ನವೆಂಬರ್ ೨ ರಿಂದ ೫ರ ವರೆಗೆ ಕರ್ನಾಟಕ ಮುಂದಿನ ಪಂದ್ಯವನ್ನು ಆಸ್ಸಾಮ್ ಎದುರು ಗುವಾಹತಿಯ ಬರಸಪಾರಾದಲ್ಲಿ ಆಡಲಿದೆ.
ಮೈಸೂರು
ನಿರೀಕ್ಷಿಸಿದ್ದಂತೆ ಕರ್ನಾಟಕ ರಣಜಿ ತಂಡಕ್ಕೆ ಹೊಸ ರಣಜಿ ಋತುವಿನ ಮೊದಲ ಗೆಲುವು ದಕ್ಕಿದ್ದು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಇಲ್ಲಿಯ ಎಸ್.ಡಿ.ಎನ್.ಆರ್.ಡಬ್ಲ್ಯೂ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಗುರುವಾರ ದುರ್ಬಲ ತ್ರಿಪುರಾದ ಮೇಲೆ ಇನ್ನಿಂಗ್ಸ್ ಹಾಗೂ ೧೧೬ ರನ್ಗಳ ಗೆಲುವು ಸಂಪಾದಿಸಿದ ಕರ್ನಾಟಕ ಬೋನಸ್ ಸಹಿತ ೭ ಪಾಯಿಂಟ್ಸ್ ಸಂಪಾದಿಸಿದೆ.
ಈ ಗೆಲುವಿನೊಂದಿಗೆ ಕರ್ನಾಟಕ ಸದ್ಯ ೩ ಪಂದ್ಯಗಳಂದ ಒಟ್ಟು ೯ ಪಾಯಿಂಟ್ ಗಳಿಸಿ ಬಿ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ೪ನೇ ಸ್ಥಾನಕ್ಕೇರಿದೆ. ಹೈದರಾಬಾದ(೧೪), ಸೌರಾಷ್ಟç(೧೩) ಹಾಗೂ ಪಂಜಾಬ(೧೨) ಅನುಕ್ರಮವಾಗಿ ಮೊದಲಿನ ಮೂರು ಸ್ಥಾನಗಳಲ್ಲಿವೆ.
ಶ್ರೇಯಸ್ ಗೋಪಾಲ್ಗೆ ಫೈಫರ್:
ಕರ್ನಾಟಕದ ನಾಯಕ ಶ್ರೇಯಸ್ ಗೋಪಾಲ್ ಫೈಫರ್’ ದಾಖಲಿಸುವುದರೊಂದಿಗೆ ಪಂದ್ಯದ ಕೊನೆಯ ದಿನ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ತನ್ನ ಎರಡನೇ ಸರದಿಯಲ್ಲಿ ಒಟ್ಟು ೨೯೭ ರನ್ ಗಳಿಸಬೇಕಿದ್ದ ತ್ರಿಪುರಾ ೭೮.೧ ಓವರ್ಗಳಲ್ಲಿ ೧೮೦ಕ್ಕೆ ಆಲೌಟಾಯಿತು. ಅನುಭವಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ೬ ಮೇಡನ್ಗಳಿದ್ದ ೨೩.೧ ಓವರ್ಗಳಲ್ಲಿ ೩೬ ರನ್ಗಳನ್ನಿತ್ತು ೫ ವಿಕೆಟ್ ಕೆಡವಿದ ತ್ರಿಪುರಾ ಕುಸಿತಕ್ಕೆ ಕಾರಣರಾದರೆ, ವೈಶಾಖ್ ವಿಜಯಕುಮಾರ(೨/೩೧) ಹಾಗೂ ಮನ್ವಂತ್ ಕುಮಾರ್(೨/೪೨) ತಮ್ಮ ನಾಯಕನಿಗೆ ಸಮರ್ಥ ಬೆಂಬಲ ಒದಗಿಸಿದರು.
ಮೂರನೇ ದಿನದಾಟದ ಕೊನೆಯಲ್ಲಿ ೩ ವಿಕೆಟ್ಗಳಿಗೆ ೯೮ ರನ್ ಗಳಿಸಿದ್ದ ತ್ರಿಪುರಾ ಗುರುವಾರ ತನ್ನ ಸರದಿ ಮುಂದುವರಿಸಿ ಮತ್ತೆ ೮೨ ರನ್ ಕೂಡಿಸುವಷ್ಟರಲ್ಲಿ ಉಳಿದ ಏಳೂ ವಿಕೆಟ್ಗಳನ್ನು ಕಳೆದುಕೊಂಡಿತು. ಶ್ರೀದಮ್ ಪಾಲ್(೫೦, ೮೧ ಎಸೆತ, ೨ ಬೌಂಡರಿ, ೩ ಸಿಕ್ಸರ್) ಒಬ್ಬರೇ ಸ್ವಲ್ಪ ಪ್ರತಿರೋಧವೊಡ್ಡಿದರು. ತಮ್ಮ ಚೊಚ್ಚಲ ಪ್ರಥಮ ದರ್ಜೆ ಶತಕದೊಂದಿಗೆ ಕರ್ನಾಟಕಕ್ಕೆ ಬೃಹತ್ ಮುನ್ನಡೆ ದೊರಕಿಸಿಕೊಟ್ಟ ಅನೀಶ್ವರ ಗೌತಮ್ಪಂದ್ಯದ ಆಟಗಾರ’ನ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರುಗಳು: ತ್ರಿಪುರಾ: ೮೨ ಓವರ್ಗಳಲ್ಲಿ ೧೯೪ ಹಾಗೂ ೭೮.೧ ಓವರ್ಗಳಲ್ಲಿ ೧೮೦; ಕರ್ನಾಟಕ ೧೪೪ ಓವರ್ಗಳಲ್ಲಿ ೯ ವಿಕೆಟ್ಗಳಿಗೆ ೪೯೦ ಡಿಕ್ಲೇರ್ಡ್. ಫಲಿತಾಂಶ: ಕರ್ನಾಟಕಕ್ಕೆ ಇನ್ನಿಂಗ್ಸ್ ಹಾಗೂ ೧೧೬ ರನ್ಗಳ ಗೆಲುವು. ಪಾಯಿಂಟ್ಸ್: ಕರ್ನಾಟಕ-೭, ತ್ರಿಪುರಾ-೦. ಪಂದ್ಯದ ಆಟಗಾರ: ಅನೀಶ್ವರ ಗೌತಮ(ಕರ್ನಾಟಕ).

