ಧಾರವಾಡ
ಹೊಸ ಋತುವಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಕಾರವಾರ ಹುಡುಗ’ ಆಫ್-ಸ್ಪಿನ್ನಿಂಗ್ ಆಲ್ರೌಂಡರ್ ರಿತೇಶ್ ಭಟ್ಕಳ್ ಕೊನೆಗೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಉತ್ಕಷ್ಟ ಪ್ರದರ್ಶನ ನೀಡುತ್ತಾ ಬಂದಿದ್ದರೂ ಆಯ್ಕೆದಾರರ ಅವಕೃಪೆಗೆ ಒಳಗಾಗಿದ್ದ ರಿತೇಶ ಭಟ್ಕಳ್ ಅವರಿಗೆ ಕೊನೆಗೂ ಹಸಿರು ನಿಶಾನೆ ದೊರಕಿದೆ.
ಕಾರವಾರದಲ್ಲಿ ಹುಟ್ಟಿ ಬೆಳೆದ ರಿತೇಶ, ತಮ್ಮ ಕ್ರಿಕೆಟ್ ಜೀವನ ಆರಂಭಿಸಿದ್ದು ಧಾರವಾಡದ ವಸಂತ ಮುರ್ಡೆಶ್ವರ ಕ್ರಿಕೆಟ್ ಅಕಾಡೆಮಿ(ವಿ.ಎಂ.ಸಿ.ಎ.)ಯಿಂದ ಎನ್ನುವುದು ಗಮನಾರ್ಹ.
೧೪, ೧೬ ಹಾಗೂ ೧೯ ವಯೋಮಿತಿ ಕ್ರಿಕೆಟ್ಟನ್ನು ಧಾರವಾಡದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ(ಸಿ,ಸಿ,ಕೆ,) ಪರ ಆಡಿದ ಅವರು ನಂತರ ಪಿ.ಯು. ಶಿಕ್ಷಣಕ್ಕಾಗಿ ಮಂಗಳೂರಿಗೆ ತೆರಳಿದರು. ಪ್ರಸಕ್ತ ವರ್ಷದ ಮಹಾರಾಜಾ ಟ್ರಾಫಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ ರಿತೇಶ್ ಭಟ್ಕಳ್ ಅವರು ನಂತರದ ಡಾ. ಕೆ. ತಿಮ್ಮಪ್ಪಯ್ಯ ಸ್ಮಾರಕ ಅಖಿಲ ಭಾರತ ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ಗಳೆರಡರಲ್ಲೂ ಉತ್ಕೃಷ್ಟ ಪ್ರದರ್ಶನ ನೀಡಿದ್ದು ಅವರ ಆಯ್ಕೆ ಸಾಧ್ಯವಾಗಿಸಿತು.
ಇದೇ ದಿನಾಂಕ ೧೧ರಿಂದ ೧೪ರವರೆಗೆ ವಿಜಯವಾಡಾದಲ್ಲಿ ಆಂಧ್ರಪ್ರದೇಶದ ಎದುರು ನಡೆಯಲಿರುವ ಮೊದಲ ರಣಜಿ ಪಂದ್ಯಕ್ಕಾಗಿ ೧೫ ಸದಸ್ಯರ ತಂಡವನ್ನು ಕೆ.ಎಸ್.ಸಿ.ಎ. ಅಧ್ಯಕ್ಷ ಬಿ.ಕೆ. ವೆಂಕಟೇಶ ಪ್ರಸಾದ ಗುರುವಾರ ಪ್ರಕಟಿಸಿದ್ದು ಅದು ಇಂತಿದೆ:
ಸ್ಮರಣ್ ಆರ್.(ನಾಯಕ), ಮಯಾಂಕ ಅಗರ್ವಾಲ್, ಕೆ.ಎಲ್. ರಾಹುಲ್, ಅನೀಶ್ವರ ಗೌತಮ್, ಕರುಣ ನಾಯರ್, ಅನೀಶ್ ಕೆ.ವಿ. ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ(ವಿಕೆಟ್ ಕೀಪರ್), ಶಿಖರ ಶೆಟ್ಟಿ, ಪ್ರಸಿದ್ಧ ಎಂ. ಕೃಷ್ಣ, ಅಭಿಲಾಷ್ ಶೆಟ್ಟಿ, ಮನ್ವಂತ್ಕುಮಾರ್ ಎಲ್., ಕುಮಾರ ಎಲ್.ಆರ್., ರಿತೇಶ್ ಭಟ್ಕಳ್ ಹಾಗೂ ಶ್ರೀಜಿತ್ ಕೆ.ಎಲ್.(ವಿಕೆಟ್ ಕೀಪರ್). ಮಾಜಿ ರಣಜಿ ನಾಯಕ ಆರ್. ವಿನಯ ಕುಮಾರ ತಂಡದ ಮುಖ್ಯ ಕೋಚ್ ಆಗಿದ್ದು, ಉಳಿದಸಪೋರ್ಟ್ ಸ್ಟಾಫ್’ ಇಂತಿದೆ: ದೀಪಕ್ ಚೌಗುಲೆ(ಸಹಾಯಕ ಕೋಚ್, ಕೆನರಾ ಬ್ಯಾಂಕ್), ಎಸ್. ಬಾಬು(ಮ್ಯಾನೇಜರ್), ಜಾಬಾ ಪ್ರಭು(ಫೀಸಿಯೊಥೆರಪಿಸ್ಟ್), ಕೆ.ಸಿ. ಅವಿನಾಶ(ಸ್ಟೆçಂಗ್ಥ್ ಆ್ಯಂಡ್ ಕಂಡೀಷನಿAಗ ಕೋಚ್), ಗಿರಿ ಪ್ರಸಾದ(ಪರ್ಫಾಮನ್ಸ ಅನಾಲಿಸ್ಟ್), ಅಶೋಕ ವಿ.(ಸೈಡ್ ಆರ್ಮ್ ಸ್ಪೆಷಲಿಸ್ಟ್), ಸೋಮಸುಂದರ ಸಿ.ಎಂ. ಹಾಗೂ ಸಾಗರ ಎ.ಎಂ.(ಮಸೂರ್ಸ್).

