ಧಾರವಾಡ: ಗುಲ್ಬರ್ಗದಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ಇಲ್ಲಿನ ಮರಾಠ ವಿದ್ಯಾ ಪ್ರಸಾರಕ ಮಂಡಳದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಪದವಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಜಾವಲಿನ್ ಥ್ರೋದಲ್ಲಿ ಸಂಗಪ್ಪ ಡಾಂಘೆ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. 10,000 ಮೀಟರ್ ಓಟದಲ್ಲಿ ರಮೇಶ ಬೆಳಿಗಟ್ಟಿ ದ್ವಿತೀಯ ಸ್ಥಾನ ಬೆಳ್ಳಿ ಹಾಗೂ 3,000 ಮೀಟರ್ ಸ್ಪೀಪಲ್ ಚೇಸ್‌ನಲ್ಲಿ ತೃತೀಯ ಸ್ಥಾನ (ಕಂಚಿನ ಪದಕ) ಗಳಿಸಿದ್ದಾರೆ.
ಸೌಜನ್ಯ ಪೂಜಾರ್ 5,000 ಮೀಟರ್ ಓಟದಲ್ಲಿ ದ್ವಿತೀಯ (ಬೆಳ್ಳಿ ಪದಕ) ಹಾಗೂ 10,000 ಮೀಟರ್ ಓಟದಲ್ಲಿ ತೃತೀಯ ಸ್ಥಾನ (ಕಂಚಿನ ಪದಕ) ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಸಾಧಕ ಕ್ರೀಡಾಪಟುಗಳಿಗೆ ಮರಾಠ ಮಂಡಳದ ಅಧ್ಯಕ್ಷ ಎಂ.ಎನ್.ಮೋರೆ, ಉಪಾಧ್ಯಕ್ಷ ಪ್ರಕಾಶ ಘಾಟಿಗೆ, ಕಾರ್ಯಾಧ್ಯಕ್ಷ ಮಹೇಶ ಶಿಂದೆ, ಗೌರವ ಕಾರ್ಯದರ್ಶಿ ವಿಠ್ಠಲ ಪಾಟೀಲ, ಸಹ ಕಾರ್ಯದರ್ಶಿ ಈಶ್ವರ ಪಾಟೀಲ, ಕಾಲೇಜು ಸುಧಾರಣಾ ಸಮಿತಿಯ ಮುಖ್ಯಸ್ಥ ನವೀನ ಕದಂ, ನಿರ್ದೇಶಕರು, ಪ್ರಾಚಾರ್ಯರು, ಉಪನ್ಯಾಸಕರು, ದೈಹಿಕ ಶಿಕ್ಷಣ ನಿರ್ದೇಶಕರು, ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
