ಶ್ರೀ ರಂಭಾಪುರಿ ಜಗದ್ಗುರುಗಳವರ ನವಂಬರ್ ಮಾಹೆಯ ಪ್ರವಾಸ

ಹಂಚಿಕೊಳ್ಳಿ

ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ 2026-ನವಂಬರ್ ಮಾಹೆಯ ಪ್ರವಾಸ ಕಾರ್ಯಕ್ರಮ ಈ ರೀತಿ ಇದೆ ಎಂದು ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ ತಿಳಿಸಿದ್ದಾರೆ.

ದಿ. 2ರಂದು ಅಜ್ಜಂಪುರ ತಾಲೂಕ ಬುಕ್ಕಾಂಬುಧಿಯಲ್ಲಿ ಕಾರ್ಜುವಳ್ಳಿ ಶ್ರೀಗಳವರ 5ನೇ ವರ್ಷದ ಜಂಗಮಾರಾಧನಾ ಪೂಜಾ ಸಮಾರಂಭ, ದಿ. 6ರಂದು ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಪ್ರಸನ್ನ ಗಣಪತಿ ಸಮಾರಂಭ, ದಿ. 7ರಂದು ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ವಾಣಿಜ್ಯ ಸಂಕೀರ್ಣ ಉದ್ಘಾಟನೆ ನೆರವೇರಿಸುವರು. ದಿ. 8ರಂದು ತೀರ್ಥಹಳ್ಳಿ ತಾಲೂಕ ಕೋಣಂದೂರಿನಲ್ಲಿ ಕೋಣಂದೂರು ಪ್ರಕಾಶ ಅವರ ಷಷ್ಠ್ಯಬ್ಧಿ ಸಮಾರಂಭ, ದಿ. 9ರಂದು ಹರಿಹರ ತಾಲೂಕ ಮಲೇಬೆನ್ನೂರಿನಲ್ಲಿ ಇಷ್ಟಲಿಂಗ ಮಹಾಪೂಜಾ ಧರ್ಮ ಸಮಾರಂಭ.

ದಿ. 11 ಮತ್ತು 12ರಂದು ಚನ್ನಗಿರಿ ತಾಲೂಕ ಬಸವಾಪುರದಲ್ಲಿ ಶ್ರೀ ಚನ್ನಬಸವೇಶ್ವರ-ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಉದ್ಘಾಟನಾ ಧರ್ಮ ಸಮಾರಂಭ, ದಿ. 14ರಂದು ಕಡೂರು ತಾಲೂಕ ಹಿರೇನಲ್ಲೂರು ಗ್ರಾಮದಲ್ಲಿ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿ. 16ರಂದು ಮಹಾರಾಷ್ಟ್ರ ರಾಜ್ಯದ ಜತ್ ತಾಲೂಕ ಮುಚ್ಚಂಡಿಯಲ್ಲಿ ಧರ್ಮ ಜಾಗೃತಿ ಸಮಾರಂಭ, ದಿ. 17ರಂದು ಅಕ್ಕಲಕೋಟ ತಾಲೂಕ ಚಪ್ಪರಗಾಂವ ವಾಡಿಯಲ್ಲಿ ಪುರ ಪ್ರವೇಶ-ಧರ್ಮ ಸಮಾರಂಭ.

ದಿ. 21ರಂದು ತರೀಕೆರೆ ತಾಲೂಕ ದೋರನಹಳ್ಳಿಯಲ್ಲಿ ಧರ್ಮ ಜಾಗೃತಿ ಸಮಾರಂಭ, ದಿ. 22ರಂದು ಬೆಂಗಳೂರಿನಲ್ಲಿ ಇಷ್ಟಲಿಂಗ ಪೂಜಾ ಧರ್ಮ ಸಮಾರಂಭ, ದಿ. 23ರಂದು ತೀರ್ಥಹಳ್ಳಿ ತಾಲೂಕ ಮಳಲಿ ಮಠದಲ್ಲಿ ಕಾರ್ತೀಕ ದೀಪೋತ್ಸವ ಸಮಾರಂಭ, ದಿ. 24ರಂದು ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಕಾರ್ತೀಕ ದೀಪೋತ್ಸವ ಹಾಗೂ ವೀರಭದ್ರಸ್ವಾಮಿ ರಥೋತ್ಸವ ಸಮಾರಂಭ, ದಿ. 26ರಂದು ರಾಣೆಬೆನ್ನೂರು ಮತ್ತು ದೇವರಬೆಳಕೆರೆ ಗ್ರಾಮಕ್ಕೆ ಭೇಟಿ, ದಿ. 27ರಂದು ಶಿವಮೊಗ್ಗ ತಾಲೂಕ ತ್ಯಾವರೆಕೊಪ್ಪದಲ್ಲಿ ಇಷ್ಟಲಿಂಗ ಪೂಜಾ-ಗುರು ಕಾರುಣ್ಯ ಉದ್ಘಾಟನೆ, ದಿ. 28ರಂದು ಹರಪನಹಳ್ಳಿಯಲ್ಲಿ ಇಷ್ಟಲಿಂಗ ಪೂಜಾ, ದಿ. 29ರಂದು ಶಿಕಾರಿಪುರ ತಾಲೂಕ ಶಿರಾಳಕೊಪ್ಪದಲ್ಲಿ ಧಾರ್ಮಿಕ ಸಮಾರಂಭ, ದಿ. 30ರಂದು ವರ್ತೂರು ಚಿಕ್ಕತಿರುಪತಿಯಲ್ಲಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸುವರು. ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಸಮಸ್ತ ಧರ್ಮಾಭಿಮಾನಿಗಳು ಪಡೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *