ಮಳೆಯ ಕೊರತೆ; ಬತ್ತಿರುವ ಕೃಷಿ ಹೊಂಡಗಳು
ಧಾರವಾಡ: ಮಳೆ ಕೈಕೊಟ್ಟ ಪರಿಣಾಮ ಧಾರವಾಡ ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಮಳೆನೀರನ್ನು ಸಂಗ್ರಹಿಸಿ ಬೆಳೆಗಳಿಗೆ ಬಳಸಿಕೊಳ್ಳುವ ಉದ್ದೇಶದಿಂದ ನಿರ್ಮಿಸಲಾಗಿರುವ ಕೃಷಿ ಹೊಂಡಗಳಲ್ಲಿಯೂ ನೀರಿನ ಮಟ್ಟ ಕುಸಿದಿದ್ದು, ಹಲವು ಹೊಂಡಗಳು ಸಂಪೂರ್ಣವಾಗಿ ಬತ್ತಿಹೋಗಿರುವ ದೃಶ್ಯ ಕಂಡುಬರುತ್ತಿದೆ. ಧಾರವಾಡ ತಾಲೂಕಿನ ತಲವಾಯಿ ಗ್ರಾಮದ ಸಮೀಪದ ಕೃಷಿ ಪ್ರದೇಶದಲ್ಲಿ ಕೃಷಿ ಹೊಂಡವೊಂದು ನೀರಿಲ್ಲದೆ ಒಣಗಿ ಹೋಗಿರುವುದು ರೈತರ ಸಂಕಷ್ಟವನ್ನು ಎತ್ತಿ ತೋರಿಸುತ್ತಿದೆ. ಹೊಂಡದಲ್ಲಿ ನೀರಿನ ಬದಲು ಒಣ ಮಣ್ಣು, ಕಳೆಗಿಡಗಳು ಕಾಣಿಸುತ್ತಿದ್ದು, ಮಳೆಯ ನಿರೀಕ್ಷೆಯಲ್ಲೇ…
