ಭಾರತ ಹಾಗೂ ವೆಸ್ಟ್ ಇಂಡೀಸ್‌ಗಳ ನಡುವೆ ಇಲ್ಲಿಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐದು ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯ ಮಳೆಯಿಂದಾಗಿ ರದ್ದಾಯಿತು.
ಎರಡೂ ತಂಡಗಳು ತಲಾ ೨ ಪಂದ್ಯ ಗೆದ್ದಿದ್ದು ಇಲ್ಲಿ ಫಲಿತಾಂಶ ಬರದೇ ಇದ್ದುದರ ಕಾರಣ ಸರಣಿ ೨-೨ರ ಸಮಸ್ಥಿತಿಯಲ್ಲಿ ಕೊನೆಗೊಂಡಿತು. ಹಾಗೆ ನೋಡಿದರೆ ೨೦೨೪ರ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರದ್ದಾದ ಮೊದಲ ಪಂದ್ಯ ಇದಾಗಿದೆ.
ಮಳೆಯ ಕಾರಣ ತಡವಾಗಿ ರಾತ್ರಿ ೯.೧೫ಕ್ಕೆ ಪ್ರಾರಂಭವಾದ ಪಂದ್ಯವನ್ನು ತಲಾ ೯ ಓವರ್‌ಗಳಿಗೆ ಇಳಿಸಲಾಯಿತು. ಟಾಸ್ ಗೆದ್ದ ವಿಂಡೀಸ್‌ನಿಂದ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ೭.೪ ಓವರ್‌ಗಳಲ್ಲಿ ೫ ವಿಕೆಟ್‌ಗಳಿಗೆ ೧೧೮ರ ಮೊತ್ತ ತಲುಪಿದ್ದಾಗ ಬಿದ್ದ ಭಾರೀ ಮಳೆ ಭಾರತದ ಸರದಿಯನ್ನು ಅಲ್ಲಿಗೇ ಮುಕ್ತಾಯಗೊಳಿಸಿತು.
ಆ ಹಂತದಲ್ಲಿ ಡಕ್ವರ್ಥ್ ಲೂಯಿಸ್ ಲೆಕ್ಕಾಚಾರದ ಪ್ರಕಾರ ವಿಂಡೀಸ್ ಬ್ಯಾಟ್ ಮಾಡಿದ್ದೇ ಆದರೆ ಗೆಲ್ಲಲು ೫ ಓವರ್‌ಗಳಲ್ಲಿ ೮೪ರ ಸ್ಕೋರು ಗಳಿಸಬೇಕಿತ್ತಾದರೂ ಎಡಬಿಡದೇ ಸುರಿಯಲಾರಂಭಿಸದ ಮಳೆ ಮುಂದಿನ ಆಟವನ್ನು ಅಸಾಧ್ಯವಾಗಿಸಿತು.

ಭಾರತದ ಬ್ಯಾಟರ್‌ಗಳ ಅಬ್ಬರ:
ಕೀಮೋ ಪಾಲ್ ಎಸೆದ ಮೊದಲ ಓವರ್ ಭಾರತಕ್ಕೆ ೧೪ ರನ್ ನೀಡಿತಾದರೂ ೫ನೇ ಎಸೆತದಲ್ಲಿ ಅಭಿಷೇಕ ಶರ್ಮಾ(೬, ೪ ಎಸೆತ, ೧ ಸಿಕ್ಸರ್) ವಿಕೆಟ್ ಒಪ್ಪಿಸಿದರು. ರೊಮಾರಿಯೋ ಶೆಪರ್ಡ್ ಬೌಲ್ ಮಾಡಿದ ೨ನೇ ಓವರ್ ೨ ಸಿಕ್ಸರ್ ಹಾಗೂ ೨ ಬೌಂಡರಿ ಸಹಿತದ ೨೪ ರನ್ ತಂದಿಟ್ಟಿತು. ಎರಡನೇ ಒವರಿನ ಕೊನೆಗೆ ಭಾರತದ ಸ್ಕೋರು ಒಂದು ವಿಕೆಟ್‌ಗೆ ೩೮.
ಶಮಾರ್ ಜೋಸೆಫ್ ಎಸೆದ ಮೂರನೇ ಓವರಿನ ಮೊದಲ ೪ ಎಸೆತಗಳು ಮತ್ತೆ ೮ ರನ್ ನೀಡಿದವಾದರೂ ೩ನೇ ಎಸೆತದಲ್ಲಿ ಭಾರತ ಕೇವಲ ೧೦ ಎಸೆತಗಳಲ್ಲಿ ೩ ಬೌಂಡರಿ ಹಾಗೂ ೨ ಸಿಕ್ಸರ್‌ಗಳಿದ್ದ ೩೦ ರನ್ ಸಿಡಿಸಿದ್ದ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿತು. ೨.೪ ಓವರ್‌ಗಳ `ಪವರ್ ಪ್ಲೇ’ ಕೊನೆಯಲ್ಲಿ ಭಾರತದ ಸ್ಕೋರು ೨ ವಿಕೆಟ್‌ಗಳಿಗೆ ೪೬.
