ನ್ಯೂಯಾರ್ಕ್: ಕಜಾಕಿಸ್ತಾನದ ಎಲೆನಾ ರಿಬಾಕಿನಾ ಸೋಮವಾರ ಪ್ರಕಟವಾಗಿರುವ ಡಬ್ಲೂö್ಯಟಿಎ ನೂತನ ರ‍್ಯಾಂಕಿಂಗ್ ಪಟ್ಟಿಯನ್ವಯ ಒಟ್ಟು ೯.೯೦೧ ಪಾಯಿಂಟ್‌ಗಳೊಡನೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
೯೯ ವಾರಗಳ ಕಾಲ ಅಗ್ರಸ್ಥಾನದಲ್ಲಿದ್ದ ಬೆಲಾರಸ್‌ನ ಅರಿನಾ ಸಬಲೆಂಕಾ ೭,೮೭೫ ಪಾಯಿಂಟ್‌ಗಳೊಂದಿಗೆ ಎರಡನೇಯವರಾದರೆ, ಅಮೇರಿಕದ ಜಸ್ಸಿಕಾ ಪೆಗುಲಾ(೭,೨೬೫ ಪಾಯಿಂಟ್) ಹಾಗೂ ಕೊಕೊ ಗಾಫ್(೭,೨೪೪ ಪಾಯಿಂಟ್) ಅನುಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿದ್ದಾರೆ.
ರಷ್ಯದ ಯುವ ಪತ್ರಿಭೆ ಮರ‍್ರಾ ಅಂದ್ರೀವಾ(೫,೭೪೩), ಜೆಕ್ ಗಣರಾಜ್ಯದ ಲಿಂಡಾ ನೊಸ್ಕೋವಾ(೫,೩೨೮) ಹಾಗೂ ಉಕ್ರೇನಿನ ಎಲಿನಾ ಸ್ವಿಟೊಲಿನಾ(೪,೮೦೯) ಅನುಕ್ರಮವಾಗಿ ೫ ರಿಂದ ೭ನೇ ಸ್ಥಾನಗಳನ್ನು ಹಂಚಿಕೊAಡಿದ್ದಾರೆ. ಜೆಕ್ ಆಟಗಾರ್ತಿ ಕ್ಯಾರೋಲಿನಾ ಮುಖೋವಾ(೪,೬೮೩) ೮ನೇ ಸ್ಥಾನದಲ್ಲಿದ್ದರೆ, ಮಾಜಿ ವಿಶ್ವ ನಂ.೧ ಪೋಲೆಂಡಿನ ಇಗಾ ಶ್ವಾಂಟೆಕ್ ೪,೬೧೯ ಪಾಯಿಂಟ್‌ಗಳೊಡನೆ ಒಂಭತ್ತನೇ ಸ್ಥಾನಕ್ಕೆ ಕುಸಿದು ಅಚ್ಚರಿ ಮೂಡಿಸಿದ್ದಾರೆ. ಉಕ್ರೇನಿನ ಮಾತಾ ಕೊಸ್ತುö್ಯಕ್(೩,೯೮೦) `ಟಾಪ್-೧೦’ನ ಕೊನೆಯ ಸ್ಥಾನದಲ್ಲಿದ್ದಾರೆ.
