ಎ.ಐ.ಟಿ.ಎ. ಜ್ಯೂನಿಯರ್ ಟೆನಿಸ್: ಅನ್ವಿ, ಲೂಸಿಕಾ ಸೆಮಿಫೈನಲ್‌ಗೆ
ಹಂಚಿಕೊಳ್ಳಿಧಾರವಾಡಸ್ಥಳೀಯ ಪ್ರತಿಭೆಗಳಾದ ಅನ್ವಿ ಹೊಂಡಪ್ಪನವರ ಹಾಗೂ ಲೂಸಿಕಾ ಬಂಡಿಕೇರಿ ಇಲ್ಲಿ ನಡೆದಿರುವ ಆಲ್-ಇಂಡಿಯಾ ಟೆನಿಸ್ ಅಸೋಸಿಯೇಷನ್(ಎ.ಐ.ಟಿ.ಎ.) ಚಾಂಪಿಯನ್‌ಷಿಪ್ ಸಿರೀಸ್-೭(ಸಿ.ಎಸ್.೭) ಟೂರ್ನಿಯಲ್ಲಿ ೧೪ ವರ್ಷದವರೊಳಗಿನ ಬಾಲಕಿಯರ ಸಿಂಗಲ್ಸ್ ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ. ಇಲ್ಲಿಯ ರಾಜಾಧ್ಯಕ್ಷ ಪೆವಿಲಿಯನ್‌ನಲ್ಲಿ ಬುಧವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ನಗರದ ಪವನ ಆಂಗ್ಲ ಮಾಧ್ಯಮ ಶಾಲೆಯ ೬ನೇ ತರಗತಿಯ ವಿದ್ಯಾರ್ಥಿನಿ ಅನ್ವಿ ಅಭಿಷೇಕ ಹೊಂಡಪ್ಪನವರ ಇನ್ನೋರ್ವ ಪ್ರತಿಭಾನ್ವಿತ ಆಟಗಾರ್ತಿ ಹುಬ್ಬಳ್ಳಿಯ ಶ್ರೀ ವಿದ್ಯಾ ರಾಘವೇಂದ್ರ ಆಂಗ್ಲ ಮಾಧ್ಯಮ ಶಾಲೆಯ ೮ನೇ ತರಗತಿಯಲ್ಲಿ ಓದುತ್ತಿರುವ ರಿತಿಷಾ ಬರಡೂರ ಎದುರು…