೨.೫ ಓವರ್‌ಗಳಲ್ಲಿ ಭಾರತ ೫೦ರ ಮೊತ್ತ ತಲುಪುತ್ತಿದ್ದಂತೆಯೇ ಚಿನ್ನಸ್ವಾಮಿ ಸ್ಟೇಡಿಯಂ ಭಾರತಕ್ಕೆ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಅರ್ಧ ಶತಕದ ಮೊತ್ತ ತಂದಿಟ್ಟ ಕೀರ್ತಿಗೆ ಪಾತ್ರವಾಯಿತು.
ನಾಲ್ಕನೇ ಓವರಿನ ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್(೧೬, ೭ ಎಸೆತ, ೨ ಬೌಂಡರಿ, ೧ ಸಿಕ್ಸರ್) ಶಮಾರ್ ಸ್ಪಿçಂಗರ್‌ಗೆ ಬೌಲ್ಡ್ ಆದರಾದರೂ ೫ನೇ ಒವರಿನ ಕೊನೆಯಲ್ಲಿ ಭಾರತ ೩ ವಿಕೆಟ್‌ಗಳಿಗೆ ೭೩ರ ಸ್ಕೋರು ತಲುಪಿತ್ತು.
ಗುದಕೇಶ ಮೋತಿಯೇ ಬೌಲ್ ಮಾಡಿದ ೬ನೇ ಓವರಿನ ಮೊದಲ ಎಸೆತದಲ್ಲಿಯೇ ಶ್ರೇಯಸ್ ಅಯ್ಯರ್ ರನೌಟ್ ಅವಕಾಶದಿಂದ ಬಚಾವಾದ ನಂತರ ೨ ಬೌಂಡರಿ ಸಿಡಿಸಿದರು. ನಾಲ್ಕನೇ ಎಸೆತದಲ್ಲಿ ಮಿಡ್-ಆಫ್‌ನಲ್ಲಿ ಜೀವದಾನವನ್ನೂ ಪಡೆದರು. ಆ ಓವರ್ ಕೊನೆಗೆ ಭಾರತದ ಮೊತ್ತ ೩ ವಿಕೆಟ್‌ಗಳಿಗೆ ೮೮.
ಏಳನೇ ಓವರಿನ ಮೊದಲ ಎಸೆತದಲ್ಲಿ ಶ್ರೇಯಸ್ ಅಯ್ಯರ್(೨೨, ೧೪ ಎಸೆತ, ೨ ಬೌಂಡರಿ) ಕಿಮೊ ಪಾಲ್‌ಗೆ ಹುದ್ದರಿ ಒಪ್ಪಿಸಿದ ನಂತರ ಬ್ಯಾಟಿಂಗಿಗೆ ಇಳಿದ ನಮನ್ ಧಿರ್ ತಾವೆದುರಿಸಿದ ಮೊದಲ ೪ ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ೨ ಸಿಕ್ಸರ್ ಸಿಡಿಸುವುದರೊಂದಿಗೆ ಭಾರತ ೬.೪ ಓವರ್‌ಗಳಲ್ಲಿ ೧೦೦ರ ಮೊತ್ತ ದಾಟಿತು.
ಎಂಟನೇ ಓವರಿನ ೪ನೇ ಎಸೆತದಲ್ಲಿ ತಿಲಕ್ ವರ್ಮಾ(೭, ೬ ಎಸೆತ) ಶಮಾರ್ ಸ್ಪಿçಂಗರ್‌ಗೆ ಬೌಲ್ಡ್ ಆಗುತ್ತಿದ್ದಂತೆಯೇ ಬಂದ ಮಳೆ ಮುಂದಿನ ಅಟವನ್ನು ಅಸಾಧ್ಯವಾಗಿಸಿತು. ಸ್ಮರಣೀಯ ಬ್ಯಾಟಿಂಗ್ ಪ್ರದರ್ಶಿಸಿದ ನಮನ್ ಧಿರ್ ೪೦೦ರ ಅದ್ಭುತ ಸ್ಟೆçöÊಕ್ ರೇಟ್‌ನಲ್ಲಿ ತಾವೆದುರಿಸಿದ ಕೇವಲ ೬ ಎಸೆತಗಳಲ್ಲಿ ೧ ಬೌಂಡರಿ ಹಾಗೂ ೩ ಸಿಕ್ಸರ್‌ಗಳಿದ್ದ ೨೪ ರನ್ ಸಿಡಿಸಿ ಅಜೇಯರಾಗುಳಿದು ಪ್ರೇಕ್ಷಕರ ಮನಗೆದ್ದರು. ಶಮಾರ್ ಸ್ಪೀಂಗಲ್(೨/೧೭), ಕಿಮೊ ಪಾಲ್(೨/೩೪) ಹಾಗೂ ಶಮಾರ್ ಜೋಸೆಫ್(೧/೧೮) ವಿಂಡೀಸ್ ಪರ ಯಶ ಕಂಡ ಬೌಲರ್‌ಗಳು.

