ಪುಣೆಯ ಶಾಕೀರ ಖಾನ್ ಅವರಿಂದ ಸಿತಾರ ಕಾರ್ಯಾಗಾರ

ಹಂಚಿಕೊಳ್ಳಿ

ಧಾರವಾಡ
ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಇನ್ಫೋಸಿಸ್ ಫೌಂಡೇಶನ್ ಹಾಗೂ ಇನ್ಫೋಸಿಸ್ ಸಹಯೋಗದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ನ. ೦೧ ಬೆಳಿಗ್ಗೆ ೧೦.೦೦ ಗಂಟೆಗೆ ಡಾ. ದ.ರಾ. ಬೇಂದ್ರೆ ಭವನದಲ್ಲಿ “ಸಿತಾರ ಕಾರ್ಯಾಗಾರ” ಏರ್ಪಡಿಸಿದೆ.

ಕಾರ್ಯಾಗಾರವನ್ನು ಹಿರಿಯ ಹಿಂದೂಸ್ತಾನಿ ಗಾಯಕ ಹಾಗೂ ಸ್ವರಸಾಮ್ರಾಟ್ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಪಂ. ಕೈವಲ್ಯಕುಮಾರ ಗುರವ ಉದ್ಘಾಟಿಸುವರು. ಇನ್ಫೋಸಿಸ್ ಉಪಾಧ್ಯಕ್ಷ ಅಲ್ಲಭಕ್ಷ ಅಸಾದುಲ್ಲಾ, ಹಿರಿಯ ತಾಂತ್ರಿಕ ವ್ಯವಸ್ಥಾಪ ಶಿವಾನಂದ ಕೂಡ್ಲಮಠ, ರಾಘವೇಂದ್ರ ನಾಕೋಡ ಉಪಸ್ಥಿತರಿರುವರು.

ಪುಣೆಯ ಖ್ಯಾತ ಸಿತಾರ ವಾದಕ ಶಾಕೀರ್ ಖಾನ್ ಅವರು ನಡೆಸಿಕೊಡುವ ಸಿತಾರ ಕಾರ್ಯಾಗಾರದಲ್ಲಿ ರಿಯಾಜ್‌ನಲ್ಲಿ ಪರಿಣತಿಯ ತಂತ್ರಗಳು, ವಾದನದಲ್ಲಿ ವೇಗ, ಸ್ಪಷ್ಟತೆ ಮತ್ತು ನಿಖರತೆ ಬೆಳೆಸಿಕೊಳ್ಳುವುದು, ರಾಗಗಳ ವಿಸ್ತಾರ ಮತ್ತು ವಿವರವಾದ ಪರಿಚಯ, ನಿಮ್ಮದೇ ಆದ ಸಂಗೀತ ಅಭಿವ್ಯಕ್ತಿಯನ್ನು ಕಂಡುಕೊಳ್ಳುವುದು ಮತ್ತು ಅದನ್ನು ಹೇಗೆ ವಿಕಸನಗೊಳಿಸುವುದು ಎಂಬದುರ ಕುರಿತು ತಿಳಿಸುವರು. ತಬಲಾದಲ್ಲಿ ಬೆಂಗಳೂರಿನ ಪಂ.ರಾಜೇಂದ್ರ ನಾಕೋಡ ಸಾಥ್ ಸಂಗತ ನೀಡುವರು ಎಂದು ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ತಿಳಿಸಿದ್ದಾರೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *