ಇಂದಿನ ಮಕ್ಕಳೇ ಭವಿಷ್ಯತ್ತಿನ ಆಶಾಕಿರಣಗಳು: ರಂಭಾಪುರಿ ಶ್ರೀ

ಹಂಚಿಕೊಳ್ಳಿ

ಬಾಳೆಹೊನ್ನೂರು
ಸಜ್ಜನ ಸತ್ಪುರುಷರ ಸಂಗಮದಲ್ಲಿ ಬೆಳೆದು ಬಂದಾಗ ಬದುಕು ಉಜ್ವಲಗೊಳ್ಳುವುದು. ಧಾರ್ಮಿಕ ಮೌಲ್ಯಗಳ ಪುನರುತ್ಥಾನ ಮತ್ತು ಪರಿಪಾಲನೆಯಿಂದ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶ್ರೀ ಜಗದ್ಗುರು ರಂಭಾಪುರಿ ಪೀಠದ ಶಾಲಾ ಆವರಣದಲ್ಲಿ ಬಿಸಿಯೂಟದ ಅಡುಗೆ ಮನೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಇಂದು ಬೆಳೆಯುವ ಮಕ್ಕಳೇ ಭವಿಷ್ಯತ್ತಿನ ಆಶಾ ಕಿರಣಗಳು. ಬಾಲ್ಯದಲ್ಲಿ ಮಕ್ಕಳಿಗೆ ದೊರಕುವ ಸಂಸ್ಕಾರ ಶಿಕ್ಷಣಗಳು ಅವರ ಮುಂದಿನ ಜೀವನಕ್ಕೆ ಭದ್ರ ಬುನಾದಿಗಳಾಗಿವೆ ಎಂದರು.

ಬಿಸಿಯೂಟದ ಅಡುಗೆ ಮನೆ ಉದ್ಘಾಟಿಸಿದ ಮಾಜಿ ಸಚಿವ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಶ್ರೀ ರಂಭಾಪುರಿ ಜಗದ್ಗುರುಗಳವರ ಕ್ರಿಯಾಶೀಲತೆಯಿಂದಾಗಿ ಶ್ರೀ ರಂಭಾಪುರಿ ಪೀಠ ದಿನ ದಿನಕ್ಕೆ ಅಭಿವೃದ್ದಿ ಹೊಂದುತ್ತಿದೆ. ಅವರ ನಿರಂತರ ಪ್ರವಾಸದಲ್ಲಿಯೂ ಶ್ರೀ ಪೀಠದ ಅಭಿವೃದ್ಧಿಯ ಕಡೆಗೆ ಗಮನ ಹರಿಸಿ ಕಾರ್ಯ ನಿರ್ವಹಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೆಂದರು.

ಈ ಸಂದರ್ಭದಲ್ಲಿ ಹುಡುಗಿ ಸೋಮೇಶ್ವರ ಶಿವಾಚಾರ್ಯರು, ಗೊಲ್ಲಾಳಪ್ಪಗೌಡ ಪಾಟೀಲ, ಗಂಗಾಧರಯ್ಯ, ರೇಣುಕಸ್ವಾಮಿ, ಚಂದ್ರಶೇಖರ್, ವೀರೇಶ ಕುಲಕರ್ಣಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇದಕ್ಕೂ ಪೂರ್ವದಲ್ಲಿ ಸಿ.ಸಿ. ಪಾಟೀಲರು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಭೇಟಿ ಮಾಡಿ ದರ್ಶನಾಶೀರ್ವಾದ ಪಡೆದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *